ಪಿಸಾ ಸಮ್ಮೇಳನದಿಂದ ಸಿಕ್ಕ ಜಾಗತಿಕ ಮಾನ್ಯತೆ ಅಂತರರಾಷ್ಟ್ರೀಯ ವಿಜ್ಞಾನಿಗಳೊಡನೆ ಚರ್ಚೆಗಳ ಮೂಲಕ ಭಾರತ–ಇಟಲಿ ಸಂಶೋಧನಾ ಸಹಕಾರಕ್ಕೆ ದಾರಿ: ಸಿಯುಕೆ ಕುಲಸಚಿವ ಬಿರಾದಾರ್
ಆಳಂದ: ಸಿಯುಕೆ ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ ಅವರನ್ನು ಶಿಕ್ಷಕ ವರ್ಗದಿಂದ ನೀಡಿದ ಸನ್ಮಾನ ಸ್ವೀಕರಿಸಿ ಇಟಲಿಯ ಪಿಸಾ ಸಮ್ಮೇಳನದ ಅನುಭವ ಹಂಚಿಕೊಂಡರು.
ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಅವರಿಗೆ ಸಿಯುಕೆ ಅಧ್ಯಾಪಕರು ವಿಶೇಷ ಸನ್ಮಾನ ನೀಡಿ ಗೌರವಿಸಿದರು.
ಇತ್ತೀಚೆಗೆ ಇಟಲಿಯ ಪಿಸಾ ವಿಶ್ವವಿದ್ಯಾಲಯದಲ್ಲಿ ನಡೆದ ‘ದಿ ಮೈಕ್ರೋಪೇಲಿಯಂಟಾಲಜಿಕಲ್ ಸೊಸೈಟಿ’ಯ ವಾರ್ಷಿಕ ಸಮ್ಮೇಳನದಲ್ಲಿ “ಭಾರತದಲ್ಲಿ ತೈಲ ಪರಿಶೋಧನೆಯಲ್ಲಿ ಸೂಕ್ಷ್ಮ ಪಳೆಯುಳಿಕೆಗಳ ಆರ್ಥಿಕ ಪ್ರಯೋಜನಗಳು: ಒಎನ್‍ಜಿಸಿಯ ಒಂದು ಅಧ್ಯಯನ” ಎಂಬ ತಮ್ಮ ಸಂಶೋಧನಾ ಪ್ರಬಂಧಕ್ಕೆ ದೊರೆತ ಜಾಗತಿಕ ಮೆಚ್ಚುಗೆಯ ಜೊತೆಗೆ ಅಲ್ಲಿನ ವೈಜ್ಞಾನಿಕ ಚರ್ಚೆಗಳು, ಹೊಸ ಅನುಭವಗಳು ಮತ್ತು ಭವಿಷ್ಯದ ಸಂಶೋಧನಾ ಸಹಕಾರದ ಸಾಧ್ಯತೆಗಳನ್ನು ಅವರು ಹಂಚಿಕೊಂಡರು.
ಸಿಎಂಡಿಆರ್ ಧಾರವಾಡದಿಂದ “ಸಾರ್ವಜನಿಕ ಅರ್ಥಶಾಸ್ತ್ರದಲ್ಲಿ” ಎರಡನೇ ಪಿಎಚ್‍ಡಿ ಪದವಿಯನ್ನು ಪಡೆದಿದ್ದಕ್ಕಾಗಿ ಸಿಯುಕೆಯ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣೆ, ವಾಣಿಜ್ಯ ಮತ್ತು ವಿದ್ಯುತ್ ಇಂಜಿನಿಯರಿಂಗ್ ವಿಭಾಗದ ಅಧ್ಯಾಪಕರು ಅವರನ್ನು ಸನ್ಮಾನಿಸಿದರು.
ಉತ್ತಮ ಆಡಳಿತಗಾರರಾಗಿ ಮತ್ತು ಅತ್ಯುತ್ತಮ ಸಂಶೋಧಕರಾಗಿ ಸೇವೆಯನ್ನು ದಕ್ಷವಾಗಿ ನಿರ್ವಹಿಸಿದ್ದಕ್ಕಾಗಿ ನೀಡಿದ ಗೌರವ ಸ್ವೀಕರಿಸ ಅವರು ತಮ್ಮ ಇಟಲಿಯ ಸಮ್ಮೇಳನದ ಅನುಭವಗಳನ್ನು ಹಂಚಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೆÇ್ರ. ಬಿರಾದಾರ್ ಅವರು, “ಪಿಸಾ ಸಮ್ಮೇಳನವು ನನ್ನ ವೃತ್ತಿಜೀವನದ ಒಂದು ಮಹತ್ವದ ತಿರುವು. ಅಲ್ಲಿ ನಡೆದ ಚರ್ಚೆಗಳು ಕೇವಲ ವೈಜ್ಞಾನಿಕ ಸಂವಾದವಾಗಿರದೆ, ಭಾರತದ ಶಕ್ತಿ ಭದ್ರತೆ ಹಾಗೂ ಪರಿಸರ ಅಧ್ಯಯನಕ್ಕೆ ಹೊಸ ಬಾಗಿಲು ತೆರೆದುವಂತದ್ದಾಗಿತ್ತು” ಎಂದು ಹೇಳಿದರು.
ನ್ಯಾನೊಫಾಸಿಲ್ ವಕ್ರ್ಶಾಪ್‍ನ ಅನುಭವ:
ನವೆಂಬರ್ 5ರಂದು ನಡೆದ ‘ನ್ಯಾನೊಫಾಸಿಲ್ ವಕ್ರ್ಶಾಪ್’ನಲ್ಲಿ ಪಿಸಾ ವಿಶ್ವವಿದ್ಯಾಲಯದ ಪೆÇ್ರ. ಅಂಟೊನಿಯೊ ಬೋನಿ ಅವರೊಂದಿಗೆ ನ್ಯಾನೋ ಮಟ್ಟದ ಸೂಕ್ಷ್ಮಜೀವಾವಶೇಷಗಳ ವಿಶ್ಲೇಷಣೆ ಕುರಿತು ಆಳವಾದ ಚರ್ಚೆ ನಡೆಸಿರುತ್ತಾ, “ನ್ಯಾನೊಫಾಸಿಲ್‍ಗಳು ತೈಲ ಅನ್ವೇಷಣೆಯಲ್ಲಿ 50%ಕ್ಕಿಂತ ಹೆಚ್ಚು ನಿಖರತೆ ನೀಡುವ ಸಾಮಥ್ರ್ಯ ಹೊಂದಿವೆ. ಕೃಷ್ಣ–ಗೋದಾವರಿ ಬೇಸಿನ್‍ನಲ್ಲಿ ಇದನ್ನು ಅಳವಡಿಸಿದರೆ ಭಾರತಕ್ಕೆ ಇದು ಕ್ರಾಂತಿಕಾರಕ” ಎಂದು ಅವರು ಹಂಚಿಕೊಂಡರು.
ಫೆÇೀರಾಮಿನಿಫೆರಾ ಜೀವಾವಶೇಷಗಳ ಕುರಿತು ಭಾರತೀಯ ಸಮುದ್ರೀಯ ಚಟ್ಟೆಗಳ ಡೇಟಾ ಹಂಚಿಕೊಳ್ಳುವುದರ ಮೂಲಕ ಭಾರತ–ಇಟಲಿ ಸಂಯುಕ್ತ ಸಂಶೋಧನೆಗೆ ಮಾರ್ಗ ಸಿದ್ಧವಾಗಿದೆಯೆಂದು ಅವರು ತಿಳಿಸಿದರು.
ವೈಜ್ಞಾನಿಕ ಸೆಷನ್‍ಗಳಲ್ಲಿ ಭಾರತಕ್ಕೆ ಮೆಚ್ಚುಗೆ: “ಯುರೋಪ್‍ನಲ್ಲಿ ಮೈಕ್ರೋಫಾಸಿಲ್ ತಂತ್ರಜ್ಞಾನವು ಒಣ ಕೊಳವೆಗಳ ಅಪಾಯವನ್ನು 35% ಕಡಿಮೆ ಮಾಡಿದೆ. ಆದರೆ ಭಾರತದಲ್ಲಿ ನಮ್ಮ ಅಧ್ಯಯನದಂತೆ 40%ಕ್ಕೂ ಹೆಚ್ಚು ಕಡಿತ ಸಾಧ್ಯ. ಇದು ಒಎನ್‍ಜಿಸಿ ಸೇರಿದಂತೆ ಪೆಟ್ರೋಲಿಯಂ ಕ್ಷೇತ್ರಕ್ಕೆ ದೊಡ್ಡ ಹಣಕಾಸಿನ ಲಾಭವನ್ನು ನೀಡಬಲ್ಲದು,” ಎಂದು ಅವರು ಹೇಳಿದರು.
ಹವಾಮಾನ ಸಂಶೋಧನೆಯಲ್ಲಿ ಹೊಸ ದಿಕ್ಕು:
ಯುನಿವರ್ಸಿಟಿ ಆಫ್ ಟುರಿನ್‍ನ ಪೆÇ್ರ. ಫ್ರಾನ್ಸೆಸ್ಕೊ ಬೆಲ್ಲಿನಿಯೊಂದಿಗೆ ಪ್ಯಾಲಿಯೋಕ್ಲೈಮಾಟಾಲಜಿ ಕುರಿತ ಚರ್ಚೆಯಲ್ಲಿ, “ಇಟಲಿಯ ನದೀ ಡೆಲ್ಟಾಗಳಲ್ಲಿ ಜೀವಾವಶೇಷಗಳು ಸಾವಿರಾರು ವರ್ಷಗಳ ಹವಾಮಾನ ಬದಲಾವಣೆ ದಾಖಲಿಸಿದೆ. ಕರ್ನಾಟಕದ ಕಡಲತೀರದ ಅಧ್ಯಯನಗಳು ಐಪಿಸಿಸಿ ವರದಿಗಳಿಗೆ ಹೊಸ ಮಾಹಿತಿ ಒದಗಿಸಬಹುದು” ಎಂದು ಅವರು ವಿವರಿಸಿದರು.
ಇಂಗ್ಲೆಂಡ್‍ನ ನ್ಯಾಚರಲ್ ಹಿಸ್ಟರಿ ಮ್ಯೂಸಿಯಂ ಸಂಶೋಧಕರೊಂದಿಗೆ ನಡೆದ ಪೆÇೀಸ್ಟರ್ ಸೆಷನ್ ಚರ್ಚೆಯೂ ಅವರಿಗೆ ವಿಶೇಷ ಅನುಭವ ನೀಡಿದ್ದು, “ಭಾರತದ ಬೇಸಿನ್‍ಗಳಲ್ಲಿ ಹೈ-ರೆಸಲ್ಯೂಷನ್ ಮೈಕ್ರೋಫಾಸಿಲ್ ಅನಾಲಿಸಿಸ್ ಅಳವಡಿಸಿದರೆ, 10,000 ವರ್ಷಗಳ ಹವಾಮಾನ ಇತಿಹಾಸವನ್ನು ನಿಖರವಾಗಿ ಪುನರ್ನಿರ್ಮಿಸಬಹುದು” ಎಂದರು.
ಭಾರತ–ಇಟಲಿ ವಿದ್ಯಾರ್ಥಿ ವಿನಿಮಯಕ್ಕೆ ಅವಕಾಶ:
ಈ ಚರ್ಚೆಗಳ ಮೂಲಕ ಭಾರತ–ಇಟಲಿ ಸಂಯುಕ್ತ ಸಂಶೋಧನಾ ಯೋಜನೆಗಳು, ವಿದ್ಯಾರ್ಥಿಗಳಿಗೆ ಪಿಸಾ ವಿಶ್ವವಿದ್ಯಾಲಯದಲ್ಲಿ ಇಂಟನ್ರ್ಶಿಪ್ ಅವಕಾಶಗಳು ಎಂಬ ಯೋಜನೆಗಳು ಆರಂಭವಾಗುವ ಸಾಧ್ಯತೆಗಳನ್ನೂ ಅವರು ಬಿರಾದಾರ ಸೂಚಿಸಿದರು.
ಪಿಸಾ ನಗರದ ವೈಜ್ಞಾನಿಕ ಸಂಸ್ಕøತಿ ಮನಸೂರೆ:
ಪಿಸಾ ನಗರದ ವೈಜ್ಞಾನಿಕ ಪರಂಪರೆ, ಐತಿಹಾಸಿಕ ಕಟ್ಟಡಗಳ ಮಧ್ಯೆ ನಡೆದ ಸಂವಾದಗಳು ನನಗೇ ಹೊಸ ಪ್ರೇರಣೆ ನೀಡಿದೆಯೆಂದು ಅವರು ಸಂತಸ ವ್ಯಕ್ತಪಡಿಸಿದರು. “ಇಟಲಿಯ ಪುರಾತನ ನಗರದಲ್ಲಿ ಸಂಶೋಧನೆ ಕುರಿತು ಚರ್ಚಿಸುವುದು ಭಾರತೀಯ ವಿಜ್ಞಾನಿಗೆ ಸಿಕ್ಕ ಅಪೂರ್ವ ಅವಕಾಶ. ಇದು ಭಾರತದ ಶಕ್ತಿಭವಿಷ್ಯ ಮತ್ತು ಪರಿಸರ ಸಂಶೋಧನೆಗಳಿಗೆ ಹೊಸ ಕನಸುಗಳನ್ನು ಮೂಡಿಸಿತು” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪೆÇ್ರ. ಪಾಂಡುರಂಗ ವಿ. ಪತ್ತಿ, ಡಾ. ಗೌತಮ್ ಡಿ, ಡಾ. ಜಗದೀಶ ಬಿರಾದಾರ, ಡಾ. ಉದಯ ಪಾಟೀಲ್, ಡಾ. ಸಂಗಮೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದ ಗೌರವ ಸನ್ಮಾನ ನೀಡಿದರು.
Comments are closed.