ಆಳಂದ: ಚಿಂಚನಸೂರನಲ್ಲಿ ನಡೆದ ಮಕ್ಕಳ ಕಲೋತ್ಸವ ಸಮಾರಂಭ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ವಿಮಲಾಬಾಯಿ ಎ. ರಾಮನ ಇತರರು ಇದ್ದರು.
ಆಳಂದ: 2025-26ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಮಕ್ಕಳ ಕಲೋತ್ಸವ ಕಾರ್ಯಕ್ರಮವನ್ನು ಚಿಂಚನಸೂರ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಶನಿವಾರ ಅದ್ದೂರಿಯಾಗಿ ಹಾಗೂ ಸಾಂಸ್ಕøತಿಕ ಔತಣದೊಂದಿಗೆ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು, “ಪ್ರತಿಯೊಂದು ಮಗುವಿನಲ್ಲೂ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವುದೇ ಪ್ರತಿಭಾಕಾರಂಜಿಯ ಮೂಲ ಉದ್ದೇಶ. ಈ ವೇದಿಕೆ ಮಕ್ಕಳ ಗುಣಾತ್ಮಕ ಕಲಿಕೆಗೆ ಬಲ ನೀಡುತ್ತದೆ,” ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಧರ್ಮರಾಯ ಎಸ್. ಅಲಂಕಾರ ಮಾತನಾಡಿ, “ಮಕ್ಕಳಲ್ಲಿರುವ ಹುದುಗಿರುವ ಕಲೆ-ಪ್ರತಿಭೆಗಳನ್ನು ಹೊರತೆಗೆದು ಪೆÇ್ರೀತ್ಸಾಹಿಸುವುದು ಸರ್ಕಾರದ ಮಹತ್ವದ ಅಭಿಯಾನ. ಗ್ರಾಮ ಹಂತದಿಂದ ರಾಜ್ಯ ಮಟ್ಟದವರೆಗೆ ಮಕ್ಕಳಿಗೆ ತಮಗೆ ಇರುವ ಸಾಮಥ್ರ್ಯ ಪ್ರದರ್ಶಿಸುವ ಅವಕಾಶ ಈ ವೇದಿಕೆ,” ಎಂದು ವಿವರಿಸಿದರು. ಮಕ್ಕಳಲ್ಲಿ ಆತ್ಮಸ್ಥೈರ್ಯ, ಸ್ಪರ್ಧಾತ್ಮಕ ಮನೋಭಾವನೆ, ಜಾನಪದ ಸಂಸ್ಕೃತಿ ಹಾಗೂ ನಾಡಿನ ವೇಷಭೂಷಣಗಳ ಪರಿಚಯಕ್ಕೆ ಕಲೋತ್ಸವ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದರು.
ಚಿಂಚನಸೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾಬಾಯಿ ಎ. ರಾಮನ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಅಹ್ಮದ್ ಪಾμÁ, ಶಿಕ್ಷಣ ಸಂಯೋಜಕ ಪಂಕಜ್ ಪಾಟೀಲ ಪ್ರಮುಖ ಅತಿಥಿಗಳಾಗಿ ಉಪಸ್ಥಿತರಿದ್ದರು.
ಡಾ. ಬಿ.ಆರ್. ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷ ಶಿವಶರಣಪ್ಪ ಸಜ್ಜನ್, ಚಿಂಚನಸೂರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಅವರು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಮತ್ತು ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಚಿಂಚನಸೂರ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕಾಶಿನಾಥ ರಾಮನ, ಗುಂಡಪ್ಪ ರಾಮನ, ಶ್ರೀಶೈಲ ಮಾವಿನ ಹಲವರು ವೇದಿಕೆಯಲ್ಲಿದ್ದರು.
ಕ್ಲಸ್ಟರ್ ಹಂತದ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.
ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಪ್ರಕಾಶ ನರೋಣ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ, ಉಪಾಧ್ಯಕ್ಷ ರಾಜಕುಮಾರ ಕಾಂಬಳೆ, ನರೋಣಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಜಮಾದಾರ, ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಮಹಾಲಿಂಗಪ್ಪ ಕಲಶೆಟ್ಟಿ ಭಾಗವಹಿಸಿದರು.
ಚಿಂಚನಸೂರ ಕ್ಲಸ್ಟರಿನ ಎಲ್ಲಾ ಪ್ರಾಥಮಿಕ-ಪ್ರೌಢಶಾಲೆಗಳ ಮುಖ್ಯಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಗಣ್ಯರು ವರ್ಧಮಾನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Comments are closed.