ಆಳಂದ: ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಕಾಲೇಜು ಹಂತದ ಶಾಲಾ ಸಂಸತ್ತಿನ ಚುನಾವಣೆ ಅಂಗವಾಗಿ ವಿಶೇಷ ಮಹಿಳಾ ಮತಗಟ್ಟೆಯ ಮೂಲಕ ಮತದಾನ ಕೈಗೊಳ್ಳಲಾಯಿತು.
ಅಳಂದ್: ಪಟ್ಟಣದ ಹೆಬ್ಬಳಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಕ್ಲಬ್‍ನ ಆಶ್ರಯದಲ್ಲಿ ಗುರುವಾರ ವಿದ್ಯಾರ್ಥಿನಿರಯರಿಗೆ ಮತದಾನದ ಮಹತ್ವ ಮತ್ತು ಮತದಾನ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲೇಜು ಹಂತದ ಶಾಲಾ ಸಂಸತ್ತಿನ ಚುನಾವಣೆಯನ್ನು ಯಶಸ್ವಿಯಾಗಿ ನಡೆಯಿತು.
ಈ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರ ಆಧರಿತ ಮಾದರಿಯಲ್ಲೇ ಟ್ಯಾಬಗಳನ್ನೇ ವಿದ್ಯುನ್ಮಾನ ಯಂತ್ರಗಳನ್ನಾಗಿ ಆಯೋಜಿಸುವ ಮೂಲಕ ನಿಜವಾದ ಚುನಾವಣೆಯ ಅಣಕು ರೂಪವಾಗಿ ಮಾರ್ಪಾಡುಗೊಳಿಸಲಾಗಿತು.
ವಿಶೇಷವಾಗಿ ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರೇ ಮತದಾರರಾಗಿದ್ದರಿಂದ, ಈ ಮತಗಟ್ಟೆಯನ್ನು ‘ಪಿಂಕ್ ಮತಗಟ್ಟೆ’ ಎಂದು ಗುರುತಿಸಲಾಗಿತ್ತು. ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಕಾಲೇಜಿನ ಪ್ರಾಚಾರ್ಯ ಜೋರಾ ಫಾತಿಮಾ ಅವರು ಪಿಆರ್‍ಒ ಆಗಿ ಕಾರ್ಯರ್ನಿಹಿಸಿದರೆ, ಇತಿಹಾಸ ಉಪನ್ಯಾಸಕಿ ರವಿಸಾಬಾನು ಅವರು ಎಪಿಆರ್‍ಒ ಆಗಿ, ಕುಮಾರಿ ರೇಣುಕಾ ಮತ್ತು ನಿರ್ಮಲ ಹಾಗೂ ಪೆÇೀಲಿಂಗ್ ಅಧಿಕಾರಿಯಾಗಿ ಅತಿಥಿ ಉಪನ್ಯಾಸಕÀರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದರು.
ಚುನಾವಣೆಯ ಯಶಸ್ವಿಗೊಳಿಸಲು ಕಾಲೇಜಿನ ಮಂಜುನಾಥ್, ಶಿವರಾಜ್ ಚವುಲ್, ಮಲ್ಲಿಕಾಜುಪ್ಪ, ರಫಿಯೋದ್ದೀನ್ ಪ್ರಥಮ ದರ್ಜೆ ಸಹಾಯಕ ರಾಹುಲ್ ಬಂಡಗಾರ ಅವರು ಸಕ್ರಿಯವಾಗಿ ಸಹಕರಿಸಿದರು.
ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್‍ಗಳೊಂದಿಗೆ ಮತಗಟ್ಟೆಗೆ ಆಗಮಿಸಿ, ನಿಜವಾದ ಚುನಾವಣೆಯಂತೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಫಲಿತಾಂಶವನ್ನು ಘೋಷಿಸಲಾಗಿದ್ದು, ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ಅರಿತುಕೊಳ್ಳಲು ಮತ್ತು ಜನಾಭಿಪ್ರಾಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿತು. ಈ ಮಾದರಿ ಚುನಾವಣೆಯು ಯುವ ಮತದಾರರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಭಾರತ ಚುನಾವಣೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಉಪನ್ಯಾಸಕ ಶ್ರೀಶೈಲ ಮಾಳಗೆ ಅವರು ವಿವರಿಸಿದರು.
Comments are closed.