Shubhashaya News

ದೇವದಾಸಿ ಮಹಿಳೆಯರ ಸಾಮಾಜಿಕ ಸಬಲೀಕರಣ ಜಾಗೃತಿ

ಆಳಂದ: ನರೋಣಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮ ಪಿಎಸ್‍ಐ ಸಿದ್ಧರಾಮ ಬಿ. ನಿಂಬರಗಿ ಉದ್ಘಾಟಿಸಿದರು. ಪ್ರಾಚಾರ್ಯ ಅಮೃತ ಬೆಳಮಗಿ, ರೈತ ಮುಖಂಡ ಪಾಂಡುರಂಗ ಮಾವೀನಕರ್ ಇತರರು ಇದ್ದರು.

ಆಳಂದ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಕಲಬುರಗಿ, ಪೆÇಲೀಸ್ ಇಲಾಖೆ, ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜ್ ನರೋಣ ಆಶ್ರಯದಲ್ಲಿ ತಾಲೂಕಿನ ನರೋಣ ಗ್ರಾಮದಲ್ಲಿ ದೇವದಾಸಿ ಮಹಿಳೆಯರಿಗೆ ಮತ್ತು ಸಾಮಾನ್ಯ ಮಹಿಳೆಯರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವು ನಡೆಯಿತು.
ಸಭೆಯ ಉದ್ಘಾಟಿಸಿದ ನರೋಣಾ ಠಾಣೆಯ ಪಿಎಸ್‍ಐ ಸಿದ್ದರಾಮ್ ಬಿ. ನಿಂಬರ್ಗಾ ಅವರು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜ್ ನರೋಣ ಅಮೃತ್ ಬೆಳಮಗಿ, ಮುಖ್ಯ ಅತಿಥಿಯಾಗಿ ರೈತ ಸಂಘದ ಪಾಂಡುರಂಗ ಮಾವಿನ್ ಭಾಗವಹಿಸಿ ಮಾತನಾಡಿದರು.
ನ್ಯಾಯವಾದಿ ಡಾ. ಸಂಜೀವಕುಮಾರ್ ನಿರ್ಮಲ್ಕರ್, ಧೂಳಪ್ಪ ಬಿ. ದ್ಯಾಮನ್ಕರ್ ಮತ್ತು ಶ್ವೇತಾ ಖಜೂರಿ, ಶಿವಕುಮಾರ್ ಬಿರೇದಾರ್, ಮತ್ತು ಪಾರ್ವತಿ ಬಾಯ್ ಉಪನ್ಯಾಸಕರಾಗಿ ಭಾಗವಹಿಸಿ, ಕಾನೂನು ಜಾಗೃತಿಯ ವಿವಿಧ ಅಂಶಗಳ ಕುರಿತು ಮಾಹಿತಿ ನೀಡಿದರು.
ಪ್ರಾಸ್ತಾವಿಕ ವೈ.ಡಿ. ಬಡಿಗೇರ್ ಮಾತನಾಡಿದರು, ಬಸವರಾಜ್ ನಿಂಬರ್ಗಿಕರ್ ನಿರೂಪಿಸಿದರು. ಮಲ್ಲಿಕಾರ್ಜುನ್ ಅಂಕಲಗಿ ಮತ್ತು ಶ್ರೀ ನಾಮದೇವ್ ದೊಡ್ಡಮನಿ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ಒದಗಿಸಲಾಗುವ ವಿವಿಧ ಯೋಜನೆಗಳು, ಕಾನೂನು ನೆರವು, ಮತ್ತು ಸಾಮಾಜಿಕ ಸಬಲೀಕರಣದ ಕುರಿತು ವಿವರವಾಗಿ ಚರ್ಚಿಸಲಾಯಿತು.

Comments are closed.

Don`t copy text!