Shubhashaya News

ಡಿ.ಕೆ. ಶಿವಕುಮಾರ್‍ಗೆ ಸಿಎಂ ಕುರ್ಚಿ ಕೊಡದಿದ್ದರೆ ಕಾಂಗ್ರೆಸ್ 2028ರಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ: ಕಲಬುರಗಿ ಪ್ರಾಧ್ಯಾಪಕ ನಾಗೇಂದ್ರ ಮಾನೆ ಎಚ್ಚರಿಕೆ

ಆಳಂದ: ಕರ್ನಾಟಕ ಕಾಂಗ್ರೆಸ್‍ನ ಕುರ್ಚಿ ಕಾದಾಟ ತಾರಕಕ್ಕೇರಿದ್ದು, ಇದೀಗ ಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳೂ ಸಹ ನೇರವಾಗಿ ಕಣಕ್ಕಿಳಿದಿದ್ದಾರೆ.

ಆಳಂದ ಕ್ಷೇತ್ರದ ಪ್ರಮುಖ ಕಾಂಗ್ರೆಸ್ ಹಿತೈಷಿ ಹಾಗೂ ಕಲಬುರಗಿ ಎಸ್‍ಎಚ್‍ಇಎಸ್ ಬಿ.ಎಡ್ ಕಾಲೇಜಿನ ಪ್ರಾಧ್ಯಾಪಕ, ದಲಿತ, ಶೋಷಿತ ಚಳವಳಿಯ ತೆರೆಮೆರೆಯ ಅನುಭವಿ ನಾಗೇಂದ್ರ ಮಾನೆ ಅವರು ಗುರುವಾರ ಪತ್ರಿಕಾ ಹೇಳಿಕೆಯ ಮೂಲಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

“ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ದೊಡ್ಡ ಅನ್ಯಾಯವಾಗುತ್ತದೆ. ಪಕ್ಷ ದುರ್ಬಲಗೊಳ್ಳುತ್ತದೆ, 2028ರಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ” ಎಂದು ಹೈಕಮಾಂಡ್‍ಗೆ ನೇರ ಎಚ್ಚರಿಕೆ ನೀಡಿದ್ದಾರೆ.

“ಶಿಸ್ತಿನ ಸಿಪಾಯಿ ಡಿ.ಕೆ.ಶಿ.ಗೆ ಸಿಎಂ ಕುರ್ಚಿ ಕೊಡದಿದ್ದರೆ ಮೂಲ ಕಾಂಗ್ರೆಸ್ಸಿಗರ ರಕ್ತ ಕುದಿಯುತ್ತದೆ” ಡಿ.ಕೆ. ಶಿವಕುಮಾರ್ ಅವರ ಪಕ್ಷ ನಿμÉ್ಠ, ತ್ಯಾಗ ಮತ್ತು 2023ರ ಐತಿಹಾಸಿಕ ಗೆಲುವಿನಲ್ಲಿ ಅವರ ಪಾತ್ರವನ್ನು ಮರೆಯದಂತ್ತಿದೆ. “ಕಾಂಗ್ರೆಸ್ ಪಕ್ಷಕ್ಕಾಗಿ ತನು-ಮನ-ಧನ ತೊಡಗಿಸಿಕೊಂಡ ಶಿಸ್ತಿನ ಸಿಪಾಯಿ ಡಿ.ಕೆ. ಶಿವಕುಮಾರ್” ಕೇಂದ್ರದ ಬಿಜೆಪಿ ಸರ್ಕಾರದಿಂದ ಇಡಿ, ಸಿಬಿಐ ತೊಂದರೆಗಳನ್ನು ಎದುರಿಸಿ ಪಕ್ಷವನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ರಾಜ್ಯದ ಅಧ್ಯಕ್ಷರಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಸುತ್ತಿ, ಕಾರ್ಯಕರ್ತರಿಗೆ ಶಕ್ತಿ ತುಂಬಿ, ವಿಶೇಷವಾಗಿ ಯುವಕರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ಎಲ್ಲಾ ಹಿರಿಯ ನಾಯಕರನ್ನು ಒಗ್ಗೂಡಿಸಿ, ಹೊಸ ರಣತಂತ್ರಗಳ ಮೂಲಕ 2023ರಲ್ಲಿ ಅಭೂತಪೂರ್ವ 138 ಸೀಟುಗಳ ಗೆಲುವು ತಂದಿದ್ದಾರೆ ಇದು ಕರ್ನಾಟಕ ಕಾಂಗ್ರೆಸ್ ಇತಿಹಾಸದಲ್ಲಿ ದಾಖಲೆಯನ್ನು ಹೈಕಮಾಂಡ ಮರೆಯಬಾರದು ಎಂದರು. “ಹೈಕಮಾಂಡ್ ಡಿ.ಕೆ.ಶಿ.ಗೆ ಅನ್ಯಾಯ ಮಾಡಿದರೆ 2028ರಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳುತ್ತದೆ ತೀವ್ರ ಆತಂಕ ವ್ಯಕ್ತಪಡಿಸಿದ ಮಾನೆ ಅವರು, ಒಂದು ವೇಳೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲಗೊಳ್ಳುತ್ತದೆ. ಮೂಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೃಹತ್ ಅಸಮಾಧಾನ ಮೂಡುತ್ತದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಅಸಾಧ್ಯವಾಗುತ್ತದೆ.

ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಪಕ್ಷಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತದೆ, ಯುವಜನತೆ ಪಕ್ಷದತ್ತ ಆಕರ್ಷಿತಗೊಳ್ಳುತ್ತಾರೆ, ಮತ್ತೆ ಕಾಂಗ್ರೆಸ್ ಬೃಹತ್ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ.” ಎಂದು ಅವರು ಹೇಳಿದ್ದಾರೆ.

Comments are closed.

Don`t copy text!