ಆಳಂದ: ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗ್ರಾಪಂ ಅಧಿಕಾರಿಗಳ ಸಭೆಯಲ್ಲಿ ಸಿಇಒ ಭಂವರಸಿಂಗ್ ಮೀನಾ ಮಾತನಾಡಿದರು. ಇಒ ಮಾನಪ್ಪ ಕಟ್ಟಿಮನಿ, ಸಂಗಮೇಶ ಬಿರಾದಾರ ಇತರರು ಇದ್ದರು.
ಆಳಂದ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಒಟ್ಟು 1.90 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲು ಟೆಂಡರ್ ಪ್ರಕ್ರಿಯೆಯಲ್ಲಿದೆ ಈ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್ ಮೀನಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪಟ್ಟಣದ ತಾಪಂ ಕಚೇರಿಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಭೆ ನಡೆಸಿ ಅವರು ಮಾತನಾಡಿದರು. ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬಳಿ, ಹೊದಲೂರರ, ತಡೋಳಾ, ಅಂಬಲಗಾ, ಕೊರಳ್ಳಿ, ಜಿಡಗಾ, ಸರಸಾಂಬ, ನಿಂಬರರ್ಗಾ ಹಾಗೂ ಬೆಳಮಗಿ ಗ್ರಾಮಗಳಲ್ಲಿ ಬೋರ್‍ವೆಲ್ ತೋಡುವುದು, ಮುಖ್ಯ ಪೈಪ್‍ಲೈನ್ ಅಳವಡಿಕೆ, ಮೋಟಾರ್ ವ್ಯವಸ್ಥೆ ಮತ್ತು ಜೆಸ್ಕಾಂ ಸಂಪರ್ಕ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಆಯ್ಕೆಯಾದ ಪ್ರತಿ ಗ್ರಾಮಕ್ಕೆ 15 ಲಕ್ಷದಿಂದ 50 ಲಕ್ಷ ರೂಪಾಯಿರೆಗೆ ಅನುದಾನ ನಿಗದಿಯಾಗಿದ್ದು, ನಿಂಬರಗಾ ಗ್ರಾಮದಲ್ಲಿ ಓಪನ್‍ವೆಲ್ ಮತ್ತು ಓವರ್‍ಹೆಡ್ ಟ್ಯಾಂಕ್ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಇದರ ಮಧ್ಯೆ, ಸಿಇಒ ಭವಾರಸಿಂಗ್ ಮೀನಾ ಅವರು ಆಳಂದ ತಾಲೂಕಿನ ಆಲೂರ ವೈಜಾಪೂರ, ಕಡಗಂಚಿ, ಕಾತ್ರಾಬಾದ್, ಸಾವಳೇಶ್ವರ, ಕಾಮನಳ್ಳಿ, ಸರಸಂಬಾ, ತಡಕಲ್ ಹಾಗೂ ಹಾಳ ತಡಕಲ್ ಗ್ರಾಮ ಪಂಚಾಯತ್‍ಗಳಿಗೆ ಹಠಾತ್ ಭೇಟಿ ನೀಡಿ ನೀರು ಸರಬರಾಜು ವ್ಯವಸ್ಥೆಯ ಪರಿಶೀಲನೆ ನಡೆಸಿದರು. ಕೊಳವೆ ಬಾವಿ ಮತ್ತು ತೆರೆದ ಬಾವಿಗಳ ಸ್ಥಿತಿಯನ್ನು ಪರಿಶೀಲಿಸಿದ ಅವರು, ಬೇಸಿಗೆ ಸಂದರ್ಭದಲ್ಲಿ ನೀರಿನ ವ್ಯತ್ಯಯ ಉಂಟಾಗದಂತೆ ಮುಂಚಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಗಳಲ್ಲಿ ನೀರಿನ ಕೊರತೆ ಕಂಡುಬಂದಲ್ಲಿ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಬೇಕು. ಅಗತ್ಯವಿದ್ದರೆ ಖಾಸಗಿ ಮೂಲಗಳಿಂದ ಬಾಡಿಗೆ ಆಧಾರದ ಮೇಲೆ ನೀರು ಪೂರೈಸಲು ಹಿಂದೇಟು ಹಾಕಬಾರದು. ಒಂದೊಮ್ಮೆ ನೀರಿನ ಮೂಲವೇ ಸಂಪೂರ್ಣವಾಗಿ ಒಣಗಿ ಹೋಗಿದ್ದರೆ ಜಿಪಂನಿಂದ ಟ್ಯಾಂಕ್ ನೀಡಲಾಗುವುದು ಎಂದು ಸ್ಪಷ್ಟ ನಿರ್ದೇಶನ ನೀಡಿದರು. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ನೀರು ಪೂರೈಕೆ ವ್ಯವಸ್ಥೆಯನ್ನು ಸುಧಾರಿಸಲು ಒತ್ತಾಯಿಸಿದರು.
ವಾರದ ಹಿಂದೆ ಪರಿಶೀಲನೆ ನಡೆಸಿದ ಬಳಿಕ ಮತ್ತೊಂದು ಗ್ರಾಮಗಳಿಗೆ ಮತ್ತೊಮ್ಮೆ ಭೇಟಿ ನೀಡಿದ ಸಿಇಒ, ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿದರು. ನಿರ್ಲಕ್ಷ್ಯ ತೋರಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಂತರ ತಾಪಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬೇಸಿಗೆ ನೀರಿನ ಸಮಸ್ಯೆ ನಿವಾರಣೆ, ಕರ ವಸೂಲಾತಿ ಹಾಗೂ ವಿವಿಧ ಯೋಜನೆಗಳ ಅನುμÁ್ಠನದ ಬಗ್ಗೆ ಮಾಹಿತಿ ಪಡೆದರು.
ಕಡಗಂಚಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ವಿಶೇಷ ಗಮನ ಹರಿಸಲು ಪಿಡಿಒ ಉμÁ ಪಾಟೀಲ ಅವರಿಗೆ ಸೂಚನೆ ನೀಡಿದ ಅವರು, ಸಮಸ್ಯೆ ಎದುರಾದರೆ ತಕ್ಷಣ ಖಾಸಗಿ ಮೂಲಗಳಿಂದ ನೀರು ಪೂರೈಸುವಂತೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಮಾನಪ್ಪ ಕಟ್ಟಿಮನಿ, ಗ್ರಾಮೀಣ ನೀರು ಸರಬರಾಜು ವಿಭಾಗದ ಎಇಇ ಸಂಗಮೇಶ ಬಿರಾದಾರ, ಜಿಲ್ಲಾ ರೇμÉ್ಮ ಅಧಿಕಾರಿ ಪ್ರಕಾಶ ಬಾಬು, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ತಾಲೂಕು ನೋಡಲ್ ಅಧಿಕಾರಿ ಸಂತೋಷ ಇನಾಮದಾರ ಹಾಗೂ ಹಿರಿಯ ಸಹಾಯಕ ನಿರ್ದೇಶಕ ಸುರೇಂದ್ರನಾಥ ಹೊನ್ನಪಗೊಳ, ಪಂಚಾಯತರಾಜ ಎಡಿ ವಿಶ್ವನಾಥ, ನರೇಗಾ ಎಡಿ ಪುರಾಣಿಕ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯಲ್ಲಿ ಪಿಡಿಒ ರಾಮದಾಸ್ ಪೂಜಾರಿ, ಶಿವಾನಂದ ಮಾನಿಂಗ, ಲಕ್ಷ್ಮಣ ಪೂಜಾರಿ, ಗುರುನಾಥ ಹರಿದಾಸ್, ರಾಚಣ್ಣಾ, ಬಸವರಾಜ ಮಲಶೆಟ್ಟಿ, ಶ್ರೀದೇವಿ ದಣ್ಣೂರ, ಶೇಖರ ಶಂಕು, ವಿನೋಧ ಇನ್ನಿತರರು ಮಾಹಿತಿ ಒದಗಿಸಿದರು.
Comments are closed.