Shubhashaya News

ಆಳಂದದ ನಾಗೂರೆ ಹೊಲದಲ್ಲಿ ಎಳ್ಳಮವಾಸ್ಯೆ ಭಾವೈಕ್ಯತೆಯ ಮೆರಗು

ನೂರಾರು ಮಂದಿಗೆ ಸಾಮೂಹಿಕ ಭೋಜನ, ಜಾತಿ–ಧರ್ಮಾತೀತ ಸಹಭಾಗಿತ್ವ  ಹಿರಿಯ ಸಾಹಿತಿ ಎಸ್‍ಬಿ ಪಾಟೀಲ್‍ರÀ ಉಪನ್ಯಾಸ ಮುಖಂಡರ ಪ್ರತಿಕ್ರಿಯೆಗಳೊಂದಿಗೆ ಸಾಂಸ್ಕøತಿಕ ಸಂಭ್ರಮ  

ಆಳಂದ: ಎಳ್ಳಮವಾಸ್ಯೆ ಹಬ್ಬದ ಪ್ರಯುಕ್ತ ಪಟ್ಟಣದ ರೇವಣಸಿದ್ಧಪ್ಪ ನಾಗೂರೆ ದಂಪತಿಗಳು ತಮ್ಮ ಹೊಲದಲ್ಲಿ ಆಯೋಜಿಸಿದ್ದ ಸೌಹಾರ್ದ ಭೋಜನ ಕೂಟದಲ್ಲಿ ದಂಪತಿಗಳಿಗೆ ಸರ್ವ ಧರ್ಮೀಯರು ಸನ್ಮಾನಿಸಿ ಗೌರವಿಸಿದರು.

ಆಳಂದ: “ಎಳ್ಳಮವಾಸ್ಯೆಯಂತಹ ಹಬ್ಬಗಳು ನಮ್ಮ ಪೂರ್ವಜರ ಜ್ಞಾನವನ್ನು ನೆನಪಿಸುತ್ತವೆ. ಹಿಂಗಾರು ಬೆಳೆಗಳ ಸಂರಕ್ಷಣೆಗಾಗಿ ನಾವು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿ ಎಸ್.ಬಿ ಪಾಟೀಲ್ ತಡಕಲ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಎಳ್ಳಮವಾಸ್ಯೆ ಹಬ್ಬದ ಆಚರಣೆ ಅಂಗವಾಗಿ ರೈತ ಮುಖಂಡ ರೇವಣಸಿದ್ದಪ್ಪ ಎಸ್. ನಾಗೂರೆ ತಮ್ಮ ಹೊಲದಲ್ಲಿ ಹಮ್ಮಿಕೊಂಡಿದ್ದ ಭಾವೈಕ್ಯತೆಯ ಮತ್ತು ಸೌಹಾರ್ದ ಸಂಕೇತವಾಗಿ ಪ್ರತಿವರ್ಷದಂತೆ ಎಳ್ಳಮವಾಸ್ಯೆ ಆಚರಣೆ ಹಾಗೂ ಈ ಬಾರಿಯೂ ನೂರಾರು ಮಂದಿಗೆ ಸಾಮೂಹಿಕ ಹಮ್ಮಿಕೊಂಡ ಭೋಜನ   ಕೂಟದ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಲ್ಲದೆ, ಈ ವೇಳೆ ಪತ್ರಕರ್ತರ ಹಾಗೂ ಯುವ ಬರಹಗಾರರ ಸಾಹಿತಿಕ ಆಶ್ರಯದಲ್ಲಿ ರೇವಣಸಿದ್ಧಪ್ಪÀ ನಾಗೂರೆ ದಂಪತಿಗಳನ್ನು ಅವರು ಸನ್ಮಾನಿಸಿ, “ಇಂತಹ ಸಾಮೂಹಿಕ ಭೋಜನಕೂಟಗಳು ಕೇವಲ ಆಹಾರದ ಸಂತರ್ಪಣೆಗೆ ಸೀಮಿತವಲ್ಲ; ಅವು ರೈತರ ಜೀವನಾಡಿಯ ಸಾರವನ್ನು, ಭೂಮಿಯೊಂದಿಗಿನ ಬಂಧವನ್ನು ಮತ್ತು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುತ್ತವೆ. ನಾಗೂರೆ ದಂಪತಿಗಳಂತಹವರು ಇಂತಹ ಪರಂಪರೆಯನ್ನು ಉಳಿಸಿ, ಆಧುನಿಕ ತಲೆಮಾರುಗಳಿಗೆ ಪರಿಚಯಿಸುತ್ತಿದ್ದಾರೆ. ಇದು ನಮ್ಮ ಗ್ರಾಮೀಣ ಸಂಸ್ಕೃತಿಯ ಗಟ್ಟಿತನವನ್ನು ತೋರುತ್ತದೆ” ಎಂದು ಪಾಟೀಲ್ ಅವರು ಹೇಳಿದರು.

ಹಿರಿಯ ಮುಖಂಡ ಆರಿಫ್ ಅಲಿ ಲಂಗಡೇ ಅವರು ಮಾತನಾಡಿ, “ಈ ಭೋಜನಕೂಟ ಜಾತಿ-ಧರ್ಮದ ಗಡಿಗಳನ್ನು ಮೀರಿ ಒಗ್ಗಟ್ಟಿನ ಸಂದೇಶವನ್ನು ನೀಡುತ್ತದೆ. ರೈತರ ಸಮಸ್ಯೆಗಳನ್ನು ಚರ್ಚಿಸುವ ಈ ವೇದಿಕೆಯು ಯುವ ತಲೆಮಾರಿನಲ್ಲೂ ಕೃಷಿ ಪ್ರತಿಯನ್ನು ಹುಟ್ಟಿಸುತ್ತದೆ” ಎಂದರು.

ಯುವ ಕಾರ್ಯಕರ್ತ ತೈಯಬ್ ಶೇಖ “ಈ ಸಹಭಾಗಿತ್ವದಿಂದ ರೈತ ಸಮುದಾಯದಲ್ಲಿ ಒಗ್ಗಟ್ಟು ಬಲಗೊಳ್ಳುತ್ತದೆ. ನಾಗೂರೆ ಅವರಂತಹವರ ಬಾಲ್ಯದಿಂದಲೂ ಜಾತಿ, ಧರ್ಮ ನೋಡದೆ ಎಲ್ಲರನ್ನು ಸ್ನೇಹಭಾವದಿಂದ ನೋಡುವ ವ್ಯಕ್ತಿಯಾಗಿದ್ದಾರೆ, ಇದು ಗ್ರಾಮೀಣ ಜೀವನದ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ” ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಚಿಟಗುಪ್ಪ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ, ಮಹ್ಮದ್ ಕಾಲೇಮಿರ್ ಅನ್ಸಾರಿ, ಬಾಬುರಾವ್ ಬನಶೆಟ್ಟಿ, ಸಂಜು ಬನಶೆಟ್ಟಿ,  ಜನನಾನಂದ ಪಾಟೀಲ, ಕಲಬುರಗಿಯ ಪ್ರಭು ದೇವರಗುಡಿ, ಪ್ರಶಾಂತ ಪಾಟೀಲ, ಪ್ರದೀಪ ಪೂಜಾರಿ, ಶಿವುಕುಮಾರ ವಾಲೆ, ಆರ್.ಎಸ್. ಪಾಟೀಲ, ನಿವೃತ್ತ ಶಿಕ್ಷಕ ಎಂ.ಎನ್, ಪೋದ್ದಾರ, ಕಡಗಂಚಿ ಡಿಗ್ರಿ ಕಾಲೇಜಿ ಅಧ್ಯಕ್ಷ ಡಾ. ಸುನೀಲ ಕುಮಾರ ಕಾಂಬಳೆ, ಶರಣರೆಡ್ಡಿ ಪಾಟೀಲ, ಲಕ್ಷ್ಮಣ ಝಳಕಿಕರ್, ಸುಲೇಮಾನ್ ಮುಕಟ್, ಚನ್ನಪ್ಪ ಎಂ.ಹತ್ತರಕಿ, ರತ್ನಾಕರ್ ಕುಂಬಾರ, ಸಂತೋಷ ಪಾಟೀಲ, ಸುರಪೂರ ಎಇಇ ಶಾಂತಪ್ಪ ಹೊರಸೂರ, ಅಜಗರ ಅಲಿ ಸೇರಿದಂತೆ ಪಟ್ಟಣ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ನೌಕರರು ಹಾಗೂ ಸಾರ್ವಜನಿಕರು ಜಾತಿ-ಧರ್ಮ ಬೇಧವಿಲ್ಲದೆ ಭಾಗವಹಿಸಿ, ಹಬ್ಬದ ಉತ್ಸಾಹವನ್ನು ಹಂಚಿಕೊಂಡರು.

ಪೇಂಡಾಲ್ ವ್ಯವಸ್ಥೆಯಲ್ಲಿ ನಡೆದ ಈ ಭೋಜನಕೂಟದಲ್ಲಿ ಹಬ್ಬದ ವೈಶಿಷ್ಟ್ಯಗಳಾದ ಭಜ್ಜಿ, ಕಡುಬು, ಶೇಂಗಾ, ಹೂರಣ ಹೂಳಿಗೆ, ಸಜ್ಜೆ ರೋಟಿ, ಮಜ್ಜಿಗೆ, ಅನ್ನ ಅಂಬಲಿ, ಹುಗ್ಗಿ, ಹಾಲು ಚಟ್ನಿ, ತುಪ್ಪ ಸೇರಿದಂತೆ ನಾನಾ ಸಾಂಪ್ರದಾಯಿಕ ಪದಾರ್ಥಗಳನ್ನು ನಾಗೂರೆ ಅವರ ಕುಟುಂಬಸ್ಥರು ಪ್ರೀತಿಯಿಂದ ನೂರಾರು ಜನರಿಗೆ ಉಣಬಡಿಸಿದರು.

Comments are closed.

Don`t copy text!