ಕುರಿ-ಉಣ್ಣೆ ಸಂಘದ 10 ವರ್ಷದ ವಂಚನೆಗೆ ತಿಲಾಂಜಲಿ – ಶೇರುದಾರರಿಗೆ 52,000 ಸಾವಿರ ವಾಪಸ್, ಇನ್ನೂ 2 ಲಕ್ಷಕ್ಕೆ ಹೋರಾಟ ಮುಂದುವರಿಕೆ!
ನಿಂಬರ್ಗಾ ಸರ್ವ ಸಮಾಜ ಕಲ್ಯಾಣ ಸಮಿತಿಗೆ ದೊಡ್ಡ ಜಯ:
ಆಳಂದ: ನಿಂಬರಗಾ ಕುರಿ, ಉಣ್ಣೆ ಉತ್ಪಾದಕ ಸಂಘದ ಹೆಸರಿನಲ್ಲಿ ಶೇರು ಸಂಗ್ರಹಿಸಿ ಮೋಸವಾದ ಹೋರಾಟಕ್ಕೆ ಉಪನಿಂಬಂಧಕರ ಆದೇಶಿಸಿದಂತೆ ಹಣ ವಾಪಸು ಪಡೆದ ಶೇರುದಾರರು ವಿಠ್ಠಲ ಕೋಣೆಕರ್ ಸಮ್ಮುಖದಲ್ಲಿ ಸಂತಷ ಹಂಚಿಕೊಂಡರು.
ಆಳಂದ: ನಿಂಬರ್ಗಾ ಸರ್ವ ಸಮಾಜ ಕಲ್ಯಾಣ ಸಮಿತಿಯ ಅಧ್ಯಕ್ಷ ವಿಠ್ಠಲ ಕೋಣೆಕರ್ ಅವರ ನಿರಂತರ ಹೋರಾಟಕ್ಕೆ ಮತ್ತೊಮ್ಮೆ ದೊಡ್ಡ ಯಶಸ್ಸು ಒಲಿದಿದೆ.
ಆಳಂದ ತಾಲೂಕಿನ ನಿಂಬರಗಾದಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಹೆಸರಲ್ಲಿ ಸುಮಾರು ಒಂದು ದಶಕದಿಂದ ನಡೆದಿದ್ದ ಶೇರು ವಂಚನೆ ಪ್ರಕರಣಕ್ಕೆ ತಿರುಗೇಟು ನೀಡುವಲ್ಲಿ ಸಮಿತಿ ಯಶಸ್ವಿಯಾಗಿದೆ. ಈಗಾಗಲೇ 47ಕ್ಕೂ ಹೆಚ್ಚು ಶೇರುದಾರರಿಗೆ ತಲಾ ರೂ.1,100 ರಂತೆ ಒಟ್ಟು 52,000 ಸಾವಿರ ಹಣ ಚೆಕ್ ಮೂಲಕ ವಾಪಸ್ ನೀಡಲಾಗಿದೆ.
ಉಳಿದಂತೆ ಸುಮಾರು 2 ಲಕ್ಷ ಮೊತ್ತವನ್ನೂ ಪಡೆಯಲು ಹೋರಾಟ ಮುಂದುವರಿಯಲಿದೆ ಎಂದು ಸಮಿತಿಯ ಕಾರ್ಯಕರ್ತರು ತಿಳಿಸಿದ್ದಾರೆ.
2014-15ರ ಸುಮಾರಿಗೆ ಆಳಂದ ತಾಲ್ಲೂಕು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಹೆಸರಲ್ಲಿ ನಿಂಬರ್ಗಾ ಗ್ರಾಮಗದಲ್ಲಿ ಶೇರು ಸಂಗ್ರಹಿಸಲಾಗಿತ್ತು. ಪ್ರತಿ ಶೇರು ₹1,100 ಇದ್ದು, ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದನೆಯಲ್ಲಿ ಲಾಭಾಂಶ ನೀಡುವ ಆಮಿಷ ಒಡ್ಡಲಾಗಿತ್ತು. ಆದರೆ ಸಂಘವನ್ನೇ ಕಾನೂನುಬದ್ಧವಾಗಿ ನೋಂದಾಯಿಸಿಕೊಳ್ಳದೆ, ಯಾವುದೇ ವ್ಯಾಪಾರ-ವಹಿವಾಟು ನಡೆಸದೆ ಶೇರುದಾರರನ್ನು ವಂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಸಂಘದ ಮುಖ್ಯ ಪ್ರವರ್ತಕ ಸೂರ್ಯಕಾಂತ ಜಿಡಗಿ ಹಾಗೂ ಇತರ ಕಾರ್ಯದರ್ಶಿಗಳು ವμÁರ್ಂತ್ಯಕ್ಕೆ ಲಾಭಾಂಶ ನೀಡುವ ಭರವಸೆ ನೀಡಿ ಹಣ ಪಡೆದಿದ್ದರು. ಆದರೆ ಹತ್ತು ವರ್ಷ ಕಳೆದರೂ ಒಂದು ರೂಪಾಯಿ ಲಾಭಾಂಶವೂ ನೀಡದೆ, ಶೇರು ಹಣ ವಾಪಸ್ ಕೇಳಿದಾಗ “ಈಗೀಗ” ಎಂದು ತಪ್ಪಿಸುತ್ತಿದ್ದರು ಎಂದು ಹಲವು ಶೇರುದಾರರು ಆರೋಪಿಸಿದ್ದರು.
ಈ ವಂಚನೆಯಿಂದ ಬೇಸತ್ತ ಶೇರುದಾರರು ನಿಂಬರ್ಗಾ ಸರ್ವ ಸಮಾಜ ಕಲ್ಯಾಣ ಸಮಿತಿಯ ಅಧ್ಯಕ್ಷ ವಿಠ್ಠಲ ಕೋಣೆಕರ್ ಅವರನ್ನು ಆಶ್ರಯಿಸಿದ್ದರು. “ನಾವು ದುಡಿದು ಹಾಕಿದ ಹಣವನ್ನು ಇವರು ತಿನ್ನುತ್ತಿದ್ದಾರೆ. ಯಾವುದೇ ಸಹಕಾರ ಸಂಘ ಇಲ್ಲ, ಯಾವುದೇ ವ್ಯಾಪಾರ ಇಲ್ಲ. ಕೇವಲ ಶೇರು ಹೆಸರಲ್ಲಿ ದೊಡ್ಡ ಮೊತ್ತ ಸಂಗ್ರಹಿಸಿ ಮೊಸಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು.
ವಿಠ್ಠಲ ಕೋಣೆಕರ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶೇರುದಾರರೊಂದಿಗೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ, ಪ್ರತಿಭಟನೆ ನಡೆಸಿದ್ದರು. ಈ ಒತ್ತಡದಿಂದ ಕಲಬುರಗಿ ಸಹಕಾರ ಸಂಘಗಳ ಉಪನಿಬಂಜಧಕರು ತನಿಖೆ ನಡೆಸಿ, ಸಂಘ ಶೇರು ಸಂಗ್ರಹಿಸಿದೆ ವಾಪಸ ನೀಡಬೇಕು ಎಂದು ಆದೇಶಿಸಿದ್ದಾರೆ. “ಈಗಾಗಲೇ 47 ಮಂದಿ ಶೇರುದಾರರಿಗೆ ರೂ. 52,000 ಚೆಕ್ ಮೂಲಕ ವಾಪಸ್ ನೀಡಲಾಗಿದೆ. 180-200 ಶೇರುದಾರರಿಗೆ ಸೇರಬೇಕಾದ 2 ಲಕ್ಷಕ್ಕೂ ಹೆಚ್ಚು ಮೊತ್ತ ಬಾಕಿ ಇದೆ. ಅದನ್ನೂ ಪೂರ್ಣವಾಗಿ ಪಡೆಯದೇ ಹಿಂದೆ ಸರಿಯುವುದಿಲ್ಲ” ಎಂದು ವಿಠ್ಠಲ ಕೋಣೆಕರ್ ತಿಳಿಸಿದರು.
ಇತ್ತೀಚೆಗμÉ್ಟೀ ನಿಂಬರ್ಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೇರಿದಂತೆ ಏಳು ಸದಸ್ಯರ ಸದಸ್ಯತ್ವ ರದ್ದುಗೊಳಿಸುವಲ್ಲಿ ಯಶಸ್ವಿಯಾದ ನಂತರ, ಈ ಶೇರು ವಂಚನೆ ಪ್ರಕರಣದಲ್ಲಿ ಗೆದ್ದಿರುವುದು ಸರ್ವ ಸಮಾಜ ಕಲ್ಯಾಣ ಸಮಿತಿಗೆ ಇದು ಸತತ ಎರಡನೇ ದೊಡ್ಡ ಜಯವಾಗಿದೆ.
ಗ್ರಾಮೀಣ ಭಾಗದಲ್ಲಿ ಭ್ರμÁ್ಟಚಾರ ಮತ್ತು ಜನರ ಹಕ್ಕುಗಳ ದೌರ್ಜನ್ಯದ ವಿರುದ್ಧ ಸಮಿತಿಯ ಹೋರಾಟಕ್ಕೆ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
Comments are closed.