ಆಳಂದ: ಕಡಗಂಚಿ ಮೌಂಟ್ ಕಾಮೇಲ್ ಶಾಲೆಯಲ್ಲಿ ನಡೆದ ಅಗ್ನಿ ಅವಘಡ ತಡೆ ಜಾಗೃತಿಯಲ್ಲಿ ಅಗ್ನಿಶಾಮಕ ಮಾಸ್ಟರ್ ಸಲೀಂ ಮಾತನಾಡಿದರು. ಪ್ರಕಾಶ ಎಸ್. ಮಾಲ್ಗೆ, ಅಗ್ನಿಶಾಮಕ ಅಧಿಕಾರಿ ಶೇಖ್ ಇಮಾಮ್ ಅಲಿ ಇತರರು ಇದ್ದರು.
ಅಳಂದ: ಕಡಗಂಚಿ ಮೌಂಟ್ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಹಾಗೂ ಮೌಂಟ್ ಕಾರ್ಮೆಲ್ ಶಾಲೆ, ಕಡಗಂಚಿ ಆಶ್ರಯದಲ್ಲಿ ಅಗ್ನಿಶಾಮಕ ಜಾಗೃತಿ ಮತ್ತು ಅಗ್ನಿ ನಂದಿಸುವ ಪ್ರದರ್ಶನ ನಡೆಯಿತು.
ಈ ಕಾರ್ಯಕ್ರಮದಲ್ಲಿ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 65 ಮಂದಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.
ಅಳಂದ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾ ಮಾಸ್ಟರ್ ಸಲೀಂ, ಪ್ರಕಾಶ ಎಸ್. ಮಾಲ್ಗೆ, ಅಗ್ನಿಶಾಮಕ ಅಧಿಕಾರಿ ಶೇಖ್ ಇಮಾಮ್ ಅಲಿ, ಸಹಾಯಕ ಅಧಿಕಾರಿ ಹಾಗೂ ಅವರ ತಂಡದಿಂದ ವಿದ್ಯಾರ್ಥಿಗಳಿಗೆ ಜೀವ ರಕ್ಷಣೆಯ ಮಾರ್ಗಗಳನ್ನು ಪ್ರಾತ್ಯಕ್ಷಿಕೆ ಗ್ಯಾಸ್ ಸಿಲಿಂಡರ್ ಅಪಾಯ ನಿರ್ವಹಣೆ – ಸೋರಿಕೆಯ ಪತ್ತೆ, ಸುರಕ್ಷಿತ ಬಳಕೆ, ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ತೋರಿಸಿದರು. ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ ತಕ್ಷಣದ ಸ್ಥಳಾಂತರ, ಮೆಟ್ಟಿಲಿನ ಬಳಕೆ, ಲಿಫ್ಟ್ ಬಳಕೆಯನ್ನು ತಪ್ಪಿಸುವುದು ಕುರಿತು ಅಧಿಕಾರಿಗಳು ವಿವರಿಸಿದರು.
ಕಾರ್ಮೆಲ್ ಜ್ಯೋತಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಫಾ. ವಿಲಿಯಂ ಮಿರಾಂಡಾ ಮತ್ತು ಮೌಂಟ್ ಕಾರ್ಮೆಲ್ ಶಾಲೆಯ ವ್ಯವಸ್ಥಾಪಕ ಫಾ. ದೀಪಕ್ ಥಾಮಸ್ ಅವರ ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದರು.