Shubhashaya News

ನರೋಣದಲ್ಲಿ ಪಲ್ಸ್ ಪೆÇೀಲಿಯೋಗೆ ಗುರು ಮಹಾಂತ ಶ್ರೀ ಚಾಲನೆ   

ಆಳಂದ: ನರೋಣಾದಲ್ಲಿ ಹಮ್ಮಿಕೊಂಡ ಪಲ್ಸ್ ಪೆÇೀಲಿಯೋ ಕಾರ್ಯಕ್ಕೆ ಗ್ರಾಮದ ಗುರುಮಹಾಂತ ಸ್ವಾಮಿಗಳು ಚಾಲನೆ ನೀಡಿದರು. ಬಾಬು ವಾಲಿ, ಮಲ್ಕಜಪ್ಪ ಬೋಳಶೆಟ್ಟಿ, ಶರಣಬಸಪ್ಪ ಸಾವಳಗಿ ಉಪಸ್ಥಿತರಿದ್ದರು. ಅಧಿಕಾರಿ ಶಿವಾನಂದ ತಂಬಾಕೆ ಇತರರು ಇದ್ದರು.

ಆಳಂದ್: ರಾಷ್ಟ್ರೀಯ ಪಲ್ಸ್ ಪೆÇೀಲಿಯೋ ಕಾರ್ಯಕ್ರಮಕ್ಕೆ ತಾಲೂಕು ನರೋಣ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ–5ರಲ್ಲಿ ಚಾಲನೆ ನೀಡಲಾಯಿತು.

ಗ್ರಾಮದ ಮಹಾಂತೇಶ್ವರ್ ಮಠದ ಮಠಾಧಿಪತಿ ಶ್ರೀ ಗುರುಮಹಾಂತ  ಸ್ವಾಮೀಜಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಐದು ವರ್ಷದೊಳಗಿನ ಮಕ್ಕಳಿಗೆ ಪೆÇೀಲಿಯೊ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಗಳು, ಮಕ್ಕಳ ಆರೋಗ್ಯವೇ ದೇಶದ ಭವಿಷ್ಯವಾಗಿದ್ದು, ಪೆÇೀಲಿಯೊ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು. ಪೆÇೀಷಕರು ಯಾವುದೇ ಅಲಕ್ಷ್ಯ ತೋರದೇ ತಮ್ಮ ಮಕ್ಕಳಿಗೆ ಪೆÇೀಲಿಯೊ ಲಸಿಕೆ ಹಾಕಿಸಬೇಕು ಎಂದು ಅವರು ಮನವಿ ಮಾಡಿದರು.

 

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಾಬು ವಾಲಿ, ಮಲ್ಕಜಪ್ಪ ಬೋಳಶೆಟ್ಟಿ, ಶರಣಬಸಪ್ಪ ಸಾವಳಗಿ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ಶಿವಾನಂದ ತಂಬಾಕೆ, ಭಾರತಿಬಾಯಿ, ಅಶೋಕ್ ಪೂಜಾರಿ, ಅಂಗನವಾಡಿ ಶಿಕ್ಷಕಿ ಹಾಗೂ ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಗ್ರಾಮದ ಪೆÇೀಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳಿಗೆ ಪೆÇೀಲಿಯೊ ಹನಿ ಹಾಕಿಸುವ ಮೂಲಕ ರಾಷ್ಟ್ರೀಯ ಪಲ್ಸ್ ಪೆÇೀಲಿಯೋ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ವ್ಯಕ್ತಪಡಿಸಿದರು.

Comments are closed.

Don`t copy text!