ಆಳಂದ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ನಾಯಕಿ ಮಹೇಶ್ವರಿ ಎಸ್. ವಾಲಿ ಅವರು ಮಾತನಾಡಿದರು.
ಆಳಂದ: ತಾಲೂಕು ಗಡಿ ಪ್ರದೇಶವಾಗಿದ್ದರಿಂದ ಮಹಾರಾಷ್ಟ್ರ ಸೀಮೆಯಲ್ಲಿ ದಿನನಿತ್ಯ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಚಿಂತೆಯ ವಿಷಯ ಎಂದು ಭ್ರμÁ್ಟಚಾರ ಮುಕ್ತ ಆಂದೋಲನದ ಮೂಲ ಸ್ಥಾನಿಯಾಗಿರುವ ಜನತಾ ದಳ (ಜಾತ್ಯತೀತ) ಪಕ್ಷದ ನಾಯಕಿ ಮಹೇಶ್ವರಿ ಎಸ್. ವಾಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಳಂದ ಪೆÇಲೀಸ್ ಇಲಾಖೆಯು ಈಗ ಒಬ್ಬರಿಗೆ ಮಾತ್ರ ತಡಿಪಾರು ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿದ್ದರೂ, ತಾಲೂಕಿನ ಎಲ್ಲ ಗೂಂಡಾಗಳು ಮತ್ತು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ಸಮಾನ ನೀತಿ ಜಾರಿಗೊಳಿಸಬೇಕು. ಯಾಕೇ ಇದನ್ನು ಮಾಡಲು ಪೊಲೀಸರು ಮುಂದಾಗುತ್ತಿಲ್ಲ ಪೊಲೀಸರ ಕಾರ್ಯವೈಖರಿ ಬಗ್ಗೆ ಸಂಸಯದಿಂದ ಜನ ನೋಡುವಂತಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
“ಆಳಂದ ಗಡಿ ತಾಲೂಕು ಎಂದು ಹೆಸರುವಾಸಿಯಾಗಿದ್ದರೂ, ಇಲ್ಲಿನ ಕಾನೂನುಬಾಹಿರತೆಯು ದಿನನಿತ್ಯ ನಡೆಯುತ್ತಿದೆ. ಮಟ್ಟಕಾ, ಬಡ್ಡಿ ವ್ಯವಹಾರ, ಅಕ್ಕಿ ಸಾಗಾಟಣೆ, ಗುಟ್ಕಾ ಸಾಗಾಣಿಕೆ ಮತ್ತು ಶಾಂತಿ ಭಂಗ ಚಟುವಟಿಕೆಗಳು ಇಲ್ಲಿನ ಸಮಸ್ಯೆಗಳಾಗಿವೆ. ಇಂತಹ ಚಟುವಟಿಕೆಯಲ್ಲಿ ತೊಡಗಿರುವ ಹಲವರ ವಿರುದ್ಧ ದೂರುಗಳು ದಾಖಲಾಗಿವೆ. ಆದರೂ ಪೆÇಲೀಸ್ ಇಲಾಖೆಯು ಒಬ್ಬರಿಗೆ ಮಾತ್ರ ಟಾರ್ಗೆಟ್ ಮಾಡಿ ತಡಿಪಾರು ಮಾಡಿದ್ದು ಏಕೆ? ಇದು ವೈಯಕ್ತಿಕ ದ್ವೇಷ ಅಥವಾ ರಾಜಕೀಯ ಒತ್ತಡದಿಂದಾಗಿ ನಡೆಯುತ್ತಿದ್ದೇ?” ಎಂದು ಅವರು ಪ್ರಶ್ನಿಸಿದರು.
ಭಾರಿ ಸಂಖ್ಯೆಯಲ್ಲಿ ತಾಲೂಕಿನಲ್ಲಿ ಮಟ್ಟಕಾ ನಡೆಸುವವರ ಮೇಲೆ ಹಲವು ದೂರುಗಳು ದಾಖಲಾಗಿವೆ. ಬಡ್ಡಿ ವ್ಯವಹಾರದಿಂದ ಹಲವರ ಮನೆಗಳನ್ನು ಬಿಡಿಸಿದ್ದಾರೆ. ರಾಜಾರೋಷವಾಗಿ ಬಡವರ ಅಕ್ಕಿ ಸಾಗಾಟಣೆ ಮಾಡುವವರು ಇದ್ದಾರೆ. ಇಂತಹವರನ್ನು ಕಡೆಗಣಿಸಿ ಒಬ್ಬರಿಗೆ ಮಾತ್ರ ಶಿಕ್ಷೆ ನೀಡುವುದು ಸರಿಯಲ್ಲ. ಇದು ಪೊಲೀಸ್ ಕಾರ್ಯವೈಖರೀ ವೈಫಲ್ಯತೆಗೆ ಸಾಕ್ಷಿಯಾಗಿದೆ ದೂರುದ ಅವರು, “ನಾನು ಹಿಂದೆಯೇ ಕಾನೂನುಬಾಹಿರ ಅಕ್ಕಿ ಸಾಗಾಟಣೆ ಮತ್ತು ಮಹಾರಾಷ್ಟ್ರಕ್ಕೆ ಗುಟ್ಕಾ ಸಾಗಾಣಿಕೆಯ ವಾಹನಗಳನ್ನು ನಿಲ್ಲಿಸಿ ಪೆÇಲೀಸ್ ಇಲಾಖೆಗೆ ಒಪ್ಪಿಸಿದ್ದೇನೆ. ಆದರೆ ಅವರನ್ನು ಬಿಡುಗಡೆ ಮಾಡಲಾಗಿದೆ. ಇಲಾಖೆಯವರು ಕೆಲವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಹಲವು ಬಾರಿ ಕಳ್ಳ ಅಕ್ಕಿ ಸಾಗಾಟಣೆ ಮತ್ತು ಗುಟ್ಕಾ ಸಾಗಾಣಿಕೆಯ ವಾಹನಗಳನ್ನು ನಿಲ್ಲಿಸಿ ಪೆÇಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇನೆ. ಆದರೆ ಸ್ಥಳಕ್ಕೆ ಒಬ್ಬರು ಬರಲಿಲ್ಲ. ಕಾನೂನು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದು ಸರಿ, ಆದರೆ ಒಬ್ಬರನ್ನು ಬಿಟ್ಟು ಒಬ್ಬರಿಗೆ ಮಾತ್ರ ಏಕೆ? ತಡಿಪಾರು ಮಾಡುವುದಾದರೆ ತಾಲೂಕಿನ ಎಲ್ಲ ಗುಂಡಾಗಳು, ಕಾನೂನುಬಾಹಿರ ಚಟುವಟಿಕೆಯಲ್ಲಿರುವವರನ್ನು ಸಂಬಂಧಿತ ಎಲ್ಲರನ್ನು ಗಡಿಪಾರು ಮಾಡಿ” ಎಂದು ವಾಲಿ ಆಗ್ರಹಿಸಿದರು.
ಸದ್ಯ ನೋಡಿದರೆ ಇಲ್ಲಿನ ಪೆÇಲೀಸ್ ಇಲಾಖೆಯವರು ವೈಯಕ್ತಿಕ ಅಥವಾ ರಾಜಕಾರಣಿಗಳ ಒತ್ತಡಕ್ಕೆ ಒಳಗಾಗಿದ್ದಾರೆ. ಸರಿಯಲ್ಲ. ಸಾರ್ವಜನಿಕ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಜನರ ನಂಬಿಕೆ ಕಳೆದುಕೊಳ್ಳುತ್ತಿದೆ. ಕಾನೂನುಬಾಹಿರ ಚಟುವಟಿಕೆಗಳು ಸ್ಥಳೀಯರಿಗೆ ತೊಂದರೆಯಾಗುತ್ತಿವೆ. ಇತ್ತೀಚೆಗೆ ತಾಲೂಕಿನಲ್ಲಿ ಹಲವು ಕೊಲೆ, ದಾಳಿ ಸಂಭವಗಳು ನಡೆದಿದ್ದು, ಪಟ್ಟಣದಲ್ಲೇ ನಿತ್ಯ ಗೂಂಡಾಗಳ ಆರ್ಭಟ ಹೊಡೆದಾಟಗಳು ಹೆಚ್ಚಾಗಿವೆ ಇದನ್ನು ನಿಯಂತ್ರಿಸಬೇಕಿರುವ ಪೆÇಲೀಸ್ ಇಲಾಖೆಯ ಕಾರ್ಯಶೈಲಿಯೇ ಪ್ರಶ್ನೆಗೆ ಗುರಿಯಾಗತೊಡಗಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಧಿಕಾರಿಗಳಿಗೆ ಸೂಕ್ತ ಸೂಚನೆಯ ಮೂಲಕ ಕಾನೂನು ಪಾಲನೆಗೆ ಮುಂದಾಗಬೇಕು ಎಂದು ಮಹೇಶ್ವರಿ ವಾಲಿ ಒತ್ತಾಯಿಸಿದ್ದಾರೆ.
Comments are closed.