ಪ್ರತಿ ಕ್ವಿಂಟಾಲ್ ತೊಗರಿಗೆ ₹9 ಸಾವಿರ ನೀಡಿ – ಯಳಸಂಗಿ
ರಾಜ್ಯ ಸರ್ಕಾರದಿಂದ ₹1 ಸಾವಿರ ಪೆÇ್ರೀತ್ಸಾಹ ಧನ, 100ಕ್ಕೆ 100 ಬೆಳೆ ವಿಮೆ ಒತ್ತಾಯ
ಆಳಂದ: ಅತಿವೃಷ್ಟಿಯಿಂದ ತಾಲೂಕಿನಲ್ಲಿ ತೊಗರಿ ಬೆಳೆ ತೀವ್ರ ಹಾನಿಗೊಳಗಾಗಿದ್ದು, ಅಲ್ಲಲ್ಲಿ ಅಲ್ಪ ಪ್ರಮಾಣದ ಬೆಳೆ ಮಾತ್ರ ಉಳಿದು ರಾಶಿಯಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ತೊಗರಿ ಬೆಂಬಲ ಬೆಲೆಯಿಗಿಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿದ್ದು, ಕ್ವಿಂಟಾಲ್‍ಗೆ ₹6,000 ರಿಂದ ₹7,000ರμÉ್ಟೀ ಬೆಲೆ ದೊರಕುತ್ತಿದೆ. ಇದರಿಂದ ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಿಂಬರ್ಗಾ ವಲಯ ಅಧ್ಯಕ್ಷ ಬಸವಣ್ಣಪ್ಪ ಯಳಸಂಗಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ತೊಗರಿಗೆ ಕ್ವಿಂಟಾಲ್‍ಗೆ ₹8,000 ಬೆಂಬಲ ಬೆಲೆ ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ ₹1,000 ಪೆÇ್ರೀತ್ಸಾಹ ಧನ ನೀಡಿದರೆ ಒಟ್ಟು ₹9,000 ದರದಲ್ಲಿ ಖರೀದಿ ಸಾಧ್ಯವಾಗುತ್ತದೆ. ಇದರಿಂದ ರೈತರಿಗೆ ನೇರವಾಗಿ ಲಾಭವಾಗುವುದರ ಜೊತೆಗೆ ಮಾರುಕಟ್ಟೆಯಲ್ಲಿಯೂ ದರ ಏರಿಕೆಗೆ ಸಹಕಾರಿಯಾಗುತ್ತದೆ. ಹೀಗಾಗಿ ತಕ್ಷಣವೇ ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಎನ್‍ಡಿಆರ್‍ಎಫ್ ನಿಯಮಾವಳಿಯಂತೆ ಕೇಂದ್ರ ಸರ್ಕಾರ ಪ್ರತಿ ಹೆಕ್ಟೇರ್‍ಗೆ ₹8,500ರಂತೆ ಗರಿಷ್ಠ ಎರಡು ಹೆಕ್ಟೇರ್‍ಗೆ ₹17,000 ಪರಿಹಾರ ನೀಡುತ್ತದೆ. ಅದಕ್ಕೆ ಸಮಾನವಾಗಿ ರಾಜ್ಯ ಸರ್ಕಾರದಿಂದಲೂ ಪರಿಹಾರ ನೀಡಿದರೆ ಪ್ರತಿ ರೈತರಿಗೆ ಒಟ್ಟು ₹34,000 ದೊರಕಬೇಕು. ಆದರೆ ಇದುವರೆಗೆ ಅನೇಕ ರೈತರಿಗೆ ಬೆಳೆ ಹಾನಿ ಪರಿಹಾರವೇ ಬಂದಿಲ್ಲ. ಹಲವು ರೈತರ ಡೇಟಾ ಎಂಟ್ರಿ ಆಗದಿರುವುದೇ ಇದಕ್ಕೆ ಕಾರಣವಾಗಿದೆ. ತಕ್ಷಣವೇ ಡೇಟಾ ಎಂಟ್ರಿ ಪೂರ್ಣಗೊಳಿಸಿ ಎಲ್ಲ ಅರ್ಹ ರೈತರಿಗೆ ಸಂಪೂರ್ಣ ಪರಿಹಾರ ದೊರಕುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಯಳಸಂಗಿ ಒತ್ತಾಯಿಸಿದರು.
ಪ್ರಸಕ್ತವಾಗಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಹೆಚ್ಚಿನ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. ಈ ಬಾರಿ ತೊಗರಿ ಬೆಳೆ ಸಂಪೂರ್ಣ ಹಾಳಾಗಿರುವ ಹಿನ್ನೆಲೆಯಲ್ಲಿ ನೂರಕ್ಕೆ ನೂರರಷ್ಟು ಬೆಳೆ ವಿಮೆ ದೊರಕುವಂತೆ ಕಲಬುರಗಿ ಜಿಲ್ಲಾಡಳಿತ ಮುಂದಾಗಬೇಕು. ಕೇಂದ್ರ ಸರ್ಕಾರ 9.67 ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅನುಮತಿ ನೀಡಿರುವುದರಿಂದ, ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ ₹1,000 ಪೆÇ್ರೀತ್ಸಾಹ ಧನ ನಿಗದಿ ಮಾಡಿ ತಕ್ಷಣವೇ ಖರೀದಿ ಕೇಂದ್ರಗಳನ್ನು ಆರಂಭಿಸುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
Comments are closed.