Shubhashaya News

ಬೆಳೆ ಹಾನಿ ಸಮಪರ್ಕ ಪರಿಹಾರಕ್ಕೆ ಒತ್ತಾಯಿಸಿ ನಿಂಬರ್ಗಾದಲ್ಲಿ ಪ್ರತಿಭಟನೆ

ಆಳಂದ: ನಿಂಬರಗಾ ವಲಯದ ರೈತರಿಗೆ ಸೂಕ್ತ ಬೆಳೆ ಪರಿಹಾರ ಸೇರಿ ಇನಿತರ ಬೇಡಿಕೆ ಒತ್ತಾಯಿಸಿ ಕರವೇ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ ಆರ್. ಮಹೇಶ ಮತ್ತು ಕೃಷಿಅಧಿಕಾರಿಗೆ ಮನವಿ ಸಲ್ಲಿಸಿದರು.

ಆಳಂದ: ಬೆಳೆ ನಷ್ಟಕ್ಕೆ ಕಾಟಾಚಾರದ ಪರಿಹಾರ ನೀಡಿದ್ದು ಸರಿಯಲ್ಲ. ಹಾನಿಗೆ ಸೂಕ್ತ ಪರಿಹಾರ, ತಕ್ಷಣದ ಬೆಳೆ ಸರ್ವೇ ನಡೆಸಿ ವಿಮೆ ಮಂಜೂರಾತಿ ಸೇರಿದಂತೆ ಇತರ ಬೇಡಿಕೆ ಮುಂದಿಟ್ಟುಕೊಂಡು ಕರವೇ ವಲಯ ಘಟಕದ ಆಶ್ರಯದಲ್ಲಿ ಬುಧವಾರ ನಿಂಬರ್ಗಾ ನಾಡತಹಸೀಲ್ದಾರ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಂತರ ಉಪ ತಹಸಿಲ್ದಾರ್ ಆರ್. ಮಹೇಶ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಭೀಕರ ನಷ್ಟ ಅನುಭವಿಸಿದ್ದಾರೆ. ಆದರೆ ಇನ್ನೂ ಬೆಳೆ ಸರ್ವೇ ಪೂರ್ಣಗೊಂಡಿಲ್ಲ, ವಿಮೆ ಹಣ ಬಿಡುಗಡೆಯಾಗಿಲ್ಲ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ನಿನ್ನೆ ಹಾಕಿದ ಪರಿಹಾರ ಎರಡು ಸಾವಿರ, ಮೂರು ಸಾವಿರ ಹೀಗೆ ತಲಾ ರೈತರಿಗೆ ಸಮನಾಗಿ ನೀಡಿದೆ ಅವೈಜ್ಞಾನಿಕವಾಗಿ ಪರಿಹಾರ ಕಡಿಮೆಯಾಗಿ ನೀಡಿದ್ದು ಯಾವ ಲೆಕ್ಕದಲ್ಲಿ ನೀಡಲಾಗಿದೆ, ಸಮಪರ್ಕವಾಗಿ ಪರಿಹಾರ ಎಲ್ಲಾ ರೈತರಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿ ಶೀಘ್ರದಲ್ಲೇ ಮೇಲಾಧಿಕಾರಿಗಳಿಗೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಸವರಾಜ ಯಳಸಂಗಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಉಪಾಧ್ಯಕ್ಷ ಮಲ್ಲಿನಾಥ ದುಗೊಂಡ, ಶ್ರೀಮಂತ ವಗ್ದರ್ಗಿ, ಅಮೃತ ಬಿಬ್ರಾಣಿ, ಸೂರ್ಯಕಾಂತ ಕಂಟೇಕರ, ರಮೇಶ ಗುರಾಮಳಿ, ಸರ್ವ ಸಮಾಜ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ದುಗೊಂಡ, ಧರ್ಮರಾಯ ಎಸ್. ಕಾಮನಗೊಳ, ಶಿವಶರಣ ವಾಗ್ದ್ರಗಿ, ಹಣಮಂತ ಸನಗುಂದಿ, ನಿಂಗಣ್ಣ ಬೆಳ್ಳಿ, ಚಂದ್ರಕಾಂತ ಅವಟೆ, ಶಾಕಿರ ಡಾಂಗೆ, ಮಹೇಂದ್ರ ನಿರ್ಮಲ್ಕರ, ಖ್ಯಾಮಲಿಂಗ ಕಂಬಾರ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ರೈತ ಬಾಂಧವರು ಭಾಗವಹಿಸಿದ್ದರು.

Comments are closed.

Don`t copy text!