ಆಳಂದ: ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ವ್ಯಾಪ್ತಿಗೊಳಪಡುವ ಆಸ್ತಿ ಮಾಲೀಕರೊಂದಿಗೆ ತಮ್ಮ ನಿವಾಸದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಹೇಶ್ವರಿ ಎಸ್. ವಾಲಿ ಮಾತನಾಡಿದರು. ದತ್ತರಾಜ ಕುಂಬಾರ, ಶಿವುಪುತ್ರ ನಡಗೇರಿ, ಅಮಿತ ಶಹಾ ಇತರರು ಇದ್ದರು.
ಆಳಂದ: ಪಟ್ಟಣದ ಮುಖ್ಯ ರಸ್ತೆ ಅಗಲೀಕರಣಕ್ಕೆ ಯಾರಿಂದಲೂ ಅಡ್ಡಿಯಿಲ್ಲ. ಆದರೆ ರಸ್ತೆ ಬದಿಯ ಆಸ್ತಿ ಕಳೆದುಕೊಳ್ಳುವವರಿಗೆ ಮೊದಲು ಸ್ಪಷ್ಟ ಪರಿಹಾರ ಘೋಷಿಸಿ ನಂತರವೇ ಕೆಲಸ ಆರಂಭಿಸಬೇಕು ಎಂದು ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಒತ್ತಾಯಿಸಿರುವ ಅವರು ಸೋಮವಾರದ ವರೆಗೆ ಆಡಳಿತಕ್ಕೆ ಡೆಡ್‍ಲೈನ್ ನೀಡಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ರಸ್ತೆ ಬದಿಗೆ ಹೊಂದಿಕೊಂಡಿರುವ ಕೆಲವು ಆಸ್ತಿ, ನಿವೇಶನ ಹಾಗೂ ಕಟ್ಟಡ ಮಾಲೀಕರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಿ.ಆರ್. ಪಾಟೀಲರು ಮಾಜಿ ಶಾಸಕರಾಗಿದ್ದಾಗ ಸುಭಾμï ಗುತ್ತೇದಾರರ ಅವಧಿಯಲ್ಲಿ ರಸ್ತೆ ಅಗಲೀಕರಣ ಕುರಿತು ಚರ್ಚೆ ನಡೆದಾಗ, ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಿ ಅಗಲೀಕರಣ ಮಾಡಬೇಕು ಎಂದು ಹೇಳಿದ್ದರು. ನಾನು ಅಧಿಕಾರಕ್ಕೆ ಬಂದರೆ ಪರಿಹಾರ ನೀಡಿ ರಸ್ತೆ ಅಗಲೀಕರಣ ಮಾಡುತ್ತೇನೆ ಎಂದು ನೀಡಿದ್ದ ಮಾತನ್ನು ಈಗಿನ ಶಾಸಕರಾದ ಬಿ.ಆರ್. ಪಾಟೀಲರು ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಇದಕ್ಕೆ ಎಲ್ಲರ ಸಹಕಾರ ಇದೆ. ಅಗಲೀಕರಣಕ್ಕೆ ಯಾರ ಅಡ್ಡಿಯೂ ಇಲ್ಲ” ಎಂದು ಹೇಳಿದರು.
ಅಗಲೀಕರಣದ ಪೂರ್ಣ ಮಾಹಿತಿ ನೀಡದೇ ಹಠಾತ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, “ನೂರಾರು ವರ್ಷಗಳಿಂದ ವಾಸವಾಗಿರುವ ಜನರಿಗೆ ಕಾಲಾವಕಾಶ ನೀಡದೇ, ಸ್ಪಷ್ಟ ತೆರವು ನೋಟಿಸ್ ನೀಡದೇ ರಸ್ತೆ ತೆರವು ಮಾಡಿದರೆ ಜನರು ಎಲ್ಲಿ ಹೋಗಬೇಕು? ಮನಬಂದಂತೆ ನಡೆದುಕೊಳ್ಳಬೇಡಿ. ಹಠಾತ್ ರಸ್ತೆ ತೆರವು ಕಾರ್ಯಾಚರಣೆ ಮೊದಲು ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸೋಮವಾರದೊಳಗೆ ಸಂತ್ರಸ್ತರ ಸಭೆ ಕರೆದು ಪರಿಹಾರ ಘೋಷಿಸಬೇಕು. ಶಾಸಕರ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ, ಅದನ್ನು ಕಳೆದುಕೊಳ್ಳಬೇಡಿ. ಹೋರಾಟಕ್ಕೆ ಅವಕಾಶ ಮಾಡಿಕೊಡಬೇಡಿ. ಶಾಸಕರು ಎಲ್ಲೆ ಇದ್ದರೂ ಸೋಮವಾರದೊಳಗೆ ಬಂದು ಪರಿಹಾರದ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು. ಕಾಣೆಯಾಗಿಯೇ ಕೆಲಸ ಮಾಡಬೇಡಿ ಎಂದು ಅವರು ಆಗ್ರಹಿಸಿದರು.
ಆರ್.ಕೆ.ಪಾಟೀಲ ಯಾರು ರಸ್ತೆ ಅಗಲೀಕರಣ ಅವರ ಮೂಲಕ ಪೂಜೆ ಕೈಗೊಂಡು ಆರಂಭಿಸಲಾಗಿದೆ. ಇದು ಶಿಷ್ಠಾಚಾರ ಉಲ್ಲಂಘಿಸಲಾಗಿದೆ, ಪೂಜೆ ಕೈಗೊಂಡು ಆರ್.ಕೆ. ಪಾಟೀಲ ದುಬೈಗೆ ಹೋದರೆ, ನೀವು ಸಹ ಇಲ್ಲಿಗೆ ಬರುತ್ತಿಲ್ಲ. ಬೇಕಾಬಿಟ್ಟಿ ಅಗಲೀಕರಣ ಸ್ಪಷ್ಟವಾಗಿ ಎಷ್ಟು ಅಡಿ ಅಗಲೀಕರಣ ಎಂಬುದು ಸಹ ಜನರಿಗೆ ಹೇಳಲಾಗಿಲ್ಲ. ಸಂತ್ರಸ್ತರಾಗುವ ಜನರು ಪರಿಹಾರಕ್ಕಾಗಿ ಎದುರುನೋಡುತ್ತಿದ್ದಾರೆ ಪರಿಹಾರ ಘೋಷಿಸಿ ಅಗಲೀಕರಣಕ್ಕೆ ಯಾರ ಅಡ್ಡಿಯು ಇಲ್ಲ ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದತ್ತರಾಜ ಕುಂಬಾರ, ಪುರಸಭೆ ಮಾಜಿ ಸದಸ್ಯ ಶಿವುಪುತ್ರ ನಡಗೇರಿ, ಚಕ್ರಪಾಣಿ ಸೂರೆ, ಅಮಿತ್ ಶಹಾ, ಢಗೆ ಮಾತನಾಡಿ, “ಪರಿಹಾರ ನೀಡಿ, ಕಾಲಾವಕಾಶ ಕೊಟ್ಟು ರಸ್ತೆ ಅಗಲೀಕರಣ ಮಾಡಿ. ಅಭಿವೃದ್ಧಿಗೆ ವಿರೋಧವಿಲ್ಲ” ಎಂದು ಹೇಳಿದರು.
ಸಂಗಮೇಶ ಸಜ್ಜನಶೆಟ್ಟಿ, ಪುರಸಭೆ ಮಾಜಿ ಸದಸ್ಯ ದೋಂಡಿಬಾ ಸಾಳುಂಕೆ ಸೇರಿದಂತೆ ಅನೇಕ ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Comments are closed.