Shubhashaya News

ಆಳಂದದಲ್ಲಿ ಸಿಪಿಐ ಶತಮಾನೋತ್ಸವ ಜಾಥಾ

ಆಳಂದ: ಭಾರತ ಕಮ್ಯೂನಿಸ್ಟ್ ಪಕ್ಷಕ್ಕೆ (ಸಿಪಿಐ) ಬಂಡವಾಳ ಶಾಹಿ ವಿರುದ್ಧ ಹೋರಾಡಿ ಈ ದೇಶದ ರೈತರು, ಕಾರ್ಮಿಕರು ಬಡವರ ಪರ ನ್ಯಾಯ ಮತ್ತು ಹಕ್ಕಿಗಾಗಿ ಶ್ರಮಿಸಿದ ಶತಮಾನದ ಇತಿಹಾಸ ಇದೆ. ಆದರೆ ದೇಶವನ್ನಾಳುತ್ತಿರುವ ಬಿಜೆಪಿ ಮಾತ್ಯಸಂಸ್ಥೆ ಆರ್.ಆರ್.ಎಸ್‍ಗೆ ಇಲ್ಲ ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಆಶ್ಫಾಕ್ ಮುಲ್ಲಾ ಹೇಳಿದರು.
ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿಯ ಬಳಿ ಗುರುವಾರ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಶತಮಾನೋತ್ಸವದ ಅಂಗವಾಗಿ ಪಟ್ಟಣಕ್ಕೆ ಆಗಮಿಸಿದ್ದ ಜಾಥಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಸಿಪಿಐ ಪಕ್ಷದ ನೂರು ವರ್ಷದ ಶತಮಾನ ಮತ್ತು ಆರ್‍ಎಸ್‍ಎಸ್ ಸಂಘಟನೆಯ ಶತಮಾನ ಆಚರಣೆಯಲ್ಲಿ ದೊಡ್ಡ ವ್ಯತ್ಯಾಸವಿದೆ. ಸಿಪಿಐ ಮುಖಂಡರು ಹೋರಾಟದ ಮೂಲಕ ಜೈಲಿಗೆ ಹೋಗಿದ್ದಾರೆ. ಆದರೆ ಆರ್‍ಎಸ್‍ಎಸ್-ಬಿಜೆಪಿಯ ಶಾಸಕರು ಮತ್ತು ಸಚಿವರು ಭ್ರμÁ್ಟಚಾರದ ಆರೋಪದಲ್ಲಿ ಜೈಲಿಗೆ ಹೋಗಿದ್ದಾರೆ. ಇದೇ ಎರಡರ ನಡುವಿನ ವ್ಯತ್ಯಾಸ. ಇಲ್ಲಿ ಪಕ್ಷದ ನಿμÁ್ಠವಂತರು, ತ್ಯಾಗ-ಬಲಿದಾನ ಮತ್ತು ಪ್ರಾಮಾಣಿಕತೆ ಇದ್ದರೆ, ಅಲ್ಲಿ ಅಧಿಕಾರಕ್ಕಾಗಿ ಪ್ರಯತ್ನಿಸುವ ಗುಂಪು ಇದೆ” ಎಂದು ಆರ್‍ಎಸ್‍ಎಸ್ ಮತ್ತು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದರು.
ಈ ಸಂದರ್ಭದಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್ ಜಾಥಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಶತಮಾನದ ಇತಿಹಾಸವನ್ನು ಕುರಿತು ವಿವರಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್) ಮತ್ತು ಬಿಜೆಪಿಯೊಂದಿಗೆ ಸಿಪಿಐಯ ಹೋರಾಟದ ವ್ಯತ್ಯಾಸವನ್ನು ಎತ್ತಿ ತೋರಿಸುತ್ತಾ, ಪಕ್ಷದ ಮುಖಂಡರು ತ್ಯಾಗ ಮತ್ತು ಬಲಿದಾನದೊಂದಿಗೆ ಮುನ್ನಡೆಯುತ್ತಾರೆ ಇಂಥ ಐತಿಹಾಸಿಕ ಪಕ್ಷವನ್ನು ಮುನ್ನೆಡೆಸಲು ಜನ ಒಕ್ಕೂರಲಿನಿಂದ ಬೆಂಬಲವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.
ಪಕ್ಷದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಡಾ. ಕೆ.ಎಸ್. ಜನಾರ್ಧನ್ ಮಾತನಾಡಿ, ಕಾರ್ಮಿಕ ಮತ್ತು ರೈತ ಹೋರಾಟಗಳಲ್ಲಿ ಸಿಪಿಐಯ ಪಾತ್ರವನ್ನು ಶ್ಲಾಘಿಸಿದರು.
ಇನ್ನೂರ್ವ ಹಿರಿಯ ಮೌಲಾ ಮುಲ್ಲಾ ಅವರು, ಪಕ್ಷದ ಶತಮಾನದ ಸಾಧನೆಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಲ್ಲದೆ, ಆಳಂದ ಕ್ಷೇತ್ರದಲ್ಲಿ ಮೂರು ದಶಕಗಳಲ್ಲಿ ಸಕ್ಕರೆ ಕಾರ್ಖಾನೆ, ಆಳಂದ ನೀರು ವ್ಯವಸ್ಥೆ, ಬಸ್ ನಿಲ್ದಾಣ ಸಾರ್ವಜನಿಕ ಆಸ್ಪತ್ರೆ ಸ್ಥಾಪಿಸುವಲಿ ಹೋರಾಟದ ಕೊಡುಗೆ ಇದೆ ಎಂದು ಹೇಳಿದರು.
ಜಿಲ್ಲಾ ಮುಖಂಡ ಭೀಮಾಶಂಕರ ಮಾಡಿಯಾಳ, ಪ್ರಬುದೇವ ಯಳಸಂಗಿ ಮತ್ತಿತರು ಮಾತನಾಡಿದರು.
ಕಟ್ಟಡ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಶುಭಾμï ಬಳೂರಿಗೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೈಲಾರಿ ಜೋಗೆ, ನ್ಯಾಯವಾದಿ ಪಂಡಿತ್ ಸಲ್ಗರೆ, ಪಾಲವನಹಳ್ಳಿ ಪ್ರಸನ್ನ, ರಾಜ್ಯ ನಿವೇಶನ ಮತ್ತು ವಸ್ತಿ ರೈತ ಸಮಿತಿಯ ಕಾರ್ಯದರ್ಶಿ ಎ.ಎಸ್. ಮೋನಪ್ಪ, ಕಲ್ಯಾಣಿ ತುಕಾಣೆ, ಅಮಿನ ಪಟೇಲ, ಆರೀಪ್ ಅಲಿ ಲಂಗಡೆ, ಫಕ್ರೋದ್ದೀ£ ಗೋಳಾ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭುದೇವ್ ಯಳಸಂಗಿ ವಂದಿಸಿದರು.
ಈ ಜಾಥಾದಲ್ಲಿ ಕಾರ್ಯಕರ್ತರು ಮತ್ತು ಮುಖಂಡರು, ಮಹಿಳಾ ಮುಖಂಢರು ಭಾಗವಹಿಸಿ, ಪಕ್ಷದ ಶತಮಾನದ ಹೋರಾಟದ ಸಂಕೇತವಾಗಿ ಘೋಷಣೆಗಳನ್ನು ಕೂಗಿದರು. ಕಲಬುರಗಿ ಜಿಲ್ಲೆಯಲ್ಲಿ ಸಿಪಿಐ ಆರಂಬಿಸಿದ ತನ್ನ ಶತಮಾನೋತ್ಸವ ಜಾಥಾ ವಿವಿಧ ಕಡೆ ಸಂಚರಿಸುತ್ತಿದ್ದು, ಆಳಂದದಲ್ಲಿ ಈ ಕಾರ್ಯಕ್ರಮ ಆಯೋಜಿಸಿ ಮುಖಂಡರು ಪಕ್ಷದ ಸಾಧನೆ ಹೋರಾಟ ತ್ಯಾಗ ಪರಿಶ್ರಮದ ಸ್ಮರಿಸಿದರು.

Comments are closed.

Don`t copy text!