ಆಳಂದ: ತಡೋಳಾ ಹಾಲು ಉತ್ಪಾದಕ ಸಂಘ ಆಯೋಜಿಸಿದ್ದ ಅಭಿವೃದ್ಧಿ ಸ್ವರೂಪ್ ಕಾರ್ಯಕ್ರಮದಲ್ಲಿ ಕೆಎಂಎಫ್ ಎಂಡಿ ಪಾಂಡುರಂಗ ಪಾಟೀಲ ಮಾತನಾಡಿದರು. ಮೌಲಾ ಮುಲ್ಲಾ, ಗ್ರಾಪಂ ಅಧ್ಯಕ್ಷೆ ಸೂರ್ಯಕಲಾ ಆರ್. ಜಮಾದಾರ, ಡಾ. ಯಲ್ಲಪ್ಪ ಇಂಗಳೆ, ಕೃಷಿ ಎಡಿ ಬನಸಿದ್ದ ಬಿರಾದಾರ, ಎಸ್‍ಬಿಐ ಬ್ಯಾಂಕ್ ವ್ಯವಸ್ಥಾಪಕ ಶೇಖರ ಕುಮಾರ, ನರೇಗಾ ಎಡಿ ಸೋಮಶೇಖರ ಇದ್ದರು.
ಆಳಂದ: ಹೈನುಗಾರಿಕೆಯ ಮೂಲಕ ಯುವ ಸಮುದಾಯವು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಪಾಟೀಲ್ ಹೇಳಿದರು.
ತಾಲೂಕಿನ ತಡೋಳಾ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಹೈನು ಉತ್ಪಾದನೆ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲಸದ ನಿಮಿತ್ತ ವಲಸೆ ಹೋಗುವ ಬದಲು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಆರ್ಥಿಕ ಸ್ಥಿರತೆ ಸಾಧಿಸುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.
ಹೈನುಗಾರಿಕೆಯನ್ನು ಕೃಷಿಯೊಂದಿಗೆ ಸಂಯೋಜಿಸುವ ಮಹತ್ವವನ್ನು ಒತ್ತಿಹೇಳಿದರು. “ಹೆಚ್ಚಿನ ಉತ್ಪಾದನೆಯÁ ಆಸೆಯಿಂದ ಭೂಮಿಯ ಮಣ್ಣು ಅನಾರೋಗ್ಯಗೊಂಡಿದೆ. ರಾಸಾಯನಿಕ ತೊಟ್ಟಿಗಳ ಬಳಕೆಯಿಂದ ಮಣ್ಣು ‘ಕ್ಯಾನ್ಸರ್’ಗೆ ಒಳಗಾಗಿದ್ದು, ಇದಕ್ಕೆ ಸಾವಯವ ಕೃಷಿ ಅಳವಡಿಸುವುದು ಏಕೈಕ ಮಾರ್ಗ” ಎಂದು ಅವರು ಹೇಳಿದರು.
ಕುಟುಂಬದಲ್ಲಿ ಒಬ್ಬರು ಕೃಷಿ ಮಾಡುತ್ತಿದ್ದರೆ ಉಳಿದವರು ಸುಮ್ಮನೆ ಕೂಳ್ಳುತ್ತಾರೆ; ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಹೀಗಾಗಿ ಪ್ರತಿ ಕುಟುಂಬವೂ ಕೃಷಿ, ಹೈನುಗಾರಿಕೆ ಮತ್ತು ಆರೋಗ್ಯಕರ ಸಾವಯವ ವ್ಯವಹಾರಗಳನ್ನು ಸಂಯೋಜಿಸಿ ಅನುಸರಿಸಬೇಕು. ಈ ಮೂಲಕ ಯುವಕರು ಗ್ರಾಮೀಣ ಪ್ರದೇಶಗಳಲ್ಲೇ ಉದ್ಯೋಗ ಸೃಷ್ಟಿಸಿಕೊಂಡು ವಲಸೆಯ ಅಗತ್ಯವಿಲ್ಲ ಎಂದು ಒತ್ತಾಯಿಸಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಅವರು ಮಾತನಾಡಿ, “ಹೈನುಗಾರಿಕೆಗೆ ಇಲಾಖೆಯಿಂದ ಅಗತ್ಯ ಸೌಲಭ್ಯಗಳು, ಬೀಜಗಳು, ಆಹಾರ ಮತ್ತು ತರಬೇತಿ ಸೇವೆಗಳನ್ನು ಒದಗಿಸುತ್ತೇವು. ರೈತರು ಇದನ್ನು ಸದ್ಬಳಕೆ ಮಾಡಿಕೊಂಡು ಉತ್ಪಾದನೆಯನ್ನು ಹೆಚ್ಚಿಸಬಹುದು” ಇಲಾಖೆಯು ಸ್ಥಳೀಯ ಮಟ್ಟದಲ್ಲಿ ಕಾರ್ಯಸೂಚಿಗಳನ್ನು ನಡೆಸಿ, ರೈತರಿಗೆ ನೇರ ಸಹಾಯ ನೀಡುತ್ತದೆ ಎಂದು ಸಚಿವರಿಸಿದರು.
ಕಾರ್ಯಕ್ರಮದಲ್ಲಿ ಕಿಸಾನಸಭಾ ರಾಜ್ಯ ಮಂಡಳಿಯ ಸದಸ್ಯ ಮೌಲಾ ಮುಲ್ಲಾ ಅವರು ಭಾಗವಹಿಸಿ, “ಮನುಷ್ಯರಿಗೆ ಕ್ಯಾನ್ಸರ್ ಆದರೆ ನಾವು ಅವರನ್ನು ಮಣ್ಣಿಗೆ ಹಾಕುತ್ತೇವೆ. ಆದರೆ ಮಣ್ಣಿಗೆ ಕ್ಯಾನ್ಸರ್ ಬಂದರೆ ಏನು ಮಾಡಬೇಕು?” ಎಂದು ತೀಕ್ಷ್ಣ ಪ್ರಶ್ನೆ ಎತ್ತಿದರು. ಇದರೊಂದಿಗೆ ಮಣ್ಣಿನ ಗುಣಮಟ್ಟವನ್ನು ಕಾಪಾಡುವುದು, ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ತಂತ್ರಗಳನ್ನು ಉತ್ತೇಜಿಸುವುದು ಕುರಿತು ಚರ್ಚೆಗೆ ಚಾಲನೆ ನೀಡಿದರು. ಈ ವಿಷಯವನ್ನು ಎಲ್ಲರೂ ಮುನ್ನೆಲೆಗೊಳಿಸಿ, ಪೂರಕ ಸಲಹೆಗಳನ್ನು ನೀಡಿದರು. ಈ ಚರ್ಚೆಯಿಂದಾಗಿ ರೈತರು ಸಾವಯವ ಹೈನುಗಾರಿಕೆಯ ಮಹತ್ವವನ್ನು ತಿಳಿದುಕೊಂಡರು.
ನಿರಗುಡಿ ಎಸ್‍ಬಿಐ ಬ್ಯಾಂಕ್‍ನ ವ್ಯವಸ್ಥಾಪಕ ಶೇಖರ್‍ಕುಮಾರ್ ಅವರು ಹೈನುಗಾರಿಕೆಗೆ ಸಂಬಂಧಿಸಿದ ಸಾಲ ಸೌಲಭ್ಯಗಳ ಕುರಿತು ವಿವರಿಸಿ, “ಬ್ಯಾಂಕ್ ಸಾಲ ಪಡೆದ ನಂತರ ಸಮಯಕ್ಕೆ ಮರುಪಾವತಿ ಮಾಡುವುದು ಅತ್ಯಂತ ಮುಖ್ಯ. ಬ್ಯಾಂಕ್ ಅನ್ನು ನಮ್ಮ ಕುಟುಂಬದ ಶಾಖೆಯಂತೆ ತಿಳಿದುಕೊಂಡು, ಅದರ ಸಹಾಯವನ್ನು ಪಡೆದು ಮರುಪಾವತಿ ಮಾಡಿದರೆ ಮಾತ್ರ ಬ್ಯಾಂಕ್‍ಗಳು ಚಾಲ್ತಿಯಲ್ಲಿರುತ್ತವೆ. ಸಾಲ ನೀಡಿ ವಸೂಲಾಗದೆ ಅನೇಕ ಬ್ಯಾಂಕ್‍ಗಳು ಬಾಗಿಲು ಮುಚ್ಚಿಕೊಂಡಿವೆ” ಎಂದು ಎಚ್ಚರಿಕೆ ನೀಡಿದರು. ರೈತರು ಸಮಯಕ್ಕೆ ಸಾಲ ಪಡೆದು ಮರುಪಾವತಿ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ ರೈತೆ ಕಲ್ಯಾಣಿ ಅವುಟ್ಟೆ ಮಾತನಾಡಿ, “ಕೃಷಿ ಇಲಾಖೆಯಿಂದ ಹಾಲು ಉತ್ಪಾದಕರಿಗೆ ಹಾಲು ಕರೆಯುವ ಯಂತ್ರಗಳನ್ನು ಒದಗಿಸಬೇಕು. ಇದರಿಂದ ಉತ್ಪಾದನೆ ಸುಗಮವಾಗುತ್ತದೆ” ಎಂದು ಮನವಿ ಮಾಡಿದರು. ಸಹಾಯಕ ಪ್ರಭಾರಿ ಕೃಷಿ ನಿರ್ದೇಶಕ ಬನಸಿದ್ದ ಬಿರಾದಾರ್, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಸೋಮಶೇಖರ್ ಮತ್ತು ಇತರರು ಮಾತನಾಡಿದರು.
ಪಿಡಿಒ ಶರಣಬಸಪ್ಪ, ಗ್ರಾಪಂ ಸದಸ್ಯರು ಮಹಾವೀರ್ ಕಾಂಬಳೆ, ಹಾಲು ಉತ್ಪಾದಕ ಸಂಘದ ರಾಮೂರ್ತಿ ಗಾಯಕವಾಡ, ವಿಶ್ವನಾಥ್ ಪಾಟೀಲ್, ಯಶ್ವಂತ್ ಗಾಯಕವಾಡ, ಕಮಲೇಶ್ ಅವುಟ್ಟೆ, ಭೀಮಾಶಂಕರ್ ಬೋಳಶೆಟ್ಟಿ, ಕುಮಾರ್ ಬಿರಾಜದಾರ್, ಆಶ್ಫಾಕ್ ಮುಲ್ಲಾ ಸೇರಿದಂತೆ ಅನೇಕ ರೈತರು, ಹಾಲು ಉತ್ಪಾದಕರು ಭಾಗವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಮೈಲಾರಿ ಜೋಗೆ ನಿರೂಪಣೆ ನೀಡಿದರು.
Comments are closed.