ಆಳಂದ: ಜಿಡಗಾ ಶ್ರೀಮಠದ ಡಾ. ಮುರುಘರಾಜೇಂದ್ರ ಶ್ರೀಗಳ 41ನೇ ಗುರುವಂದನೆ ಸಮಾರಂಭ ಮುನ್ನ ಸೋಮವಾರ ಶ್ರೀಮಠದ ಆವರಣದಲ್ಲಿ 100 ಅಡಿ ಎತ್ತರದ ರಾಷ್ಟ್ರಧ್ವಜಾರೋಹಣ ನೆರವೇರಿತು.

ಆಳಂದ: ದಿವ್ಯಶಕ್ತಿಯ ಭವ್ಯ ಪರಂಪರೆ ಹೊಂದಿರುವ ಇಲ್ಲಿಯ ಜಿಡಗಾ ನವಕಲ್ಯಾಣ ಮಠದಲ್ಲಿ ಸೋಮವಾರ 100 ಅಡಿ ಎತ್ತರದ ರಾಷ್ಟ್ರಧ್ವಜ ಬಾನಂಗಣದಲ್ಲಿ ರಾರಾಜಿಸಿತು ಇದಕ್ಕೆ ಪುಷ್ಠಿ ನೀಡುವಂತೆ 2 ಸಾವಿರ ವಿದ್ಯಾರ್ಥಿಗಳು ತ್ರಿವರ್ಣ ವರ್ಣದ ಬಲೂನಗಳನ್ನು ಆಕಾಶಕ್ಕೆ ಹಾರಿ ಬಿಟ್ಟು ಆಕಾಶದಲ್ಲಿ ಚಿತ್ತಾರ ಮೂಡಿಸಿದರು.
ಜಿಡಗಾ ಮುಗಳಖೋಡ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮಿಗಳ 41ನೇ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ 100 ಅಡಿ ಎತ್ತರದ ರಾಷ್ಟøಧ್ವಜಾರೋಹಣ, ಧ್ವಜವಂದನೆ ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂದು ಭಕ್ತಾದಿಗಳ ಮನದಲ್ಲಿ ಸಂತೋಷ ಇಮ್ಮಡಿಗೊಳಿಸಿತು.
ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ಉದ್ದೇಶದಿಂದ ತಮ್ಮ ಜನ್ಮದಿನವನ್ನು ಈ ವರ್ಷ ಮುಡಿಪಾಗಿಟ್ಟಿರುವ ಪೂಜ್ಯರು 25 ಅಡಿ ಉದ್ದ, 15 ಅಡಿ ಅಗಲದ ರಾಷ್ಟ್ರಧ್ವಜವನ್ನು ದೇಶಕ್ಕೆ ಸಮರ್ಪಣೆ ಮಾಡಿದರು. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 20 ಜನ ಮಾಜಿ ಸೈನಿಕರು ರಾಷ್ಟ್ರಧ್ವಜದ ಉಸ್ತವಾರಿ ಹೊತ್ತು ಧ್ವಜಾರೋಹಣ ಕಾರ್ಯಕ್ರಮ ನೇರವೇರಿಸಿಕೊಟ್ಟರು.
ರಾಷ್ಟ್ರ ಧ್ವಜಾರೋಹಣದ ಸಮಯದಲ್ಲಿ ಮುಗಳಖೋಡ, ಕೋಟನೂರ, ಕಲಬುರಗಿ, ಜಿಡಗಾ, ಜಮಗಾ, ಕವಲಗಾ ಹಾಗೂ ಆಳಂದನ ಸಾವಿರಾರು ವಿದ್ಯಾರ್ಥಿಗಳು ಪ್ರತ್ಯಕ್ಷದರ್ಶಿಗಳಾಗಿ ದೇಶಪ್ರೇಮದ ಅಲೆಯಲ್ಲಿ ಕುಣಿದಾಡಿದರು.
ಧ್ವಜಾರೋಹಣದ ನಂತರ ಕಲಬುರಗಿ, ಮುಗಳಖೋಡ, ಕೋಟನೂರ ಹಾಗೂ ಜಿಡಗಾದ ವಿವಿಧ ಶಾಲೆಗಳ ಮಕ್ಕಳು ಹಾಗೂ ಸಿಬ್ಬಂದಿಗಳು 19 ತಂಡಗಳಲ್ಲಿ ಬಂದು ಧ್ವಜ ವಂದನೆ ಸಲ್ಲಿಸಿದರು. ಧ್ವಜ ವಂದನೆಯಲ್ಲಿ ಕುದುರೆ ದಳ, ರೈತ ಸಮೂಹ, ಸ್ವಾತಂತ್ರ್ಯ ಹೋರಾಟಗಾರರು, ಗೋಂದಲಿಗರ ಮೇಳ, ಸೂಫಿ ಪರಂಪರೆ, ವೀರ ರಾಣಿಯರು, ಚಂಡಿ ವಾದ್ಯ, ಎನ್‍ಎಸ್‍ಎಸ್ ಕವಾಯಿತು, ಭಾರತ ಸ್ಕೌಟ್ ಮತ್ತು ಗೈಡ, ಮಿಲಿಟರಿ ಕವಾಯಿತು, ಸಂತ ಪರಂಪರೆ, ಶರಣ ಸಂಕುಲ, ನಾರಿ ಶಕ್ತಿ, ಮಹಿಳಾ ಸಾಧಕಿಯರ ತಂಡದ ಧ್ವಜ ವಂದನೆ ಗಮನ ಸೆಳೆಯಿತು. ಕೊನೆಯಲ್ಲಿ ಆನೆ ಮುರುಘರಾಜೇಂದ್ರ ಮಹಾಸ್ವಾಮಿಗಳನ್ನು ತ್ರಿವರ್ಣ ಧ್ವಜದಲ್ಲಿ ಸನ್ಮಾನಿಸಿ ಧ್ವಜ ವಂದನೆ ಸಲ್ಲಿಸಿದ್ದು ನೆರೆದವರ ಗಮನ ಸೆಳೆಯಿತು.
ಗಣರಾಜ್ಯೋತ್ಸವದ ರೀತಿ ನಡೆದ ಆಕರ್ಷಕ ಪಥ ಸಂಚಲನ ವೇದಿಕೆಯ ಮೇಲಿದ್ದ ಪೂಜ್ಯರು, ಗಣ್ಯರು ಹಾಗೂ ನೆರೆದಿದ್ದ ಜನಸಮೂಹವನ್ನು ಕೆಲವು ಕ್ಷಣದ ಹೊತ್ತಿನವರೆಗೆ ಮಂತ್ರಮುಗ್ಧವನ್ನಾಗಿ ಮಾಡಿತ್ತು. ಪ್ರತಿ ತಂಡ ಧ್ವಜವಂದನೆ ನೀಡಲು ಬಂದಾಗ ಜನತೆ ಶಿಳ್ಳೆ, ಕೇಕೆ ಹಾಕಿ ಚಪ್ಪಾಳೆ ತಟ್ಟಿ ಪೆÇ್ರೀತ್ಸಾಹಿಸುತ್ತಿದ್ದರು.
ಬಬಲಾದ ಮಠದ ಶ್ರೀ ಗುರುಪಾದಲಿಂಗ ಶ್ರೀಗಳು, ಉದಗಿರ, ಪಡಸಾವಳಿ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು, ಆಳಂದ ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು, ಸಂಸ್ಥಾನ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯರು, ಮಾದನಹಿಪ್ಪರಗಾ ಶಿವಲಿಂಗ ಮಹಾಸ್ವಾಮಿಗಳು, ಚಲಗೇರಾ ಶ್ರೀ ಶಾಂತವೀರ ಶಿವಾಚಾರ್ಯರು, ಚೌದಾಪೂರಿ ಮಠÀದ ಶ್ರೀ, ಮಾಶಾಳ ಶ್ರೀ ಹಲವು ಭಾಗದ ಮಠಾಧೀಶರು, ಸಾಧು ಸಂತರು ಒಳಗೊಂಡು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂ ಪ್ರಭು ಪಾಟೀಲ, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇಂದು ಕಾರ್ಯಕ್ರಮ:
ಡಿ.2ರಂದು ಮಹಾರುದ್ರಾಭಿμÉೀಕ, ಸಾಂಸ್ಕೃತಿಕ ಮಹಾಸಭೆ, ರಾಜ್ಯಮಟ್ಟದ ಸನ್ಮಾನ ಸಮಾರಂಭದೊಂದಿಗೆ 41ನೇ ಗುರುವಂದನಾ ಮಹೋತ್ಸವ ವಿಜೃಂಭಣೆಯಿಂದ ಮುಕ್ತಾಯಗೊಳ್ಳಲಿದೆ.
Comments are closed.