ಆಳಂದ: ನಿರಗುಡಿ ಗ್ರಾಮದ ಹೊರವಲಯದ ಶ್ರೀ ಸಿದ್ಧೇಶ್ವರ ಜಾತ್ರೆ ಅಂಗವಾಗಿ ಶ್ರೀ ಸಿದ್ಧೇಶ್ವರ ಲಿಂಗದ ವಿಶೇಷ ಪೂಜೆ ನಡೆಯಿತು.
ಆಳಂದ್: ತಾಲೂಕಿನ ನಿರಗುಡಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದೇಶ್ವರ (ಸಿದ್ದಯ್ಯಪ್ಪಾ) ಜಾತ್ರಾ ಮಹೋತ್ಸವ ಮಾರ್ಚ್ 31, ಏ. 6ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಭಕ್ತಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 31 ಶ್ರೀ ಸಿದ್ದೇಶ್ವರ ಲಿಂಗಕ್ಕೆ ಹಾಗೂ ಕರ್ತೃ ಗದ್ದುಗೆಗೆ ರುದ್ರಾಭಿμÉೀಕ ಮತ್ತು ಗಂಧ ಲೇಪನ ನಡೆಯಲಿದೆ. ಏ. 1ರಂದು ಊರಿನ ದೇವಾಲಯದಲ್ಲಿ ಬಂಡಯ್ಯಾ ಶಾಸ್ತ್ರೀಗಳು (ಸಂಸ್ಥಾನ ಹಿರೇಮಠ, ಸುಂಟನೂರು) ಅವರಿಂದ ಪ್ರವಚನ. ಸಂಗೀತದಲ್ಲಿ ಕಲ್ಯಾಣಕುಮಾರ್ (ತಬಲಾ) ಮತ್ತು ಬಸವರಾಜ್ ಚಲಗೇರಾ ಪಾಲ್ಗೊಳ್ಳುವರು. ರಾತ್ರಿ ಪ್ರವಚನದ ನಂತರ ಊರಿನ ಕಲಾವಿದರಿಂದ ಭಜನೆ. ಸಂಜೆ 7 ಗಂಟೆಗೆ ದೇವಾಲಯ ಮತ್ತು ದೇಶಮುಖರ ಮನೆಯಿಂದ ಶ್ರೀ ಸಿದ್ದೇಶ್ವರ ಪಲ್ಲಕ್ಕಿ ಮೆರವಣಿಗೆ ಭಜನೆ, ಡೊಳ್ಳು, ನಂದಿಕೋಲು, ಸಕಲ ವಾದ್ಯಗಳು ಮತ್ತು ಕೈಕೋಲು ದೀಪಗಳೊಂದಿಗೆ ನಡೆಯಲಿದೆ.
ಏ. 2 ರಂದು ರಾತ್ರಿ 8 ಗಂಟೆಗೆ ಭಜನೆ ಕಾರ್ಯಕ್ರಮ. ಏ. 3ರಂದು ಪಡಸಾವಳಿ ಡೋಣಗಾಂವ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು ಮತ್ತು ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು (ವಿರಕ್ತಮಠ, ಮಾದನಹಿಪ್ಪರಗಾ) ಸಮ್ಮುಖದಲ್ಲಿ ನಾಗರಹೆಡೆ ಮೆರವಣಿಗೆ ಹಾಗೂ ಮೂರ್ತಿ ಪ್ರತಿμÁ್ಠಪನೆ ನಡೆಯಲಿದೆ. ಅಲ್ಲದೆ, ಗ್ರಾಮದ ಮದುವೆಯಾಗಿ ಹೋಗಿರುವ ಗ್ರಾಮದ ಹೆಣ್ಣುಮಕ್ಕಳು ನೀಡಿರುವ ದೇಣಿಗೆಯಲ್ಲಿ ತಯಾರಾದ ನಾಗರಹೆಡೆ ಮತ್ತು ಬೆಳ್ಳಿ ಮೂರ್ತಿಗಳನ್ನು ಶ್ರೀಗಳವರ ಸಮ್ಮುಖದಲ್ಲಿ ಉಡಿ ತುಂಬುವ ವಿಶೇಷ ಕಾರ್ಯಕ್ರಮ ಜರುಗಲಿದೆ.
ಏ. 4 ರಾತ್ರಿ 8 ಗಂಟೆಗೆ ಭಜನೆ, ಏ. 5: ನಸುಕಿನ ಜಾವದಲ್ಲಿ ಗ್ರಾಮದ ಭಕ್ತಾಧಿಗಳಿಂದ ನಿರಗುಡಿ ಗ್ರಾಮದಿಂದ ಹಳ್ಳದ ಶ್ರೀ ಸಿದ್ದೇಶ್ವರ ದೇವಾಲಯದವರೆಗೆ ಧೀರ್ಘ ದಂಡವತ್ (ಶಿರಸಾμÁ್ಟಂಗ) ಮೆರವಣಿಗೆ. ರಾತ್ರಿ 8 ಗಂಟೆಗೆ ಊರಿನ ದೇವಾಲಯದ ಮುಂದೆ ಗೀಗೀ ಪದಗಳು, ರಾತ್ರಿ 12 ಗಂಟೆಗೆ ಸಭೀಣಿಯ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಪ್ರಯಾಣ. ನಸುಕಿನ ಜಾವ 3 ಗಂಟೆಗೆ ಸರದೀಪ ಮಹೋತ್ಸವ ಅರಗುವುದು. ನಂತರ ಮಕ್ಕಳ ಜಡೆ ತೆಗೆಯುವ ಕಾರ್ಯಕ್ರಮ. ಏ.6ರಂದು ಬೆಳಿಗ್ಗೆ ಶ್ರೀ ಸಿದ್ದೇಶ್ವರ ಪಲ್ಲಕ್ಕಿ ಸಕಲ ವಾದ್ಯ ಪ್ರಭವಗಳೊಂದಿಗೆ ಗ್ರಾಮಕ್ಕೆ ಪ್ರವೇಶ ಸಂಜೆ 5:00 ಗಂಟೆಗೆ ಜಂಗಿ ಕುಸ್ತಿಗಳು, ರಾತ್ರಿ 7:00 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ. ನಂತರ ಮಹಾ ಮಂಗಲಗೊಳ್ಳುವುದು. ಎಂದು ಈ ಜಾತ್ರಾ ಮಹೋತ್ಸವವನ್ನು ಶ್ರೀ ಸಿದ್ಧೇಶ್ವರ ಟ್ರಸ್ಟ್ ಕಮಿಟಿ, ನಿರಗುಡಿ ಹಾಗೂ ಗ್ರಾಮದ ಸಕಲ ಸದ್ಭಕ್ತ ಮಂಡಳಿ ಸಂಯೋಜಿಸಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಆಹ್ವಾನಿಸಲಾಗಿದೆ.
Comments are closed.