ಆಳಂದ ಪಟ್ಟಣದಲ್ಲಿ ಸಲೀಂ ಜಮಾದಾರ ನೇತೃತ್ವದಲ್ಲಿ ನೂರಾರು ಮುಸ್ಲಿಂ ಮುಖಂಡರು ಮಾಜಿ ಶಾಸಕ ಸುಭಾಷ ಗುತ್ತೇದಾರ ಸಮ್ಮುಖ ಬಿಜೆಪಿ ಸೇರ್ಪಡೆಯಾದರು.
ಆಳಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಮುಸ್ಲಿಂ ಮುಖಂಡರು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರ ನಾಯಕತ್ವವನ್ನು ಒಪ್ಪಿಕೊಂಡು ಬಿಜೆಪಿ ಸೇರ್ಪಡೆಯಾದರು.
ಇತ್ತೀಚಿಗೆ ಆಳಂದ ಪಟ್ಟಣದ ಮಟಕಿ ರಸ್ತೆಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಳಂದ ಪಟ್ಟಣದ ಬಂಗಡಿಪೀರ್, ಬಾಹೇರಪೇಠ, ಮಟಕಿ ರಸ್ತೆ, ರಜ್ವಿ ರಸ್ತೆಯ ಭಾಗದ ನೂರಾರು ಜನ ಮುಸ್ಲಿಂ ಮುಖಂಡರು ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿ, ಆಳಂದನಲ್ಲಿ ಶಾಸಕ ಬಿ ಆರ್ ಪಾಟೀಲ ಹೆಸರಿಗೆ ಮಾತ್ರ ಶಾಸಕರಾಗಿದ್ದಾರೆ ಆದರೆ ಅಸಲಿಗೆ ಅವರ ಅಣ್ಣನ ಮಗ ಆರ್ ಕೆ ಪಾಟೀಲ ಅಧಿಕಾರ ಚಲಾಯಿಸುತ್ತಿದ್ದು ಇದರಿಂದ ಸಾಮಾನ್ಯ ಜನ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನಲ್ಲಿ ವ್ಯಾಪಕ ಭೃಷ್ಟಾಚಾರ ಮನೆ ಮಾಡಿದೆ. ಪ್ರತಿ ಕೆಲಸಕ್ಕೆ ದುಡ್ಡು ಕೊಟ್ಟು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಮಾತನಾಡಿ, ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ಬಿಜೆಪಿಯ ಮೂಲಮಂತ್ರವೇ ಸರ್ವರ ಜೊತೆಗೆ ಸರ್ವರ ವಿಕಾಸ ಅದು ಎಲ್ಲರ ಪರಿಶ್ರಮದೊಂದಿಗೆ ಎಂಬುವುದಾಗಿದೆ. ಆಳಂದ ತಾಲೂಕಿನಲ್ಲಿ ಸರ್ವ ಜನರನ್ನು ಕರೆದುಕೊಂಡು ಹೋಗುವ ಶಕ್ತಿ ಕೇವಲ ಸುಭಾಷ್ ಗುತ್ತೇದಾರ ಅವರಲ್ಲಿದೆ. ಇದು ಚುನಾವಣೆಯ ಕಾಲವಲ್ಲದಿದ್ದರೂ ಅನೇಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಇದು ಮುಂದಿನ ದಿನಗಳಲ್ಲಿ ಸುನಾಮಿಯಾಗಿ ಪರಿವರ್ತನೆಯಾಗಲಿದೆ ಎಂದು ಹೇಳಿದರು.
ಮುಖಂಡ ಸಲೀಮ ಜಮಾದಾರ ಮಾತನಾಡಿ, ಶಾಸಕ ಬಿ ಆರ್ ಪಾಟೀಲ ಅಲ್ಪಸಂಖ್ಯಾತರನ್ನು ಕೇವಲ ವೋಟ್ ಬ್ಯಾಂಕ್‍ಗಳಿಗಾಗಿ ಬಳಸಿಕೊಂಡಿದ್ದಾರೆ. ಮುಸ್ಲಿಂರು ಕೆಲಸ ಮಾಡಿಕೊಳ್ಳಲು ಹೋದರೆ ವಾಚಾಮಗೋಚರ ಬೈಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಲೀಂ ಜಮಾದಾರ ನೇತೃತ್ವದಲ್ಲಿ ಫಯ್ಯಾಜ್ ಶೇಖ್, ಮನ್ಸೂರ ಶೇಖ್, ಆಸೀಫ್ ಶೇಖ್, ಸೈಯ್ಯದ್ ಝಾಕೀರ್ ಅಹ್ಮದ್, ಫಯ್ಯಾಜ್ ಪಟೇಲ್, ಸಮೀರ ಅನ್ಸಾರಿ, ಫಕ್ರುದ್ದೀನ್ ರೋತೆ, ಆಶ್ಪಾಕ್ ಮುಲ್ಲಾ, ಸಾಹೇಬಲಾಲ್, ಮಹಮ್ಮದ್ ನಿಜಾಮ್, ಇಲಿಯಾಸ್, ಅನ್ವರ್ ಭಾಷಾ, ಹೈದರಸಾಬ್, ಚಾಂದ ಪಾಶಾ, ನೂರುದ್ದೀನ್, ಮನಸೂರಸಾಬ್, ಮೆಹಬೂಬ್ ಪಾಶಾ, ಬಿಲಾವಲ್, ರುಕ್ಮೊದ್ದೀನ್, ಅಜೀಮ ಪಾಶಾ, ಜೈನುದ್ದೀನ್, ಕುತ್ಬುದ್ದೀನ್ ಸೇರಿದಂತೆ ನೂರಾರು ಮುಸ್ಲಿಂ ಮುಖಂಡರು, ಯುವಕರು ಬಿಜೆಪಿ ಬಾವುಟ ಹಿಡಿದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.
ಪಕ್ಷ ಸೇರ್ಪಡೆಗೆ ಮೊದಲು ಬಸ್ ನಿಲ್ದಾಣದಿಂದ ರಜ್ವಿ ರಸ್ತೆ ಮಾರ್ಗವಾಗಿ ಮಟಕಿ ರಸ್ತೆಯವರೆಗೆ ಜೈಘೋಷ ಕೂಗುತ್ತಾ ಬಾಜಾ ಭಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ಮುಖಂಡರನ್ನು ಬರ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಸಂತೋಷ ಗುತ್ತೇದಾರ, ಸಿ ಕೆ ಪಾಟೀಲ, ಪುರಸಭೆ ಸದಸ್ಯ ಮೃತ್ಯುಂಜಯ ಆಲೂರೆ, ಶಿವಪುತ್ರ ನಡಗೇರಿ, ತಾ.ಪಂ ಮಾಜಿ ಸದಸ್ಯ ಶಿವಪ್ಪ ವಾರಿಕ, ಮುಖಂಡ ಕಲ್ಯಾಣಿ ದೊಡ್ಡಮನಿ, ಆಕಾಶ ದೇಗಾಂವ, ಮಹಾದೇವ ಕಾಂಬಳೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
Comments are closed.