Shubhashaya News

ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿ

ಯಲಬುರ್ಗಾ: ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬ ನಾಗರಿಕರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮುಂದಾಗಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರಭದ್ರಗೌಡ ಮೂಲಿಮನಿ ಹೇಳಿದರು.
ತಾಲೂಕಿನ ಗೆದಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಾನಾ ಗ್ರಾಮಗಳಲ್ಲಿ ಕೋವಿಡ್-19 ಕೊರೊನಾ ವೈರಸ್ ಹಿನ್ನೆಲೆ ಜಾಗೃತಿ ಮೂಡಿಸಿ ಮಂಗಳವಾರ ಮಾತನಾಡಿದರು.
ಈಗಾಗಲೇ 2ನೇ ಹಂತದ ಕೊರೊನಾ ವೈರಸ್ ಅಲೆ ಶುರುವಾಗಿದ್ದು,ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಮುಂಜಾಗೃತ ಕ್ರಮ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಸಾರ್ವಜನಿಕರು ಚಾಚು ತಪ್ಪದೇ ಲಸಿಕಾ ಹಾಕಿಸಿಕೊಳ್ಳಬೇಕು. ಪಂಚಾಯತಿ ಕೇಂದ್ರದಲ್ಲಿ ಆರೋಗ್ಯ ಇಲಾಖೆಯಿಂದ ಲಸಿಕೆ ನೀಡುತ್ತಿದ್ದು, ಸರಕಾರದ ನಿಯಮವನ್ನು ಪಾಲಿಸಬೇಕು ಎಂದು ತಿಳಿಸಿದರು.
ಈ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶರಣಪ್ಪ ನಾಗೂರ, ಫಕೀರವ್ವ ನಡುಲಮನಿ, ಹನುಮಗೌಡ ಕೋಳಿಹಾಳ, ಶರಣಪ್ಪ ಬತ್ತಿ, ಆರೋಗ್ಯ ಇಲಾಖೆ ಕಿರಿಯ ಸಹಾಯಕಿ ಶ್ರೀದೇವಿ ತೋಟದ್,ಆಶಾ ಕಾರ್ಯಕರ್ತೆಯರಾದ ಭಾಗ್ಯ ಗೊಲ್ಲಾರ್,ಜಯಶ್ರೀ ಕುರ್ನಾಳ,ಗ್ರಾಮ ಪಂಚಾಯಿತಿ ಸಿಬ್ಬಂದಿ ಕಳಕಯ್ಯ ಹಿರೇಮಠ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave A Reply

Your email address will not be published.