Shubhashaya News

ಶಿವರಾಜ ಪಾಟೀಲ ಚಾಕುರಕರ್ ನಿಧನಕ್ಕೆ ಗುತ್ತೇದಾರ ಸಂತಾಪ

ಮಹಾರಾಷ್ಟ್ರದ ಹಿರಿಯ ರಾಜಕೀಯ ಮುತ್ಸದ್ಧಿ. ಕೇಂದ್ರದ ಮಾಜಿ ಸಚಿವರು ಹಾಗೂ ಮಾಜಿ ರಾಜ್ಯಪಾಲರಾಗಿದ್ದ ಶಿವರಾಜ ಪಾಟೀಲ ಚಾಕುರಕರ್ ನಿಧನಕ್ಕೆ ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಹಿಂದುಳಿದ ಭಾಗ ಲಾತೂರ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಅವರು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮಾಡಿಸಿದ್ದರು. ಕೇಂದ್ರ ಸರ್ಕಾರದಲ್ಲಿ ಗೃಹ ಖಾತೆಯ ಜೊತೆಗೆ ಅನೇಕ ಖಾತೆಗಳನ್ನು ನಿರ್ವಹಿಸಿದ್ದ ಅನುಭವ ಅವರಿಗಿತ್ತು. ಅಲ್ಲದೇ ಲೋಕಸಭೆಯ ಸ್ಪೀಕರ್ ಆಗಿ, ಪಂಜಾಬ್ ಮತ್ತು ಚಂಡೀಗಢ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಅಗ್ರಗಣ್ಯ ನಾಯಕರಾಗಿದ್ದ ಅವರ ನಿಧನದಿಂದ ರಾಷ್ಟ್ರವು ಒಬ್ಬ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡು ಬಡವಾಗಿದೆ ಎಂದು ಸಂತಾಪ ಪತ್ರದಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.