Shubhashaya News

ಲಾಡಚಿಂಚೋಳಿ ಜಗದಂಬಾದೇವಿ, ಸೇವಾಲಾಲ್ ಮಹಾರಾಜರ ಜಾತ್ರಾ ಮಹೋತ್ಸವ ಧರ್ಮಸಭೆ ಸಿದ್ಧತೆ ಆರಂಭ

ಆಳಂದ: ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿನ ಡೋಗಿ ಬನದ ಬಳಿಯ ಲಾಡ ಚಿಂಚೋಳಿ ತಾಂಡಾ ಶ್ರೀ ದೇವಿಸೇವಾ ರಾಮಘಡ ಶಕ್ತಿಪೀಠದಲ್ಲಿ ಏ. 9ರಂದು ಶ್ರೀ ಜಗದಂಬಾ ದೇವಿ ಹಾಗೂ ಸಂತ ಸೇವಾಲಾಲ್ ಮಹಾರಾಜರ 10ನೇ ವರ್ಷದ ಜಾತ್ರಾ ಮಹೋತ್ಸವ, ಅಗ್ನಿ ಮಹೋತ್ಸವ ಮತ್ತು ಧರ್ಮಸ¨ ಕಾರ್ಯಕ್ರಮ ಸಿದ್ಧತೆ ನಡೆದಿದೆ ಎಂದು ಶಕ್ಯಿ ಪೀಠದ ಸುನೀಲ ಮಹಾರಾಜ್ ಅವರು ತಿಳಿಸಿದರು.

ಈ ಕುರಿತು ಪ್ರಕಟಣೆ ನೀಡಿರುವ ಶ್ರೀಗಳು, ತಮ್ಮ ನೇತೃತ್ವದಲ್ಲಿ ನಡೆಯುವ ಈ ಮಹೋತ್ಸವದಲ್ಲಿ ಬೆಳಗಿನ ಏ. 9ರಂದು 11:30 ಗಂಟೆಗೆ ಧರ್ಮಸಭೆ ನಡೆಯಲಿದೆ. ಈ ಸಭೆಗೆ ಪೌರದೇವಿಯ ತೀರ್ಥಕ್ಷೇತ್ರದ ಶ್ರೀ ಬಾಬು ಸಿಂಗ್ ಮಹಾರಾಜರು ಸಾನಿಧ್ಯ ವಹಿಸುವರು.
ಧರ್ಮಸಭೆಯಲ್ಲಿ ಜೈ ಭಾರತ ಮಾತಾ ರಾಷ್ಟ್ರೀಯ ಸಂಸ್ಥಾಪಕ ಶ್ರೀ ಹವಾ ಮಲ್ಲಿನಾಥ ಮಹಾರಾಜರು, ಸೊನ್ನಲಗಿರಿಯ ಪರ್ವತಲಿಂಗ ಪರಶುರಾಮ ಮಹಾರಾಜ್, ಮುಗುಳನಾಗಾವಿಯ ಜೇಮಸಿಂಗ್ ಮಹಾರಾಜ್, ಲಿಂಗಸೂರ ವಿಜಯ ಮಹಾಂತೇಶ್ವರ ಶಾಖಾ ಮಠದ ಸಿದ್ದಲಿಂಗ ಸ್ವಾಮೀಜಿ, ಗೊಬ್ಬರವಾಡಿಯ ಶ್ರೀ ಬಳಿರಾಮ ಮಹಾರಾಜ್, ಕೆಸರಟಗಿಯ ಮಾತೋಶ್ರೀ ಲತಾದೇವಿ, ಚೌಡಾಪೂರದ ಮುರಾಹರಿ ಮಹಾರಾಜ್, ಚಿಕ್ಕನಗಾಂವ್ ಅಗ್ನಿ ಪರ್ವತಗಿರಿಯ ಲೋಕೇಶ್ ಮಹಾರಾಜ್, ಕೊರವಿ ಕಾಳಿಕಾ ದೇವಿ ಶಕ್ತಿಪೀಠದ ವಿಠಲ್ ಮಹಾರಾಜ್, ಮಡಿಕಿ ತಾಂಡಾದ ಓಂ ನಾಗಲಿಂಗೇಶ್ವರ ಮಠದ ಶಂಕರ್ ಮಹಾರಾಜ್, ಗೊಬ್ಬರವಾಡಿ ತಾಂಡಾದ ಸುರೇಶ್ ಮಹಾರಾಜ್, ಕಮಲಾನಗರ ಸವಿತಾ ಯಾಡಿ, ಹೆಬಳಿ ತಾಂಡಾದ ಸೋಮಲಿಂಗ್ ಮಹಾರಾಜ್, ಮಹಾರಾಷ್ಟ್ರದ ಮೈನಿ ಶಿವಶಾಂತ್ ಮಹಾರಾಜ್, ಬಳಬಟ್ಟಿ ತಾಂಡದ ಶಿವರಾಮ ಮಹಾರಾಜ್ ಸೇರಿದಂತೆ ಹಲವು ಗುರುವರ್ಯರು ಆಗಮಿಸಿ ಭಕ್ತರಿಗೆ ದರ್ಶನ ಮತ್ತು ಆಶೀರ್ವಾದ ನೀಡಲಿದ್ದಾರೆ ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಸರ್ವರು ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಶಾಸಕ ಬಿ.ಆರ್. ಪಾಟೀಲ್ ಅವರು ಧರ್ಮಸಭೆಯ ಅಧ್ಯಕ್ಷತೆ ವಹಿಸುವರು. ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಜ್ಯೋತಿ ಬೆಳಗಿಸುವರು. ಮಾಜಿ ಶಾಸಕ ಸುಭಾμï ಗುತ್ತೇದಾರ್ ಮತ್ತು ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಶಕ್ತಿಪೀಠದ ದಿಲೀಪ್ ಮಹಾರಾಜರ ಫೆÇೀಟೋ ಪೂಜೆ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಡಾ. ಉಮೇಶ್ ಜಾಧವ್, ಕೆಪಿಸಿಸಿ ಉಪಾಧ್ಯಕ್ಷ ಸುಭಾμï ಠಾಠೋಡ., ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ್, ಕನಿರಾಮ ರಾಥೋಡ್, ಗುರುಶರಣ ಪಾಟೀಲ್, ಪಿಎಸ್‍ಐ ಸಿದ್ದರಾಮ ನಿಂಬರಗಿ, ಗ್ರಾಪಂ ಮಾಜಿ ಅಧ್ಯಕ್ಷ ಬಸಲಿಂಗಯ್ಯ ಮಠಪತಿ, ಬಂಜಾರ ಸಮಾಜದ ಕೆ.ಟಿ. ರಾಠೋಡ್, ಪಿ.ಜಿ. ರಾಥೋಡ್, ಸಂಜಯ್ ನಾಯಕ್, ಸುಭಾμï ಪವಾರ್, ಬಂಜಾರ ಕ್ರಾಂತಿ ದಳ ಅಧ್ಯಕ್ಷ ರಾಜು ಚೌಹಾಣ್, ಗಂಗಾರಾಮ್ ಪವಾರ್, ಶಿವರಾಜ್ ಎಲ್. ರಾಟೋಡ್, ಸೀತಾರಾಮ್ ರಾಠೋಡ್,ಸುಭಾಷ ಫೌಜಿ ಸೇರಿದಂತೆ ಬಂಜಾರ ಸಮಾಜದ ಹಾಗೂ ಬಂಜಾರಾ ಸಮಾಜದ ಅನೇಕ ಗಣ್ಯರು ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ವಿವಿಧ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ವಿಧಾನಗಳು ಜರಗಲಿವೆ. “ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಗುರುವರ್ಯರ ದರ್ಶನ ಪಡೆದು ಆಶೀರ್ವಾದ ಪಡೆಯಬೇಕು” ಎಂದು ಮಹಾರಾಜರು ಆಹ್ವಾನಿಸಿದ್ದಾರೆ.

Comments are closed.

Don`t copy text!