Shubhashaya News

ಎಐ ಸದ್ಬಳಕೆಯ ಮೂಲಕ ಕಲಿಕೆಯ ಗುಣಮಟ್ಟ ಹೆಚ್ಚಿಸಿ: ಇನಾಮದಾರ   

ಆಳಂದ: ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಎಐ   ಬಳಕೆ ಕುರಿತು ಇಂಜಿನಿಯರ್ ರಫೀಕ್ ಇನಾಮದಾರ ಮಾತನಾಡಿದರು. ಪ್ರಾಚಾರ್ಯ ಜೋಹರಾ ಫಾತಿಮಾ, ಪತ್ರಕರ್ತ ಮಹಾದೇವ ವಡಗಾಂವ ಇದ್ದರು.

 

ಆಳಂದ: ಸ್ಪರ್ಧಾತ್ಮಕತೆ ಕಾಲಘಟದಲ್ಲಿ ಎಐನಂತ ತಂತ್ರಜ್ಞಾನದ ಸದ್ಬಳಕೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಗುಣಮಟ್ಟವನ್ನು ವೃದ್ಧಿಸಿಕೊಳ್ಳಲು ಉತ್ತಮ ಅವಕಾಶವಿದೆ. ಇದನ್ನು ಬಳಸಿಕೊಳ್ಳುವ ಕೌಶಲ್ಯವನ್ನು ತಂದುಕೊಳ್ಳಬೇಕು ಎಂದು ಎಐ ಇಂಜಿನಿಯರ್ ರಫೀಕ್ ಇನಾಮದಾರ ಅವರು ಹೇಳಿದರು.

ಪಟ್ಟಣದ ಹೆಬ್ಬಳ್ಳಿ ರಸ್ತೆಯಲ್ಲಿರುವ ಏಕೈಕಕ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಕಲಿಕೆಯಲ್ಲಿ ಎಐ (ಕೃತಕ ಬುದ್ದಿಮತೆ) ತಂತ್ರಜ್ಞಾನ ಕಾರ್ಯಕ್ಷಮತೆಯ ಬಗ್ಗೆ ಪ್ರಾಯೋಗಿಕ ತೋರಿಸಿ ಅವರು ಮಾತನಾಡಿದರು.

ಉನ್ಯಾಸಕರು ಬೋಧಿಸಿದ ವಿಜ್ಞಾನ ಮತ್ತು ಗಣಿತದಂತಹ ಕಠಿಣ ವಿಷಯಗಳನ್ನು ಸ್ವಯಂ ಅಧ್ಯಯನದಲ್ಲಿ ಅರ್ಥಮಾಡಿಕೊಳ್ಳುವಲ್ಲಿ ತೊಂದರೆಯಾದಾಗ, ಚಾಟ್‍ಜಿಪಿಟಿಯಂತ ಅನೇಕ ಪ್ಲಾಟ್‍ಫಾರ್ಮ್‍ಗಳು ಮತ್ತು ಯೂಟ್ಯೂಬ್‍ನಂತಹ ಆನ್‍ಲೈನ್ ಸಂಪನ್ಮೂಲಗಳನ್ನು ಹೀಗೆ ಬಳಸಿ ಕೊಳ್ಳಬೇಕೆಂಬುದು ಮುಖ್ಯವಾಗಿದೆ. ಎಐ ಸಹಾಯಕನಾಗಿ ನೆರವು ನೀಡುತ್ತದೆ. ಯೂಟ್ಯೂಬ್‍ನಲ್ಲಿ ಜಾಗತಿಕ ಮಟ್ಟದ ಉಪನ್ಯಾಸಕರಿಂದ ಲಭ್ಯವಿರುವ ಉಚಿತ ಪಾಠಗಳು ಇಂದು ಕಲಿಕೆಯನ್ನು ಸುಲಭಗೊಳಿಸಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ನೀವು ಕಲಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಬಹುದು, ಇಂತಹ ತಂತ್ರಜ್ಞಾನ ಸಾಧನಗಳು ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ಕಲಿಯಲು ಮತ್ತು ತಮ್ಮ ಜ್ಞಾನವನ್ನು ವಿಸ್ತರಿಸಲು ಅವಕಾಶವನ್ನು ಒದಗಿಸುತ್ತವೆ ಎಂದು ಹೇಳಿದರು.

ಕಲಿಕಯಲ್ಲಿನ ಎಐ ಸಮರ್ಥವಾಗಿ ಬಳಕೆಯ ಸ್ಕಿಲ್‍ನಿಂದ ಸಂಕೀರ್ಣ ವಿಷಯಗಳನ್ನು ಸರಳವಾಗಿ ಗ್ರಹಿಸಲು ಮತ್ತು ಅಕಾಡೆಮಿಕ್ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಸ್ವತಂತ್ರ ಕಲಿಕೆಯ ಸಾಮಥ್ರ್ಯವನ್ನು ಹೆಚ್ಚಿಸುವುದರ ಜೊತೆಗೆ, ಆತ್ಮವಿಶ್ವಾಸವನ್ನೂ ವೃದ್ಧಿಸುತ್ತದೆ ಎಐ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಹಲವು ಕ್ಷೇತ್ರಗಳಿಗೆ ಇದು ಸಹಾಯಕವಾಗಿ ನಿಂತುಕೊಂಡಿದೆ ಎಂದು ವಿವರಿಸಿದರು.

“ಕಲಿಕೆಯ ಯಶಸ್ಸು ಕೇವಲ ಜ್ಞಾನದ ಮೇಲೆ ಮಾತ್ರ ಅವಲಂಬಿತವಾಗಿಲ್ಲ; ಶಿಸ್ತು ಮತ್ತು ಸಮಯ ಪ್ರಜ್ಞೆಯಿಂದ ನಿಮ್ಮ ಗುರಿಗಳನ್ನು ತಲುಪುವುದು ಸಾಧ್ಯವಾಗುತ್ತದೆ,” ಸಮಯವನ್ನು ಸಮರ್ಪಕವಾಗಿ ನಿರ್ವಹಿಸುವುದು, ಆದ್ಯತೆಗಳನ್ನು ನಿರ್ಧರಿಸುವುದು, ಮತ್ತು ಶಿಸ್ತಿನ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ ಅಲ್ಲದೆ,  “ನಿಮ್ಮ ಯಶಸ್ಸು ಕೇವಲ ಶೈಕ್ಷಣಿಕ ಸಾಧನೆಗಳಿಂದ ಮಾತ್ರವಲ್ಲ, ನಿಮ್ಮ ವರ್ತನೆ, ಸತ್ಯನಿμÉ್ಠ, ಮತ್ತು ಇತರರಿಗೆ ಗೌರವ ಕೊಡುವ ಗುಣಗಳಿಂದಲೂ ನಿರ್ಧರಿತವಾಗುತ್ತದೆ,” ಎಂದು ಅವರು ತಿಳಿಸಿದರು.

ಪ್ರಾಚಾರ್ಯೆ ಜೋಹರ ಫಾತಿಮಾ ಅವರು ಮಾತನಾಡಿ, ಪತ್ರಕರ್ತರ ಸಹಾಯದಿಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ ಇಂದು ಎಐ ಮಾಹಿತಿ ಒದಗಿಸುವ ಕಾರ್ಯಕ್ರಮ ಆಕಸ್ಮಿಕವಾಗಿ ನಡೆಯಿತ್ತಾದರು, ಇದು ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಶಕವಾಗಿ ಕಲಿಕೆಯ  ಜೀವನದ ದಿಕ್ಕನ್ನೇ ಬದಲಾಯಿಸಿಕೊಡಲಿದೆ. ವಿದ್ಯಾರ್ಥಿನಿಯರು ಪಾಠದ ಜೊತಗೆ ಹಲವು ಕ್ಷೇತ್ರಗಳ ಸಾಧನೆಗೆ ಅಗತ್ಯ ಜ್ಞಾನ ಕೌಶಲ್ಯವನ್ನು ತಂದುಕೊಂಡು ಅಭಿವೃದ್ಧಿಯಾಗಿ ಕಾಲೇಜು ಮತ್ತು ಕುಟುಂಬಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.

ವೇದಿಕೆಯಲ್ಲಿದ್ದ ಹಿರಿಯ ಪತ್ರಕರ್ತ ಮಹಾದೇವ ವಡಗಾಂವ ಅವರು ಮಾತನಾಡಿ, ಸರ್ಕಾರಿ ಶಾಲಾ ಕಾಲೇಜುಗಳ ಹಾಗೂ ಇಂದಿನ ಒಟ್ಟಾರೆ ಮಕ್ಕಳ ಪ್ರತಿಭೆ ಯಾವುದರಲ್ಲೂ ಕಡಿಮೆ ಇಲ್ಲ. ಆದರೆ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಮಾಹಿತಿ ತರಬೇತಿ ಕೊಟ್ಟರೆ ಎಲ್ಲವನ್ನು ಗೆಲ್ಲಬಲ್ಲರು. ಇದಕ್ಕಾಗಿ ಸರ್ಕಾರ ತರಗತಿಯ ವಿಷಯಗಳ ಜೊತೆಯಲ್ಲೇ ಗಣಕ ಯಂತ್ರ ಲ್ಯಾಪಟಾಪ ಇಂಟರನೆಟ್ ಎಐ ಬಳಕೆಯಂತ ತರಬೇತಿಗಳನ್ನು ಸಂನ್ಮೂಲ ವ್ಯಕ್ತಿಗಳಿಂದ ನೀಡುವ ಮೂಲಕ ಮಕ್ಕಳನ್ನು ಜಾಗತೀಕ ಮಟ್ಟದ ಸ್ಪರ್ಧೆ ಪೈಪೋಟಿಗಳನ್ನು ಎದುರಿಸುವ ಸಾಮಥ್ರ್ಯ ತಂದುಕೊಳ್ಳುತ್ತಾರೆ ಎಂದರು.

ಆಂಗ್ಲ ಉಪನ್ಯಾಸ ಶ್ರೀಶೈಲ ಮಾಳಗೆ ನಿರೂಪಿಸಿ ವಂದಿಸಿದರು. ಉಪನ್ಯಾಸಕರಾದ ಶಿವರಾಜ ಚೌಲ್, ಮಲ್ಲಕಾಜಪ ಕಲ್ಲೂರ, ಮಂಜುನಾಥ, ರಫಿಯೋದ್ದೀನ್, ರವಿಸಾಬೇಗಂ, ನಿರ್ಮೂಲಾ, ರಾಹುಲ ಬಂಡಗರ, ರೇಣುಕಾ ಮತ್ತು ಋಷಿಕೇಶ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comments are closed.

Don`t copy text!