Shubhashaya News

ಆಳಂದ: ಸಿಯುಕೆ ಕಾನೂನು ವಿಭಾಗದಿಂದ ಆಯೋಜಿಸಿದ್ದ ಮೂಟ್‍ಕೋರ್ಟ್ ಸ್ಫರ್ದೆಯಲ್ಲಿವಿಜೇತ ವಿದ್ಯಾರ್ಥಿಗಳಿಗೆ ನ್ಯಾಯಾಧೀಶ ಟಿ. ಎನ್. ಇನವಳ್ಳಿ, ಪಿ. ಕೃಷ್ಣ ಭಟ್ ಹಾಗೂ ಕಡ್ಲೂರು ಸತ್ಯನಾರಾಯಣಾಚಾರ್ಯ ಅವರು ಬಹುಮಾನ ಪ್ರಶಸ್ತಿಗಳನ್ನು ವಿತರಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಮೂಟ್ ಕೋರ್ಟ್ ಸ್ಪರ್ಧೆ – 2026 ಯಶಸ್ವಿ
ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗವು 2026ರ ಏಪ್ರಿಲ್ 11ರಂದು ರಾಷ್ಟ್ರೀಯ ಮೂಟ್
ಕೋರ್ಟ್ ಸ್ಪರ್ಧೆ – 2026ನ್ನು ಯಶಸ್ವಿಯಾಗಿ ನಡೆಯಿತು.
ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ 14 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಪ್ರಾಥಮಿಕ ಹಾಗೂ ಕ್ವಾರ್ಟರ್ ಫೈನಲ್ ಹಂತಗಳನ್ನು ಆನ್‍ಲೈನ್ ಮೂಲಕ ನಡೆಸಲಾಗಿದ್ದು, ಸೆಮಿಫೈನಲ್ ಮತ್ತು ಫೈನಲ್
ಹಂತಗಳು ವಿಶ್ವವಿದ್ಯಾಲಯದ ಮೂಟ್ ಕೋರ್ಟ್ ಹಾಲ್‍ನಲ್ಲಿ ನಡೆಯಿತು.
ಸೆಮಿಫೈನಲ್ ಹಂತದಲ್ಲಿ ನಾಲ್ಕು ತಂಡಗಳು ನಾಕ್‍ಔಟ್ ಆಧಾರದಲ್ಲಿ ಸ್ಪರ್ಧಿಸಿವೆ.
ಅಂತಿಮ ಸುತ್ತಿಗೆ ನ್ಯಾಯಮೂರ್ತಿಗಳಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಟಿ. ಎನ್. ಇನವಳ್ಳಿ, ನಿವೃತ್ತ ನ್ಯಾಯಮೂರ್ತಿ
ಪಿ. ಕೃಷ್ಣ ಭಟ್ ಹಾಗೂ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಡ್ಲೂರು ಸತ್ಯನಾರಾಯಣಾಚಾರ್ಯ ಅವರು
ಕಾರ್ಯನಿರ್ವಹಿಸಿದರು.
ಸಮಾರೋಪ ಸಮಾರಂಭದಲ್ಲಿ ನ್ಯಾಯಮೂರ್ತಿ ಟಿ. ಎನ್. ಇನವಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನ್ಯಾಯಮೂರ್ತಿ ಪಿ.
ಕೃಷ್ಣ ಭಟ್ ಮತ್ತು ಕಡ್ಲೂರು ಸತ್ಯನಾರಾಯಣಾಚಾರ್ಯ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾನೂನು ವಿಭಾಗದ ಮುಖ್ಯಸ್ಥರಾದ ಡಾ. ಅನಂತ ಡಿ. ಚಿಂಚೂರೇ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಗಳಾದ ನ್ಯಾಯಮೂರ್ತಿ ಟಿ. ಎನ್. ಇನವಳ್ಳಿ ಅವರು ಮಾತನಾಡಿ ವಕೀಲ ವೃತ್ತಿಯಲ್ಲಿ ನಿμÉ್ಠ ಅತ್ಯಂತ ಮುಖ್ಯ
ಗುಣವೆಂದು ತಿಳಿಸಿದರು.
ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರು ಮಾತನಾಡಿ ವಕೀಲ ಮತ್ತು ಅಡ್ವೊಕೇಟ್ ನಡುವಿನ ವ್ಯತ್ಯಾಸವನ್ನು ವಿವರಿಸಿ, ಪ್ರಕರಣದ
ವಾಸ್ತವಾಂಶಗಳು, ಕಾನೂನು ಮತ್ತು ನ್ಯಾಯಾಧೀಶರ ಮನೋಭಾವವನ್ನು ಅರ್ಥಮಾಡಿಕೊಳ್ಳುವ ಮಹತ್ವ ಕುರಿತು ಹೇಳಿದರು
ಈ ಸ್ಪರ್ಧೆಯಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ಕಾನೂನು ಕಾಲೇಜು ಪ್ರಥಮ ಬಹುಮಾನ (ರೂ. 30,000/- ಮತ್ತು ಟ್ರೋಫಿ)
ಪಡೆದುಕೊಂಡಿದ್ದು, ಐಸಿಎಫ್‍ಎಐ ಲಾ ಕಾಲೇಜು,ಹೈದರಾಬಾದ್ ದ್ವಿತೀಯ ಬಹುಮಾನ (ರೂ. 20,000/- ಮತ್ತು ಟ್ರೋಫಿ)
ಪಡೆದಿದೆ.
ಈ ಕಾರ್ಯಕ್ರಮದ ಯಶಸ್ಸಿಗೆ ವಿವಿ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ, ಕುಲಸಚಿವರಾದ ಪೆÇ್ರ. ಆರ್. ಆರ್. ಬಿರಾದಾರ್
ಹಾಗೂ ವಿವಿಯ ಕಾನೂನು ಅಧ್ಯಯನದ ಡೀನ್ ಪೆÇ್ರ. ಬಸವರಾಜ ಎಂ. ಕುಬಕಡ್ಡಿ ಅವರ ಬೆಂಬಲ ಮಹತ್ವದ್ದಾಗಿತ್ತು.
ಈ ಸ್ಪರ್ಧೆಯು ಕಾನೂನು ವಿದ್ಯಾರ್ಥಿಗಳಿಗೆ ತಮ್ಮ ವಾದ ಮಂಡಿಸುವ ಕೌಶಲ್ಯ, ಕಾನೂನು ಜ್ಞಾನ ಹಾಗೂ ಸಂಶೋಧನಾ
ಸಾಮಥ್ರ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿತ್ತು ಎಂದು ವಿವಿಯ ಕಾನೂನು ವಿಭಾಗ ತಿಳಿಸಿದೆ.

Comments are closed.

Don`t copy text!