Shubhashaya News

ದಿನಕರರಾವ್‍ಗೆ ರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ: ನಗರದ ಹಿರಿಯ ಪಾರಂಪರಿಕ ವೈದ್ಯರು ಹಾಗೂ ಹಿಂದೂ ಮಹಾಸಭಾ ರಾಜ್ಯ ಹಿರಿಯ ಉಪಾಧ್ಯಕ್ಷರಾದ ದಿನಕರರಾವ ನಾರಾಯಣರಾವ ಕುಲಕರ್ಣಿ ಅಷ್ಟಗಿ ಅವರು
2025-26ನೇ ಸಾಲಿನ “ಶ್ರೇಷ್ಠ ಜೀವಮಾನವ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹುಬ್ಬಳ್ಳಿಯ `ವಿಶ್ವದರ್ಶನ’ ದಿನಪತ್ರಿಕೆ ಕೊಡಮಾಡುವ ಈ ಪ್ರಶಸ್ತಿಯನ್ನು ಡಿಸೆಂಬರ್ 27ರಂದು (ಶನಿವಾರ) ಬೆಳಿಗ್ಗೆ 10-30ಕ್ಕೆ ದಾವಣಗೆರೆಯ ವಿದ್ಯಾನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿರುವ ಆರನೇ ಭಾವೈಕ್ಯ ಸಮ್ಮೇಳನದಲ್ಲಿ ದಿನಕರರಾವ್ ನಾ. ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನದ ಆಯೋಜಕರಾದ ಹುಬ್ಬಳ್ಳಿಯ ಡಾ. ಎಸ್.ಎಸ್. ಪಾಟೀಲ್ ತಿಳಿಸಿದ್ದಾರೆ.
ದಿನಕರರಾವ ಅವರು ಕಳೆದ ನಾಲ್ಕು ದಶಕಗಳಿಂದಲೂ ಈ ಭಾಗದಲ್ಲಿ ಪಾರಂಪರಿಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸಮಾಜ ಸೇವೆ, ಧಾರ್ಮಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅಷ್ಟಗಿಯ ನಡು ಊರ ಶ್ರೀ ಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಕಮಿಟಿಯ ಸಂಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಲಿದ್ದಾರೆ.
ಅಭಿನಂದನೆ: ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ದಿನಕರರಾವ ಕುಲಕರ್ಣಿ ಅವರನ್ನು ಹಿರಿಯ ಸಿವಿಲ್ ಇಂಜಿನಿಯರ್ ಮುರಳೀಧರ ಜಿ. ಕರಲಗಿಕರ್ ಅವರು ಅಭಿನಂದಿಸಿದ್ದಾರೆ.

Comments are closed.

Don`t copy text!