ಆಳಂದ: ಕೆರೂರ ಗ್ರಾಮದಲ್ಲಿ ಬುದ್ಧ, ಬಸವ ಮತ್ತು ಡಾ. ಅಂಬೇಡ್ಕರ್ ಅವರ ಜಯಂತಿ ಕುರಿತು ಸುದ್ದಿಗೋಷ್ಠಿಯಲ್ಲಿ ಗು.ವಿವಿ ಸಿಂಡಿಕೇಟ್ ಸದಸ್ಯ ಎಸ್.ಪಿ. ಸುಳ್ಳದ, ನ್ಯಾಯವಾದಿ ಬಸಣ್ಣ ಸಿಂಗೆ, ಬಸವಲಿಂಗಪ್ಪ ಗಾಯಕವಾಡ, ದಯಾನಂದ ಶೇರಿಕಾರ, ಮೌಲಾ ಮುಲ್ಲಾ, ದೇವಿಂದ್ರ ಶೆಳ್ಳಗಿ ಪ್ರಚಾರ ಕಾರ್ಡ್ ಬಿಡುಗಡೆಗೊಳಿಸಿದರು.
ಆಳಂದ: ಕೆರೂರ ಗ್ರಾಮದಲ್ಲಿ ಭೀಮ ತರುಣ ಸಂಘದ ಆಶ್ರಯದಲ್ಲಿ ಸಮಾಜ ಜಾಗೃತಿ, ಸಮಾನತೆ ಹಾಗೂ ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿ ಏ.೨೯ರಿಂದ ಎರಡು ದಿನಗಳ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ನಡೆಯಲಿವೆ.
ಈಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಮದವರಾದ ಕಲಬುರಗಿ ವಿವಿ ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ, ನ್ಯಾಯವಾದಿ ಬಸಣ್ಣ ಸಿಂಗೆ ಅವರು ವಿವರಣೆ ನೀಡಿದರು.
ಮಹಾತ್ಮಾ ಗೌತಮ ಬುದ್ಧ–೨೫೬೮, ಬಸವ–೮೯೩ ಹಾಗೂ ಅಂಬೇಡ್ಕರ್ ಅವರ ೧೩೫ನೇ ಜಯಂತಿ ಜೊತೆಗೆ ಥೈಲ್ಯಾಂಡ್‌ದಿAದ ತರಿಸಲಾದ ಗೌತಮ ಬುದ್ಧರ ಐದು ಅಡಿ ಕಂಚಿನ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಭವನದ ಉದ್ಘಾಟನೆ ಏಪ್ರಿಲ್ ೨೯ ಮತ್ತು ೩೦ ರಂದು ಜರುಗಲಿದೆ ಎಂದರು.
ಏಪ್ರಿಲ್ ೨೯ರಂದು ಬೆಳಿಗ್ಗೆ ತೊಟ್ಟಿಲು ಕಾರ್ಯಕ್ರಮದ ಪೂಜೆಯನ್ನು ಬೀರಣ್ಣ ಕಡಗಂಚಿ ನೆರವೇರಿಸಲಿದ್ದು, ಬಳಿಕ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಹಾಗೂ ಮಾಲಾರ್ಪಣೆಯಲ್ಲಿ ರಾಹುಲ್ ಪಾಟೀಲ, ಗುಂಡಪ್ಪ ಉದ್ದನಶೆಟ್ಟಿ, ಕಲ್ಯಾಣಿ ಬ್ಯಾಗೆಳ್ಳಿ, ಸದಾಶಿವ ಮೂಲಗೆ ಭಾಗವಹಿಸಲಿದ್ದಾರೆ. ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅಕ್ಕನ ಬಳಗದಿಂದ ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತಿದ್ದು, ನಂತರ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.
ಏಪ್ರಿಲ್ ೩೦ರಂದು ಬೆಳಗಿನ ೮:೩೦ಕ್ಕೆ ನೀಲಿ ಮತ್ತು ಪಂಚಶೀಲ ಧ್ವಜಾರೋಹಣವನ್ನು ಜೈಭೀಮ ತರುಣ ಸಂಘದ ಪ್ರಮುಖರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ ೫:೩೦ಕ್ಕೆ ಶಾಸಕ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅವರಿಂದ ಡಾ. ಅಂಬೇಡ್ಕರ್ ಭವನ ಉದ್ಘಾಟನೆ ನಡೆಯಲಿದೆ. ಇದೇ ವೇಳೆ ಬಂತೇ ಧಮ್ಮನಾಗ (ಬುದ್ಧವಿಹಾರ, ಹತ್ಯಾಳ – ಬಸವಕಲ್ಯಾಣ) ಅವರಿಂದ ಗೌತಮ ಬುದ್ಧರ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಜರುಗಲಿದೆ. ನಂತರ ಮೆರವಣಿಗೆ ಪಿಎಸ್‌ಐ ಮಹಾಂತೇಶ ಪಾಟೀಲ ಉದ್ಘಾಟಿಸಲಿದ್ದಾರೆ.
ಸಂಜೆ ೬:೦೦ಕ್ಕೆ ನಡೆಯುವ ಭಾರಿ ಬಹಿರಂಗ ಸಭೆಯಲ್ಲಿ ಸಿ.ಎಸ್. ಮಲ್ಲಿಕಾರ್ಜುನ ಶಾಸ್ತ್ರಿಗಳು ಸಾನಿಧ್ಯ ವಹಿಸಲಿದ್ದು, ನ್ಯಾಯವಾದಿ ಬಸಣ್ಣ ಸಿಂಗೆ ಉದ್ಘಾಟಿಸಲಿದ್ದಾರೆ. ಎಸ್.ಪಿ. ಸುಳ್ಳದ್ ಅಧ್ಯಕ್ಷತೆ, ಪ್ರೊ. ಹೆಚ್.ಟಿ. ಪೋತೆ, ರಮೇಶ ಸಫಳೆ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಸದಸಂ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ, ಸುರೇಶ ಶರ್ಮಾ, ತಹಸೀಲ್ದಾರ ಅಣ್ಣಾರಾವ ಪಾಟೀಲ, ಇಒ ಮಾನಪ್ಪ ಕಟ್ಟಿಮನಿ, ಎಇಇ ಸಂಗಮೇಶ ಚಿರಾದಾರ, ಮಹಾನಗರ ಪಾಲಿಕೆ ವಲಯ ಆಯುಕ್ತ ಗೌತಮ ಕಾಂಬಳೆ, ಬಿ.ಆರ್. ಬುದ್ದಾ, ಶರಣಬಸಪ್ಪ ಕೋಡ್ಲಾ, ಜಗದೀಶ ಕೆ.ಜಿ., ಜಗನ್ನಾಥ ಶೇಗಜಿ ಧಂಗಾಪೂರ, ರಾಜಶೇಖರ ಯಂಕAಚಿ, ಮಲ್ಲಿನಾಥ ಪಾಟೀಲ, ಸಿದ್ದರಾಮ ಪ್ಯಾಟಿ, ಶೆಳ್ಳಗಿ ದೇವೇಂದ್ರ, ಅಶೋಕ ಅಂಬಲಗಿ, ದಯಾನಂದ ಶೇರಿಕಾರ, ಶಿವಲಿಂಗಪ್ಪ ಯಳಮೇಲಿ, ಎ.ಬಿ. ಹೊಸಮನಿ, ಪ್ರೊ. ಜೀವಣಗಿ ಅಂಬಣ್ಣ, ಯಶ್ವಂತ ಶಿಂಧೆ, ಲಕ್ಷ್ಮಿಕಾಂತ ಹುಬಳಿ, ಪ್ರಕಾಶ ಮೂಲಭಾರತಿ, ಬಸಲಿಂಗಪ್ಪ ಗಾಯಕವಾಡ, ದತ್ತಾತ್ರೇಯ ಇಕ್ಕಳಕಿ, ಆನಂದ ಗಾಯಕವಾಡ, ರವಿ ಮದನಕರ್, ಸಿದ್ಧಾರ್ಥ ಅನಸಿರೆ, ದತ್ತಾತ್ರೇಯ ಕುಡಕಿ, ಸುರೇಶ ಹಾದಿಮನಿ, ಮಹಾದೇವ ಮೋಘಾ, ಅಣ್ಣಪ್ಪ ಹಾದಿಮನಿ, ಶೇಖಪ್ಪ ಶಂಕು, ಅಣ್ಣಾ ಸಾಹೇಬ್ ಅಂಜುಟಗಿ, ಗುರುನಾಥ ಸೊನ್ನದ್, ಅರ್ಜುನ ಭದ್ರೆ, ಬಿ.ಸಿ. ವಾಲಿ, ಹೆಚ್. ಶಂಕರ, ದತ್ತಾ ಕಟ್ಟಿಮನಿ, ರಾಜಕುಮಾರ ಸಿಂಗೆ ಹಾಗೂ ಶಾಂತಮಲ್ಲಪ್ಪ ಶಿವಯೋಗೆಪ್ಪ ಆಗಮಿಸುವರು ಹೆಚ್ಚಿನ ಸಂಖ್ಯೆಯಲ್ಲಿ ಕೆರೂರ ಸೇರಿ ನೆರೆ ಹೊರೆಯ ಗ್ರಾಮಗಳ ಸಾರ್ವಜನಿಕರು ಪಾಳ್ಗೊಳ್ಳಬೇಕು ಎಂದು ಎಸ್.ಪಿ.ಸುಳ್ಳದ ಮತ್ತು ಬಸಣ್ಣ ಸಿಂಗೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ದಯಾನಂದ ಶೇರಿಕಾರ, ಬಸವಲಿಂಗಪ್ಪ ಗಾಯಕವಾಡ, ದೇವಿಂದ್ರಪ್ಪ ಶೆಳ್ಳಗಿ, ರೈತ ಮುಖಂಡ ಮೌಲಾ ಮುಲ್ಲಾ, ಬಾಬುರಾವ್ ಸುಳ್ಳದ, ಸುರೇಶ ಕೊಕಾಟೆ, ಶಿವಾನಂದ ಮೇಲ್ಕೇರಿ, ನಾಗೇಂದ್ರ ಚೆನ್ನಗುಂಡಿ ಇತರರು ಇದ್ದರು.
Comments are closed.