ಆಳಂದ: ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಚುನಾವಣೆ ಸ್ಪರ್ಧೆ ಬಯಸಿ ಅಶೋಕ ಗುತ್ತೇದಾರ, ಬಾಬುಗೌಡ ಎಸ್. ಪಾಟೀಲ ಒಳಗೊಂಡು ಏಕಕಾಲಕ್ಕೆ ಸೋಮವಾರ ಒಂದು ಬಣದ 14 ಜನರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಆಳಂದ: ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಭೂಸನೂರ ಇದರ ಐದು ವರ್ಷದ ಅವಧಿಗೆ ಆಡಳಿತ ಮಂಡಳಯ ಸದಸ್ಯ ನಿರ್ದೇಶಕರ ಆಯ್ಕೆಯ ಚುನಾವಣೆ ಡಿ.3ರಂದು ನಡೆಯಲಿದೆ.
ಒಟ್ಟು ಚುನಾವಣೆ ನಡೆಯುವ 14 ಸ್ಥಾನಗಳಿಗೆ ಈಗಾಗಲೇ ಸ್ಪರ್ಧೆ ಬಯಸಿ ಸೋಮವಾರದ ವರೆಗೆ 37 ನಾಮಪತ್ರ ಸಲ್ಲಿಕೆಯಾಗಿವೆ.
ನ.18ರಿಂದ ಆರಂಭಗೊಂಡ ನಾಮಪತ್ರ ಸಲ್ಲಿಕೆಯೂ ನ.25ರಂದು ಮಂಗಳವಾರ ಕೊನೆಯ ದಿನವಾಗಿದೆ. ಸೋಮವಾರ ಭೂಸನೂರಿನ ಅಶೋಕ ಮೊಗಲಯ್ಯಾ ಗುತ್ತೇದಾರ, ಬಾಬುಗೌಡ ಎಸ್. ಪಾಟೀಲ, ಕಲ್ಯಾಣರಾವ್ ಪಾಟೀಲ, ಕಲ್ಯಾಣಿ ಜಮಾದಾರ ಸೇರಿದಂತೆ ಅಫಜಲೂಪುರ, ಕಮಲಾಪೂರ ಮತ್ತು ಆಳಂದ ವ್ಯಾಪ್ತಿಯ ಏಕಕಾಲಕ್ಕೆ 14 ಸ್ಪಾಧಾರ್ಥಿಗಳು ತಮ್ಮ ಅಪಾರ ಬೆಂಬಲಿಗ ಮುಖಂಡರೊಂದಿಗೆ ನಾಮತ್ರ ಸಲ್ಲಿಸಿದರು. ಇದುವರೆಗೂ ಒಟ್ಟು 37 ಜನ ನಾಮಪತ್ರಸಲ್ಲಿಸಿದ್ದಾರೆ.
ಒಟ್ಟು 9882 ಮತದಾರರಲ್ಲಿ ಅರ್ಹ 1393 ಮತದಾರರು ಹಾಗೂ 8419 ಅನರ್ಹ ಮತದಾರರಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಮೊದ ಕರಣಮ್ ಅವರು ತಿಳಿಸಿದ್ದಾರೆ.
ಇದರಲ್ಲಿ ಎ ವರ್ಗದ ಕಬ್ಬು ಬೆಳೆಗಾರರ ಸದಸ್ಯರು ಒಟ್ಟು ಅರ್ಹರು 3762, ಬ ವರ್ಗದ ಸದಸ್ಯರ ಸಂಖ್ಯೆ 4424 ಮತ್ತು ಡಿ ವರ್ಗದ ಸಂಘ ಸಂಸ್ಥೆಗಳಿಂದ 233 ಅರ್ಹ ಮತದಾರರಿದ್ದಾರೆ.
Comments are closed.