ಆಳಂದ: ಡಾ. ಅಂಬೇಡ್ಕರ್ ಜನ್ಮದಿನಾಚರಣೆ ಸವಿ ನೆನಪಿಗಾಗಿ ಸಾಮಾಜಿಕ ಕಾರ್ಯಕರ್ತ ಸನ್ಮಾನಖಾನ್ ನಗರ ಅವರು ಸಮಾನತೆ ಮತ್ತು ವ್ಯಸನ್ ಮುಕ್ತ ಸಮಾಜಕ್ಕಾಗಿ ಪಟ್ಟಣದಿಂದ ತಡಕಲ್ ಗ್ರಾಮಕ್ಕೆ ಓಟವನ್ನು ಕೈಗೊಂಡು ಗಮನ ಸೆಳೆದರು.
ಆಳಂದ: ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ, ಸಮಾನತೆ ಮತ್ತು ವ್ಯಸನ ಮುಕ್ತ ಸಮಾಜ ನಿರ್ಮಾಣದ ಸಂದೇಶವನ್ನು ಹರಡುವ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತ ಸಲ್ಮಾನ್ ಖಾನ್ ನಗರ್ ಅವರು ವಿಶಿಷ್ಟ ಓಟದ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಆಳಂದ ಪಟ್ಟಣದಿಂದ ತಡಕಲ್ ಗ್ರಾಮದವರೆಗೆ ಆರಂಭವಾದ ಈ ಓಟವು ಒಟ್ಟು 150 ಗ್ರಾಮಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಈ ಅಭಿಯಾನದ ಮೂಲಕ ಯುವಜನತೆಗೆ ವ್ಯಸನಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಸಮಾನತೆಯ ಮೌಲ್ಯಗಳನ್ನು ಬಿತ್ತುವ ಉದ್ದೇಶವನ್ನು ಸಲ್ಮಾನ್ ಖಾನ್ ಹೊಂದಿದ್ದಾರೆ.
ಓಟದ ಮೂಲಕ ಹಂತ ಹಂತವಾಗಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಓಟಕ್ಕೆ ಆಳಂದದಲ್ಲಿ ಚಾಲನೆ ನೀಡಿದ ಸುಜಾತಾ ಪಿ.ಎನ್. ಶಹಾ ಅವರು ಮಾತನಾಡಿ, “ಸಮಾಜದಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯ. ಯುವಕರು ಇಂತಹ ಅಭಿಯಾನಗಳಲ್ಲಿ ಭಾಗವಹಿಸುವುದು ಪ್ರಶಂಸನೀಯ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದಾರ್ಥ್, ಪ್ರಮೋದ್ ಪಾಂಚಾಳ್, ಪಂಡಿತ್ ಸಲಗರ, ಕಿಣಿಬಾಸ್, ಇರ್ಫಾನ್ ಸಾಬ್ ಸೇರಿದಂತೆ ಹಲವರು ಓಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ಸಲ್ಮಾನ್ ಖಾನ್ ನಗರ್ ಅವರ ಈ ಪ್ರಯತ್ನವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿ ಮಾಡಿಕೊಡುವ ನಿರೀಕ್ಷೆ ವ್ಯಕ್ತವಾಗಿದ್ದು, ವ್ಯಸನ ಮುಕ್ತ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಇಂತಹ ಅಭಿಯಾನಗಳು ಪ್ರೇರಣೆಯಾಗುತ್ತವೆ ಎಂದು ಹಾಜರಿದ್ದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
Comments are closed.