Shubhashaya News

ರಸ್ತೆ ಮಧ್ಯಭಾಗದಿಂದ ತಲಾ 20 ಅಡಿ ವಿಸ್ತರಣೆ, ಗೊಂದಲ ಬೇಡ

ಆಳಂದ: ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಹಿನ್ನೆಲೆ ಶನಿವಾರವೂ ಸ್ವಯಂ ಪ್ರೇರಿತವಾಗಿ ಹಳೆಯ ತಹಸೀಲ್ ಬಳಿಯ ಅಂಗಡಿ ಮುಗ್ಗಂಟುಗಳು ತೆರವು ಕೈಗೊಳ್ಳಲಾಯಿತು.

579 ಆಸ್ತಿ ಸಂಖ್ಯೆಗಳ ಪೈಕಿ 90ರಷ್ಟು ವಿಚಾರಣೆ ಪೂರ್ಣ: ಪುರಸಭೆ ಮೂಲಗಳ ಸ್ಪಷ್ಟನೆ
ಆಳಂದ: ಪಟ್ಟಣಲ್ಲಿ ಬುಧವಾರ ಸಾಂಕೇತಿಕವಾಗಿ ರಸ್ತೆ ಅಗಲೀಕರಣ ಆರಂಭಿಸಿ ಜ. 5ರವರೆಗೆ ಸ್ವಯಂ ತೆರವುಗೊಳಿಸಿಕೊಳ್ಳಲು ಆಡಳಿತ ನೀಡಿದ ಅವಕಾಶ ಮಧ್ಯಯೂ ಅಂಗಡಿ ಮುಗ್ಗಂಟುಗಳು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವ ಕಾರ್ಯ ಶನಿವಾರ ನಾಲ್ಕನೇ ದಿನವೂ ಮುಂದುವರೆದಿದೆ.
ಈ ನಡುವೆ ಪುರಸಭೆ ಆಡಳಿತ ಮೂಲಗಳು ಜನರ ಗೊಂದಲ ನಿವಾರಣೆಗೆ ಸ್ಪಷ್ಪನೆ ನೀಡಿದೆ.
ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣದ ವಿಷಯದಲ್ಲಿ ಯಾವುದೇ ಗೊಂದಲವಿಲ್ಲದೆ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ ಎಂದು ಆಳಂದ ಪುರಸಭೆ ಆಡಳಿತ ಮೂಲಗಳು ಸ್ಪಷ್ಟನೆ ನೀಡಿವೆ.
ಮುಖ್ಯರಸ್ತೆ ಅಗಲೀಕರಣ ವ್ಯಾಪ್ತಿಯಲ್ಲಿ ಒಟ್ಟು 579 ಆಸ್ತಿ ಸಂಖ್ಯೆಗಳಿದ್ದು, ಈಗಾಗಲೇ ಮೂರು ಹಂತದ ನೋಟಿಸ್‍ಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದೆ.
ಈ ಪೈಕಿ 144 ಮಂದಿ ಆಸ್ತಿ ಮಾಲೀಕರು ನೋಟಿಸ್‍ಗೆ ಉತ್ತರ ನೀಡಿ ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಸಲ್ಲಿಸಲಾದ ಪ್ರಕರಣಗಳಲ್ಲಿ ಸುಮಾರು 80 ಶೇಕಡಾ ಆಸ್ತಿ ಸಂಖ್ಯೆಗಳ ಕುರಿತು ವಿಚಾರಣೆ (ಹೇರಿಂಗ್) ಪೂರ್ಣಗೊಂಡಿದ್ದು, ವಿಚಾರಣೆಯಲ್ಲಿ ಭಾಗವಹಿಸಿದ ಎಲ್ಲರೂ ರಸ್ತೆ ಅಗಲೀಕರಣಕ್ಕಾಗಿ ತೆರವಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಪುರಸಭೆ ಮೂಲಗಳು ತಿಳಿಸಿವೆ.
ಈಗಾಗಲೇ ಸಾಕಷ್ಟು ಮಂದಿ ಸ್ವಯಂ ಪ್ರೇರಿತವಾಗಿ ತಮ್ಮ ಆಸ್ತಿಗಳನ್ನು ತೆರವುಗೊಳಿಸುತ್ತಿದ್ದು, ಆಡಳಿತದಿಂದಲೂ ತೆರವಿಗೆ ಅಗತ್ಯ ಯಂತ್ರೋಪಕರಣಗಳು ಸೇರಿದಂತೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ತೆರವಿಗೆ ಮೊದಲು ಆಸ್ತಿಯ ಅಳತೆ ಹಾಗೂ ಗುರುತಿಸುವಿಕೆ ಕಾರ್ಯವನ್ನು ಪುರಸಭೆ ವತಿಯಿಂದಲೇ ಮಾಡಿಕೊಡಲಾಗುತ್ತಿದೆ ಎಂದು ಹೇಳಲಾಗಿದೆ.
ರಸ್ತೆ ಅಗಲೀಕರಣದ ಬಳಿಕ ಮಾಲೀಕರಿಗೆ ಮುಂದಿನ ಕಟ್ಟಡ ನಿರ್ಮಾಣಕ್ಕೆ ತಕ್ಷಣವೇ ಪುರಸಭೆಯಿಂದ ಅನುಮತಿ ನೀಡಲಾಗುವುದು. ಅಲ್ಲದೆ, ಹಲವಾರು ಆಸ್ತಿಗಳು ಹಿರಿಯರ ಹೆಸರಿನಲ್ಲಿರುವುದರಿಂದ, ಆಸ್ತಿ ವರ್ಗಾವಣೆ ಪ್ರಕ್ರಿಯೆಗೂ ಸಹ ತ್ವತರಿತವಾಗಿ ಅನುಕೂಲ ಮಾಡಿಕೊಡಲಾಗುವುದು ಎಂದು ಪುರಸಭೆ ಆಡಳಿತ ಭರವಸೆ ನೀಡಿದೆ.
ಕಡುಬಡ ಕುಟುಂಬಗಳಿಗೆ ಅಗತ್ಯ ನೆರವು ನೀಡುವ ಉದ್ದೇಶವೂ ಆಡಳಿತಕ್ಕಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಒಟ್ಟಾರೆ, ಮುಖ್ಯರಸ್ತೆ ಅಗಲೀಕರಣ ಕಾರ್ಯ ಜನಸಹಕಾರದೊಂದಿಗೆ ಹಂತ ಹಂತವಾಗಿ ಮುಂದುವರಿಯುತ್ತಿದ್ದು, ರಸ್ತೆ ಮಧ್ಯಭಾಗದಿಂದ ಎರಡು ಬದಿಯಲ್ಲಿ 20 ಅಡಿ ಅಗಲೀಕರಣ ಕಾರ್ಯ ಯಾವುದೇ ಬಲವಂತದ ಕ್ರಮವಿಲ್ಲದೆ ಕಾನೂನುಬದ್ಧವಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಪುರಸಭೆ ರಸ್ತೆ ಅಗಲೀಕರಣದ ಆಡಳಿತ ಮೂಲಗಳು ತಿಳಿಸಿವೆ.
ಗೊಂದಲ ಬೇಡ:
ಮುಖ್ಯ ಅಗಲೀಕರಣ ರಸ್ತೆ ಮಧ್ಯ ಭಾಗದಿಂದ ತಲಾ 20ಅಡಿ ವಿಸ್ತರಣೆ ನಡೆಯಲಿದೆ, ಆದರೆ ನಾಗರಿಕರು ತಮ್ಮ ಕಟ್ಟಡ ಸಜ್ಜಾ ಮೆಟಿಲುಗಳ ಮಾಡಿಕೊಳ್ಳಲು 5ಅಡಿ ಇಟ್ಟುಕೊಳ್ಳಲಿ, ರಸ್ತೆ ಮಧ್ಯ ಭಾಗದಿಂದ ಎರಡೂ ಬದಿಗೆ ತಲಾ 20 ಅಡಿಯಲ್ಲಿ ಒಟ್ಟು 40 ಅಡಿ ಮಾತ್ರ ಅಗಲೀಕರಣವಿದೆ ಗೊಂದಲ ಬೇಡ ಎಂದು ಎಂದಿನಂತೆ ಸಹಕಾರವಿರಲ್ಲಿ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದು ಮೂಲಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

Comments are closed.

Don`t copy text!