ರಾಜ್ಯ ಆಹಾರ ಆಯೋಗ ಸದಸ್ಯ ಸುಮಂತರಾವ್ ಆಳಂದ ತಾಲೂಕಿನಲ್ಲಿ ದಿಢೀರ್ ತಪಾಸಣೆ: ವಸತಿನಿಲಯ-ಆಸ್ಪತ್ರೆ-ಶಾಲೆಗಳಲ್ಲಿ ಗಂಭೀರ ಲೋಪ; ನೋಟಿಸ್ ಎಚ್ಚರಿಕೆ
ಆಳಂದ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಹೆಣ್ಣು ಮಕ್ಕಳ ವಸತಿ ನಿಲಯಕ್ಕೆ ಆಹಾರ ಆಯೋಗದ ಸದಸ್ಯ ಸುಂತರಾವ್ ಭೇಟಿ ನೀಡಿ ಮಾಹಿತಿ ಕಲೆಹಾಕಿದರು. ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಹೊಳ್ಳಕರ್ ಮಾಹಿತಿ ಒದಗಿಸಿದರು.
ಆಳಂದ: ರಾಜ್ಯ ಆಹಾರ ಆಯೋಗದ ಸದಸ್ಯ ಸುಮಂತರಾವ್ ಅವರು ಆಳಂದನಲ್ಲಿ ಎರಡು ದಿನಗಳಿಂದ ದಿಢೀರ್ ಭೇಟಿ ನೀಡಿ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಸತಿ ನಿಲಯಗಳು, ನ್ಯಾಯಬೆಲೆ ಅಂಗಡಿಗಳು, ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಅಂಗನವಾಡಿಗಳಲ್ಲಿ ತಪಾಸಣೆ ನಡೆಸಿದ್ದು, ಹಲವೆಡೆ ಗಂಭೀರ ಕೊರತೆಗಳು ಪತ್ತೆಯಾಗಿವೆ. ಲೋಪಗಳನ್ನು ಸರಿಪಡಿಸದಿದ್ದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಆಯೋಗದಿಂದ ನೋಟಿಸ್ ಜಾರಿ ಮಾಡಲಾಗುವುದು ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದಾರೆ.
ಐದು ದಿನದಿಂದ ಮಕ್ಕಳಿಗೆ ಮೊಟ್ಟೆ ಇಲ್ಲ,
ಶಿಕ್ಷಕರ ಸುಳ್ಳು ಸಾಬೀತು:
ಪಟ್ಟಣದ ಸಿಪಿಎಸ್ ಶಾಲೆಗೆ ದಿಢೀರ್ ಭೇಟಿ ನೀಡಿದ ಸುಮಂತರಾವ್ ಅವರು ಮಕ್ಕಳೊಂದಿಗೆ ಮಾತನಾಡಿದಾಗ “ಐದು ದಿನಗಳಿಂದ ಮೊಟ್ಟೆ ಕೊಡುತ್ತಿಲ್ಲ” ಎಂದು ಮಕ್ಕಳು ದೂರಿದರು. ಆದರೆ ಶಿಕ್ಷಕರು “ಕೇವಲ ಎರಡೇ ದಿನ ಕೊಡಲಾಗಿಲ್ಲ” ಎಂದು ಸಾಕಷ್ಟು ಹೇಳಿದರು. ಈ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತಕ್ಕೆ ನೋಟಿಸ್ ಜಾರಿಯಾಗಲಿದೆ ಎಂದು ಆಯೋಗ ಸದಸ್ಯರು ತಿಳಿಸಿದ್ದಾರೆ. ಗ್ಯಾಸ್ ಪೂರೈಕೆಯಾಗಿಲ್ಲ ಎಂಬುದು ಸೇರಿ ಸಮಸ್ಯೆಯನ್ನು ಕಲೆಹಾಕಲಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ 6 ಕ್ವಿಂಟಲ್ ಹೆಚ್ಚುವರಿ ದಾಸ್ತಾನು
ನೋಟಿಸ್ ಖಚಿತ:
ಪಟ್ಟಣದ ಶಿವಾನಂದ ತರುಣ ಸಂಘದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದಾಗ 6 ಕ್ವಿಂಟಲ್ ಹೆಚ್ಚುವರಿ ಆಹಾರ ಧಾನ್ಯ ದಾಸ್ತಾನು ಪತ್ತೆಯಾಗಿದೆ. ಇದರ ದಾಖಲೆಗಳನ್ನು ತಕ್ಷಣ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಇದೇ ರೀತಿ ಕೆಎಸ್‍ಎಫ್‍ಸಿ ಗೋದಾಮಿಗೆ ಭೇಟಿ ನೀಡಿದಾಗ ಲೂಪಗಳಿಗೆ ಕೆಂಡಮಂಡಲಾದ ಸದಸ್ಯರು ಗೋದಾಮಿನ ಗೈರಾಗಿದ್ದರಿಂದ ತಕ್ಷವೇ ದಾಖಲೆಗಳೊಂದಿಗೆ ಆಯೋಗಕ್ಕೆ ವರದಿ ನೀಡಬೇಕು ಹಾಜರಿದ್ದ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಬಿಸಿಎಂ ಹೆಣ್ಣುಮಕ್ಕಳ ವಸತಿ
ನಿಲಯದಲ್ಲಿ ಗೋಧಿ ಪೂರೈಕೆ ಸ್ಥಗಿತ:
ಆಗಸ್ಟ್ ತಿಂಗಳಿಂದಲೂ ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ವಸತಿ ನಿಲಯಕ್ಕೆ ಗೋಧಿ ಪೂರೈಕೆಯೇ ಆಗಿಲ್ಲ. ಗೋದಾಮಿನಲ್ಲಿ 70 ಕ್ವಿಂಟಲ್ ಗೋಧಿ ಹಾಳಾಗುತ್ತಿದ್ದರೂ ಇಲಾಖೆ ಸರಬರಾಜು ಮಾಡಿಲ್ಲ ಎಂದು ಸುಮಂತರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದಲ್ಲದೆ ವಿದ್ಯುತ್ ಇಲ್ಲದ ಸಮಯದಲ್ಲಿ ಬ್ಯಾಕಪ್ ಬ್ಯಾಟರಿ ಕೊರತೆ, ಸಿಸಿಟಿವಿ ಕ್ಯಾಮೆರಾ ಸಂಖ್ಯೆ ಕಡಿಮೆ, ಚಪಾತಿ ತಯಾರಿಕಾ ಯಂತ್ರವಿಲ್ಲದಿರುವುದು, ಮೆನು ಚಾರ್ಟ್ ಪ್ರಕಾರ ಊಟ ವಿತರಣೆ ಆಗದಿರುವುದು ಸೇರಿದಂತೆ ಹಲವು ಕೊರತೆಗಳನ್ನು ಪಟ್ಟಿ ಮಾಡಿದ ಅವರು, 125 ಮಕ್ಕಳಿರುವ ವಸತಿ ನಿಲಯದಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶಿಸಿದ ಅವರು ಹಾಜರಿದ್ದ ಮಹಿಳಾ ವಾರ್ಡ್‍ನರಿಗೆ ಸುರಕ್ಷಾ ಕ್ರಮ ಅನುಸರಿಸುವಂತೆ ಸಲಹೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ
ಹರಿಗೆ ರೋಗಿಗಳ ಊಟ ದಾಖಲೆಯೇ ಇಲ:
ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸುಮಂತರಾವ್ ಅವರು ನವೆಂಬರ್ 19ರ ನಂತರ ದಾಖಲಾದ ಹೆರಿಗೆ ರೋಗಿಗಳಿಗೆ ಊಟ ವಿತರಣೆಯ ದಾಖಲೆಗಳೇ ನಿರ್ವಹಿಸಿಲ್ಲ ಎಂದು ಗಮನಿಸಿ, ತಕ್ಷಣ ಸರಿಪಡಿಸಿ ದಾಖಲೆ ನಿರ್ವಹಿಸುವಂತೆ ಸೂಚಿಸಿದ್ದಾರೆ. ಇಲ್ಲದಿದ್ದಲ್ಲಿ ಆಯೋಗದಿಂದ ನೋಟಿಸ್ ಜಾರಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಸ್ವಚ್ಛತೆ ಕೊರತೆ ಖಡಕ್ ಎಚ್ಚರಿಕೆ:
ಪಟ್ಟಣದ ರೇವಣಸಿದ್ಧೇಶ್ವರ ಕಾಲೋನಿಯಲ್ಲಿನ ಮ್ಯಾಟ್ರಿಕ್ ನಂತರದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ ಸುಮಂತರಾವ್ ಅವರು ಸ್ವಚ್ಛತೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಪಟ್ಟಿ ಮಾಡಿ, ತಕ್ಷಣ ಸುಧಾರಣೆಗೆ ಆದೇಶ ನೀಡಿದರು. “ಕ್ರಮ ಕೈಗೊಳ್ಳದಿದ್ದಲ್ಲಿ ನೋಟಿಸ್ ಜಾರಿ ಮಾಡಿ ಕ್ರಮಕ್ಕೆ ಒತ್ತಾಯಿಸುತ್ತೇವೆ” ಎಂದು ಖಡಕ್ ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳಿಗೆ ನೀಟ್ ಮತ್ತು ಜೆಇಇ ತಯಾರಿ ಪುಸ್ತಕಗಳನ್ನು ಒದಗಿಸಿ ಕ್ರಮದ ವರದಿಯನ್ನು ಆಯೋಗಕ್ಕೆ ಕಳುಹಿಸಬೇಕು. ಎಂದು ನಿಲಯದ ಸುತ್ತಲೂ ಇರುವ ಗಬ್ಬ ವಾಸನೆ ನಿವಾರಣೆಗೆ ಸೂಚಿಸಿದರು. ಅಲ್ಲದೆ ಮಳೆಹಾಲದಲ್ಲಿ ವಸತಿ ನಿಲಯ ಸುತ್ತಲೂ ನೀರಿನ ಪ್ರವಾಹದಿಂದ ನೆರೆಮನೆಯಲ್ಲಿ ವಿದ್ಯಾರ್ಥಿಗಳು ಕಾಲ ಕಳೆದ ಬಗ್ಗೆ ಬಡಾವಣೆಯ ನಿವಾಸಿಗಳು ಆಯೋದ ಸದಸ್ಯರಿಗೆ ಹೇಳಿದರು. ಆಗ ಈಕುರಿತು ಶನಿವಾರದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಅಂಗನವಾಡಿ ಆಹಾರ ಪೂರೈಕೆ ಉತ್ತಮ ವ್ಯವಸ್ಥೆಗೆ ಮೆಚ್ಚುಗೆ
ಎಂಎಸ್‍ಪಿಸಿ ಅಂಗನವಾಡಿಗಳಿಗೆ ಆಹಾರ ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಿದ ಸುಮಂತರಾವ್ ಅವರು ಉತ್ತಮ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶನಿವಾರ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನಾ ಸಭೆ ತಾಲೂಕು ಪ್ರವಾಸ ಮುಗಿಸಿ ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ಆಯೋಗದ ಅಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ತಾಲೂಕಿನಲ್ಲಿ ಕಂಡುಬಂದ ಎಲ್ಲ ನ್ಯೂನತೆಗಳನ್ನು ಚರ್ಚಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸುಮಂತರಾವ್ ತಿಳಿಸಿದ್ದಾರೆ.
ಈ ಎಲ್ಲ ಘಟನೆಗಳು ಸರ್ಕಾರಿ ಯೋಜನೆಗಳ ಅನುμÁ್ಠನದಲ್ಲಿ ಇರುವ ಗಂಭೀರ ಲೋಪವನ್ನು ಬಯಲು ಮಾಡಿವೆ ಎಂದು ಆಯೋಗ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂಬುದು ಈ ದಿಢೀರ್ ಭೇಟಿಯಾಗಿದೆ ಎಂದು ಅವರು ಹೇಳಿದರು.
ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಹೊಳ್ಕರ್, ಬಿಸಿಎಂ ಎಫ್‍ಡಿಸಿ ಸುನಿತಾ ರೆಡ್ಡಿ ಸೇರಿ ಆಹಾರ ಇಲಾಖೆ ಕಲಬುರಗಿ ಶಿರಸ್ತೆದಾರ ಇತರರು ಇದ್ದರು.
Comments are closed.