ಆಳಂದ: ಸಿಯುಕೆ ಸಹ-ಪ್ರಾಧ್ಯಾಪಕ ಡಾ. ಗೌವಿನೋಲ್ಲಾ ಮಹೇಂದ್ರ ಡಾ. ಡಿ. ಗೌತಮ್ ಅವರು ಎರಾಸ್ಮಸ್ ಸ್ಟಾಫ್ ಮೊಬಿಲಿಟಿ ಪೆÇ್ರೀಗ್ರಾಂನಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾದ ಪ್ರಯುಕ್ತ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಅಹ್ವಾನ ಪತ್ರ ನೀಡಿ ಗೌರವಿಸಿದರು.
ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಬಿಸಿನೆಸ್ ಅಧ್ಯಯನ ವಿಭಾಗದ ಪ್ರವಾಸೋದ್ಯಮ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ ವಿಭಾಗದ ಸಹ-ಪ್ರಾಧ್ಯಾಪಕರಾದ ಡಾ. ಗೌವಿನೋಲ್ಲಾ ಮಹೇಂದ್ರ ಹಾಗೂ ವಿಭಾಗದ ಮುಖ್ಯಸ್ಥ ಡಾ. ಡಿ. ಗೌತಮ್ ಅವರು ಲಾಟ್ವಿಯಾದ ವಾಲ್ಮಿಯೆರಾದಲ್ಲಿರುವ ವಿಡ್ಜೆಮ್ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್ (ಗಿiಂ) ವತಿಯಿಂದ ಆಯೋಜಿಸಲಾದ ಎರಾಸ್ಮಸ್ ಸ್ಟಾಫ್ ಮೊಬಿಲಿಟಿ ಪೆÇ್ರೀಗ್ರಾಂನಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾಗಿದ್ದಾರೆ.
ಈ ಶೈಕ್ಷಣಿಕ ವಿನಿಮಯ ಕಾರ್ಯಕ್ರಮವು ಅಕ್ಟೋಬರ್ 4 ರಿಂದ 21, 2025ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಇಬ್ಬರೂ ಪ್ರಾಧ್ಯಾಪಕರು ವಾಲ್ಮಿಯೆರಾದಲ್ಲಿ ಅಕ್ಟೋಬರ್ 13ರಿಂದ 17ರವರೆಗೆ ನಡೆಯಲಿರುವ 5ನೇ ಅಂತರಾಷ್ಟ್ರೀಯ ವೈಜ್ಞಾನಿಕ ವಿಚಾರ ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಲಿದ್ದಾರೆ. ಜೊತೆಗೆ, ಅವರು ಪ್ರವಾಸೋದ್ಯಮ ಹಾಗೂ ಸಂಬಂಧಿತ ಕ್ಷೇತ್ರಗಳ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ, ಶೈಕ್ಷಣಿಕ ವಿನಿಮಯ ಚಟುವಟಿಕೆಗಳಲ್ಲಿ ಭಾಗವಹಿಸುವರು.
ಯೂರೋಪಿಯನ್ ಪ್ರವಾಸೋದ್ಯಮ ನಿರ್ವಹಣಾ ಅಭ್ಯಾಸಗಳು, ಸಂಶೋಧನಾ ಯೋಜನೆ ಅನುμÁ್ಠನ ವಿಧಾನಗಳು ಹಾಗೂ ವೈಜ್ಞಾನಿಕ ಬರವಣಿಗೆಯ ತಂತ್ರಗಳ ಅಧ್ಯಯನಕ್ಕಾಗಿ ಪ್ರಾಧ್ಯಾಪಕರು ವಿವಿಧ ಕ್ಷೇತ್ರ ಭೇಟಿಗಳು ಹಾಗೂ ಪ್ರಯೋಗಾತ್ಮಕ ಅಧ್ಯಯನ ಪ್ರವಾಸಗಳನ್ನು ಕೈಗೊಳ್ಳಲಿದ್ದಾರೆ.
ಸಿಯುಕೆ ಉಪಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಇಬ್ಬರು ಪ್ರಾಧ್ಯಾಪಕರನ್ನು ಅಭಿನಂದಿಸಿ ಆಹ್ವಾನ ಪತ್ರಗಳನ್ನು ಹಸ್ತಾಂತರಿಸಿದರು. “ಇದು ಸಿಯುಕೆ ಮತ್ತು ವಿಯುಎಎಸ್ ನಡುವೆ ಸಹಿ ಮಾಡಲಾದ ಒಪ್ಪಂದದ ನೇರ ಫಲಿತಾಂಶವಾಗಿದ್ದು, ಎರಡೂ ಸಂಸ್ಥೆಗಳ ನಡುವೆ ಸಂಯುಕ್ತ ಸಂಶೋಧನೆ, ಸಹಕಾರ ಮತ್ತು ಅಂತರಾಷ್ಟ್ರೀಯ ಪ್ರದರ್ಶನವನ್ನು ಉತ್ತೇಜಿಸುತ್ತದೆ,” ಎಂದು ಅವರು ಹೇಳಿದರು.
ಕುಲಸಚಿವ ಪೆÇ್ರ. ಆರ್. ಆರ್. ಬೀರಾದರ ಮತ್ತು ಡೀನ್ ಪೆÇ್ರ. ಪಾಂಡುರಂಗ ವಿ. ಪಟ್ಟಿ ಪ್ರಾಧ್ಯಾಪಕರನ್ನು ಪೆÇ್ರೀತ್ಸಾಹಿಸಿ, ಸಂಸ್ಥೆಯ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಆಹ್ವಾನಿತರು ವಿಶ್ವವಿದ್ಯಾಲಯದ ನೇತೃತ್ವಕ್ಕೆ ಮಾರ್ಗದರ್ಶನ ಮತ್ತು ಪ್ರೇರಣೆಗೆ ಧನ್ಯವಾದ ಸೂಚಿಸಿ, ಲಾಟ್ವಿಯಾದ ವಿಡ್ಜೆಮ್ ವಿಶ್ವವಿದ್ಯಾಲಯದ ಆತಿಥ್ಯ ಮತ್ತು ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
Comments are closed.