ಆಳಂದ: ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಕಲ್ಯಾಣ ಜನಪರ ವೇದಿಕೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಶರಣು ಕುಲಕರ್ಣಿ ಅವರು ನೂತನ ಯೋಧರಿಗೆ ಸನ್ಮಾನಿಸಿದರು. ಪಿಂಟು ಸಾಲೇಗಾಂವ ಇತರರು ಇದ್ದರು.
ಆಳಂದ: ಕನ್ನಡ ಪರ ಚಟುವಟಿಕೆಗಳು ಕೈಗೊಳ್ಳಲು ಪಟ್ಟಣದಲ್ಲಿ ಕನ್ನಡ ಭವನ ನಿರ್ಮಿಸುವ ಕೊಡಬೇಕು ಎಂದು ಕಲ್ಯಾಣ ಕರ್ನಾಟಕ ಜನಪರ ಕಲ್ಯಾಣ ವೇದಿಕೆ ರಾಜ್ಯಾಧ್ಯಕ್ಷ ಶರಣು ಕುಲಕರ್ಣಿ ಅವರು ಇಂದಿಲ್ಲಿ ಆಡಳಿತಕ್ಕೆ ಒತ್ತಾಯಿಸಿದರು.
ಪಟ್ಟಣದಲ್ಲಿ ಕರ್ನಾಟಕ ಜನಪರ ಕಲ್ಯಾಣ ವೇದಿಕೆ ಭಾನುವಾರ ಆಯೋಜಿಸಿದ್ದ ಗಡಿನಾಡು ಕನ್ನಡ ಜನಜಾಗೃತಿ ಕಾರ್ಯಕ್ರಮದಲ್ಲಿ ಸೈನಿಕ ಹುದ್ದೆಗೆ ನೂತನವಾಗಿ ನೇಮಕಗೊಂಡ ಯೋಧರಿಗೆ ಸನ್ಮಾನ ಕೈಗೊಂಡು ಅವರು ಮಾತನಾಡಿದರು.
“ನಮ್ಮ ತಾಲೂಕಿನಲ್ಲಿ ಕನ್ನಡ ಭವನವೊಂದು ಇರಬೇಕು. ಇದು ಕನ್ನಡ ಕಲಿಕೆಗೆ, ಸಾಹಿತ್ಯ ಕಾರ್ಯಕ್ರಮಗಳಿಗೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಒಂದು ಕೇಂದ್ರವಾಗಿ ಕಾರ್ಯನಿರ್ವಹಿಸಬೇಕು. ಗಡಿನಾಡಿನಲ್ಲಿ ಕನ್ನಡವನ್ನು ರಕ್ಷಿಸಲು ಯುವಕರು ಮುಂದಾಗಿದ್ದಾರೆ, ಆದರೆ ಸರ್ಕಾರಿ ಸೌಲಭ್ಯಗಳ ಕೊರತೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಈ ಕನ್ನಡ ಭವನವು ನಮ್ಮ ಗಡಿ ಪ್ರದೇಶದ ಯುವಕರಿಗೆ ಪ್ರೇರಣೆಯಾಗಿ, ಕನ್ನಡದ ಭಾವನೆಯನ್ನು ಬೆಳೆಸುವಂತೆ ಮಾಡಬೇಕು. ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇಲ್ಲಿ ಕನ್ನಡ ಭಾμÉಯ ಬಳಕೆಯನ್ನು ಕಡ್ಡಾಯಗೊಳಿಸುವುದು ಅತ್ಯಗತ್ಯವಿದೆ. ಈ ತಾಲೂಕು ಗಡಿ ಪ್ರದೇಶದಲ್ಲಿದ್ದು, ಇಲ್ಲಿ ಕನ್ನಡ ಭಾμÉಯು ನಮ್ಮ ಗುರುತು ಮತ್ತು ಐಡೆಂಟಿಟಿ. ಆದರೆ ಇಂದು ಸರ್ಕಾರಿ ಕಚೇರಿಗಳಲ್ಲಿ, ವ್ಯಾಪಾರ ಸ್ಥಳಗಳಲ್ಲಿ ಮತ್ತು ಶಾಲೆಗಳಲ್ಲಿ ಕನ್ನಡಕ್ಕಿಂತ ಹಿಂದಿ ಮರಾಠಿ ಅಥವಾ ಇಂಗ್ಲಿμï ಹೆಚ್ಚು ಬಳಸಲಾಗುತ್ತಿದೆ. ಇದು ನಮ್ಮ ಸಾಂಸ್ಕøತಿಕ ಗುರುತನ್ನು ಕ್ಷೀಣಗೊಳಿಸುತ್ತಿದೆ. ಆದ್ದರಿಂದ, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡವನ್ನು ಮಾತ್ರ ಬಳಸುವಂತೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಬೇಕು. ವ್ಯಾಪಾರಸ್ಥರು, ಅಧಿಕಾರಿಗಳು ಮತ್ತು ಜನಸಾಮಾನ್ಯರು ಎಲ್ಲರೂ ಕನ್ನಡವನ್ನು ತಮ್ಮ ದೈನಂದಿನ ಜೀವನದಲ್ಲಿ ಸ್ವೀಕರಿಸುವಂತಾಗಬೆಕು ಎಂದರು.
ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡ ಕಲಿಯುವುದು ಮೂಲಭೂತ ಕರ್ತವ್ಯ. ಶಾಲೆಗಳಲ್ಲಿ ಕನ್ನಡವನ್ನು ಮೊದಲ ಭಾμÉಯಾಗಿ ಬೋಧಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದ ಘೋಷಣೆಗಳನ್ನು ನೀಡುವುದು ಮತ್ತು ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವದು ನಮ್ಮ ಎಲ್ಲರ ಜವಾಬ್ದಾರಿ. ಇಂದಿನ ನೂತನ ಸೈನಿಕರು ದೇಶ ರಕ್ಷಣೆಯಂತೆ ಕನ್ನಡ ರಕ್ಷಣೆಯಲ್ಲೂ ಮುಂದಿನಂತೆ ನಿಲ್ಲಬೇಕು. ಇದರಿಂದ ನಮ್ಮ ಗಡಿನಾಡು ಕನ್ನಡದ ಕೋಟೆಯಾಗಿ ಬದಲಾಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡಪರ ಹಾಗೂ ದಲಿತ ಸೇನೆ ತಾಲೂಕು ಅಧ್ಯಕ್ಷ ಪಿಂಟೂ ಸಾಲೆಗಾಂವ ಮಾತನಾಡಿದರು.
ಮುಖಂಡ ಪರ್ವೇಜ್ ಅನ್ಸಾರಿ, ಅಪ್ಪು ಗೋಪಾಳೇ, ಶರಣು ಪವಾಡ ಶೆಟ್ಟಿ, ಸಿದ್ಧರಾಮ ಕುಲ್ಕರ್ಣಿ, ಬುದ್ಧ ಪ್ರಿಯ ಮೂಲಭಾರತಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.
Comments are closed.