ಆಳಂದ: ಸಿಯುಕೆಯಲ್ಲಿ ಕ್ರೀಡಾ ಸೌಲಭ್ಯದ ವಿವಿಧ ಕೋರ್ಟ್‍ಗಳನ್ನು ಕುಪಪತಿ ಪ್ರೊ ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ, ಕ್ರೀಡಾ ನಿರ್ದೇಶಕ ಪೆÇ್ರ. ಎಂ.ಎಸ್. ಪಾಸೋಡಿ ಇತರರು ಇದ್ದರು.
ಆರೋಗ್ಯದಿಂದಲೇ ವಿದ್ಯಾರ್ಥಿಗಳ ಸದೃಢ ಭವಿಷ್ಯ” ಕುಲಪತಿ ಪೆÇ್ರ. ಬಟ್ಟು
ಆಳಂದ: ವಿದ್ಯಾರ್ಥಿಗಳನ್ನು ಆರೋಗ್ಯವಂತರನ್ನಾಗಿ ಮತ್ತು ಸದೃಢರನ್ನಾಗಿ ಮಾಡಲು ಕ್ರೀಡಾ ಸೌಲಭ್ಯಗಳು ಅತ್ಯಂತ ಪ್ರಮುಖ. ಶೈಕ್ಷಣಿಕ ಶ್ರೇಷ್ಠತೆಗೆ ಕ್ರೀಡೆ ಕೂಡ ಕೈಜೋಡಿಸಿದಾಗಲೇ ಸಮಗ್ರ ವ್ಯಕ್ತಿತ್ವ ವಿಕಾಸ ಸಾಧ್ಯ” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ಕಡಗಂಚಿ ಬಳಿಯಿರುವ ಸಿಯುಕೆಯಲ್ಲಿ ಕ್ರಿಕೆಟ್ ಅಭ್ಯಾಸದ ನೆಟ್, ಬಾಲ್ ಬ್ಯಾಡ್ಮಿಂಟನ್ ಮತ್ತು ಶಟಲ್ ಬ್ಯಾಡ್ಮಿಂಟನ್ ಕೋರ್ಟುಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ಕ್ರೀಡಾ ವಿಕಾಸಕ್ಕೆ ನೀಡಲಾಗುತ್ತಿರುವ ಆದ್ಯತೆ ವಿವರಿಸಿದರು.
“400 ಮೀಟರ್ ರನ್ನಿಂಗ್ ಟ್ರ್ಯಾಕ್ ಮತ್ತು ಹ್ಯಾಂಡ್‍ಬಾಲ್ ಕೋರ್ಟ್ ನಿರ್ಮಾಣ ಕಾರ್ಯ ಈಗಾಗಲೇ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ವಿಶ್ವವಿದ್ಯಾಲಯ ಈಗಾಗಲೇ ಕ್ರಿಕೆಟ್ ಮೈದಾನ, ಬಾಸ್ಕೆಟ್‍ಬಾಲ್, ಫುಟ್ಬಾಲ್ ಮೈದಾನ, ಅತ್ಯಾಧುನಿಕ ಜಿಮ್ ಮತ್ತು ಫಿಟ್ನೆಸ್ ಸೆಂಟರ್‍ನ್ನು ಹೊಂದಿದೆ. ವಿದ್ಯಾರ್ಥಿಗಳು ತಮ್ಮ ಆರೋಗ್ಯ ಮತ್ತು ದೈಹಿಕ ಸಾಮಥ್ರ್ಯ ಹೆಚ್ಚಿಸಲು ಈ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು” ಎಂದು ಕುಲಪತಿ ಸಲಹೆ ನೀಡಿದರು.
ನಮ್ಮ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಶ್ವವಿದ್ಯಾಲಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರುವರು ಎಂಬ ನಿರೀಕ್ಷೆಯಿದೆ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ, ಕ್ರೀಡಾ ನಿರ್ದೇಶಕ ಪೆÇ್ರ. ಎಂ.ಎಸ್. ಪಾಸೋಡಿ, ಸಿಒಇ ಡಾ. ಕೋಟ ಸಾಯಿಕೃಷ್ಣ, ಹಣಕಾಸು ಯೋಜನಾಧಿಕಾರಿ ರಾಮದೊರೈ, ಪೆÇ್ರ. ಬಸವರಾಜ ಡೋಣೂರ, ಪೆÇ್ರ. ಜಿ.ಆರ್. ಅಂಗಡಿ, ಡಾ. ಬಸವರಾಜ ಕುಬಕಡ್ಡಿ, ಡಾ. ವೀರೇಶ ಕಸಬೇಗೌಡರ, ಡಾ. ಪಿ.ಎಸ್. ಕಟ್ಟಿಮಣಿ, ಡಾ. ಶಾಮಾರವರು ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments are closed.