ಆಳಂದ: ಏ.2ರಂದು ನಡೆಯುವ ಪಟ್ಟಣದ ಗ್ರಾಮ ದೇವತ ಶ್ರೀ ಹನುಮಾನ ಮಹಾರಥೋತ್ಸವ ಜಾತ್ರೆ ವಾಲಪೋಸ್ಟರ್ ಭಕ್ತಾದಿಗಳು ಬಿಡುಗಡೆಗೊಳಿಸಿದರು.
ಆಳಂದ: ಪಟ್ಟಣದ ಗ್ರಾಮ ದೇವತ ಶ್ರೀ ಹನುಮಾನ ದೇವಸ್ಥಾನದ ಶ್ರೀ ಹನುಮಾನ ದೇವರ ಜಯಂತಿ ನಿಮಿತ್ತ 95ನೇ ಮಹಾರಥೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅದ್ಧೂರಿಯಾಗಿ ಸಾಗಿಸಲು ಭರದ ಸಿದ್ಧತೆ ನಡೆದಿದೆ.
ಈ ಕುರಿತು ಜಾತ್ರಾ ಉತ್ಸವ ಸಿದ್ಧತೆಯ ಕುರಿತು ದೇವಸ್ಥಾನ ಭಕ್ತಾದಿಗಳ ಪರ ಶ್ರೀಶೈಲ ಪಾಟೀಲ ಮತ್ತು ಮಹಾಂತೇಶ ಬಿ.ಡೋಳ್ಳೆ ಅವರು ಜಾತ್ರಾ ವಾಲಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಅವರು ತಿಳಿಸಿದರು.
ಈಗಾಗಲೇ ದೇವಸ್ಥಾನದಲ್ಲಿ ಮಾ.26ರಿಂದ ಏ2ರವರೆಗೆ ಅಖಂಡ ನಾಮ ಸಪ್ತಾಹ ನಡೆಯಲಿದೆ. ಪ್ರತಿ ರಾತ್ರಿ 9:00 ಗಂಟೆಗೆ ಸ್ಕ್ರೀನ್ ಪರದೆಯ ಮೂಲಕ ರಾಮಾಯಣ ದರ್ಶನಂ ಪೌರಾಣಿಕ ಕಲೆ ಪ್ರದರ್ಶನ ಎಂದಿನಂತೆ ಸಾಗಿದೆ ಎಂದು ಹೇಳಿದರು.
ಏ. 2ರಂದು ರಂದು ಪ್ರಾತಃಕಾಲ 5:30 ಗಂಟೆಗೆ ಬಾಲ ಹನುಮಾನ ತೊಟ್ಟಲು ಕಾರ್ಯಕ್ರಮ ಹಾಗೂ ಶ್ರೀ ಹನುಮಾನ ಜನ್ಮೋತ್ಸವ ನಡೆಯಲಿದೆ. ಮಧ್ಯಾಹ್ನ 1:30 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಂದಿಕೋಲ, ಕುಂಭ ಹಾಗೂ ಪಲ್ಲಕ್ಕಿ ಮೆರವಣಿಗೆ, ಡೊಳ್ಳು ಕುಣಿತ, ಚೆಂಡೆ ಕುಣಿತ, ನವಿಲು ಕುಣಿತ ಮತ್ತು ಬಾಜ ಭಜಂತ್ರಿಯೊಂದಿಗೆ ವಿಶೇಷ ಮೆರವಣಿಗೆ ಸಾಗಿ ದೇವಸ್ಥಾನಕ್ಕೆ ತಲುಪಲಿದೆ. ಸಂಜೆ 6 ಗಂಟೆಗೆ ಮಹಾರಥೋತ್ಸವ ನಡೆಯಲಿದೆ.
ಏ.2ಹಾಗೂ 3ರಂದು ಶರಣಬಸಪ್ಪ ಕೆ. ಮಾಸ್ತರ್, ಹರದೇಶಿ ಗೀಗೀ ಮೇಳ ನದಿಸಿನ್ನೂರ ಮತ್ತು ರೇಣುಕಾಬಾಯಿ ತಂಡದ ಫಕೀರಪ್ಪ ಐವಳೆ ನಾಗೇಶಿ ಅವರಿಂದ ಗೀಗೀ ಪದಗಳು ನಡೆಯಲಿವೆ ಎಂದು ಹೇಳಿದರು.
ಏ.2ರಂದು ಆಳಂದನ ಯುವ ತರುಣ ಮಂಡಳಿ ಕೈಗೊಂಡ ಅಣ್ಣನ ಅರಮನೆ (ಉತ್ತರ ಕರ್ನಾಟಕದ ಹುಲಿ) ಹಾಗೂ 3ರಂದು ಮಾನವರ ಮನೆತನದಲ್ಲಿ (ಋಣ ತೀರಿಸಿದ ರುದ್ರ), ಏ.4 ರಂದು ಅಣ್ಣನ ಅರಮನೆ ನಾಟಕ ಪ್ರದರ್ಶನ ನಡೆಯಲಿದೆ.
ಏ.3 ರಂದು ಸಂಜೆ 4 ಗಂಟೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಿಂದ ಆಗಮಿಸುವ ಜಂಗಿ ಪೈಲ್ವಾನರ ಕುಸ್ತಿಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ.
ಏ.5 ರಂದು ಬಸವರಾಜ ಗಂಗನಳ್ಳಿ, ಸಿಂದಗಿ ಅವರ ಸಾರಥ್ಯದ ‘ರೇಣುಕಾ ಯಲ್ಲಮ್ಮ’ ಪೌರಾಣಿಕ ನಾಟಕ ಪ್ರತಿವರ್ಷದಂತೆ ಪ್ರದರ್ಶನವಾಗುವುದು ಎಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದರ್ಶನಾಶೀರ್ವಾದ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನೀತರಾಗಬೇಕು ಎಂದು ಕಮೀಟಿಯ ಅಧ್ಯಕ್ಷ ಡಾ. ಯೋಗೇಶ ದೇಶಾಪಾಂಡೆ ನೇತೃತ್ವದಲ್ಲಿ ಹಿರಿಯ ಮುಖಂಡ ಬಾಬುರಾವ್ ಬನಶೆಟ್ಟಿ, ಶ್ರೀಶೈಲ ಪಾಟೀಲ, ದತ್ತರಾಜ ಕುಂಬಾರ, ಶ್ರೀಶೈಲ ಖಜೂರಿ, ದಿನೇಶ ಪಾಟೀಲ, ಸಂತೋಷ ಕುಂಬಾರ, ಸಂತೋಷ ಪಾಟೀಲ, ಬಸವರಾಜ ಪಾಟೀಲ, ರಾಜು ಪಾಟೀಲ, ಉಮೇಶ ಕುಂಬಾರ, ಮಹಾದೇವ ಕೆ. ಪೋದ್ದಾರ, ವಿವೇಕಾನಂದ ಹತ್ತಿ, ಶಿವಕಾಂತಯ್ಯ ಸ್ವಾಮಿ ಹೆಬಳಿ ಸೇರಿದಂತೆ ಕಮೀಟಿಯ ಪ್ರಮುಖರು ಭಕ್ತಾದಿಗಳು ಜಂಟಿಯಾಗಿ ಮನವಿ ಮಾಡಿದರು.
Comments are closed.