ಆಳಂದ: ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಶರಣ ಕುಲಕರ್ಣಿ ಮಾತನಾಡಿದರು, ಮಹಾದೇವ ಕಾಂಬಳೆ, ರಫೀಕ್ ಮುಲ್ಲಾ ಇದ್ದರು
ಆಳಂದ್: ಸಾಮಾಜಿಕ ಸೇವೆಯ ಮೂಲಕ ಸಮುದಾಯದ ಆರೋಗ್ಯ ಸುಧಾರಣೆಗೆ ಬದ್ಧರಾಗಿರುವ ತೆಹರಿಕ್-ಇ-ಖುದ್ದಾದ್ ಸಂಘಟನೆಯ ಕಲ್ಯಾಣ ಕರ್ನಾಟಕ ಪ್ರದೇಶ ಘಟಕವು, ಆಳಂದ ತಾಲೂಕಿನ ಯುವಕರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ನವೆಂಬರ್ 20ರಂದು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಲಿದ್ದು, ತಾಲೂಕಿನ ಎಲ್ಲರೂ ಸದುಪಯೋಗ ಪಡೆಯಬೇಕೆಂದು ಸಂಘಟನೆಯ ಅಧ್ಯಕ್ಷ ಮಹ್ಮದ್ ರಫಿಕ್ ಮುಲ್ಲಾ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಫಿಕ್ ಮುಲ್ಲಾ, “ನೇತ್ರ ಆರೋಗ್ಯವು ಜೀವನದ ಮೂಲಭೂತ ಅಂಶವಾಗಿದ್ದು, ಬಡತನದಿಂದಾಗಿ ಅನೇಕರು ನೇತ್ರ ತಪಾಸಣೆಗೆ ತೆರಳಲಾರರು. ಈ ಶಿಬಿರದ ಮೂಲಕ ನಾವು 500ಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ ತಪಾಸಣೆ, ಮತ್ತು ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತೇವೆ. ಹಾಗೂ ರಕ್ತದಾನ ಶಿಬಿರದ ಮೂಲಕ ಆಸ್ಪತ್ರೆಯ ರಕ್ತಸಂಗ್ರಹ ಕೇಂದ್ರವನ್ನು ಬಲಪಡಿಸುತ್ತೇವೆ. ಇದು ಕೇವಲ ಆರೋಗ್ಯ ಸೇವೆಯಲ್ಲ, ಸಾಮಾಜಿಕ ಜವಾಬ್ದಾರಿಯ ಸಂದೇಶವೂ ಹಂಚುತ್ತದೆ” ಎಂದು ಹೇಳಿದರು.
ಆಳಂದ ತಾಲೂಕಿನಲ್ಲಿ ಇದು ಮೊದಲ ಬಾರಿಗೆ ಇಂತಹ ವ್ಯಾಪಕ ಶಿಬಿರವಾಗಿದ್ದು, ಸ್ಥಳೀಯ ಯುವಕರ ಉತ್ಸಾಹದಿಂದಾಗಿ ಇದು ಇನ್ನಷ್ಟು ಯಶಸ್ವಿಯಾಗುವ ನಿರೀಕ್ಷೆಯಿದೆ. ಎಂದು ಅವರು ಹೇಳಿದರು
ಶಿಬಿರದಲ್ಲಿ ಜಿಲ್ಲಾ ಆಸ್ಪತ್ರೆಯ ನೇತ್ರ ರೋಗ ತಜ್ಞರು, ಆಪ್ತ ವೈದ್ಯರು ಮತ್ತು ರಕ್ತದಾನ ತಂಡಗಳು ಭಾಗವಹಿಸಲಿದ್ದು, ಎಲ್ಲಾ ವಯೋವರ್ಗಗಳಿಗೆ ಸೌಲಭ್ಯ ಒದಗಿಸಲಾಗುತ್ತದೆ. “ಪ್ರಭುತ್ವದ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಇದು ನಡೆಯುತ್ತಿದ್ದು, ಜನರಲ್ಲಿ ಆರೋಗ್ಯ ಸದೃಢತೆ ಹೆಚ್ಚಿಸುವ ಗುರಿಯಿದೆ” ಎಂದು ರಫಿಕ್ ಮುಲ್ಲಾ ಸೇರಿದಂತೆ ಸ್ಥಳೀಯ ಸಮಾಜಸೇವಕರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಮುಖಂಡರಾದ ಮಹಾದೇವ ಕಾಂಬಳೆ, ಬಬಲೇಶ್ವರ, ಚಾಂದಪಾμÁ ಜಮಾದಾರ, ರಫೀಕ್ ಕಿಂಗ್, ಶರಣು ಕುಲಕರ್ಣಿ, ಪರವೇಜ್ ಅನ್ಸಾರಿ, ಸಂದೀಪ ಪಾತ್ರೆ, ಫೈಜುದ್ದೀನ್ ಮುಂಡಾಸಗರ, ಅರಬಾಜ್ ಶೇಖ, ಅಖೀಲ ಪಟೇಲ್, ತಾನಾಜಿ ಲವಟೆ ಮುಂತಾದವರು ಉಪಸ್ಥಿತರಿದ್ದರು.
Comments are closed.