ಆಳಂದ: ಬಬಲೇಶ್ವರ ಗ್ರಾಮದ ಮನೆಗಳಿಗೆ ಹೊಂದಿಕೊಂಡ ವೀರಭದ್ರಪ್ಪ ಆಳಂಗೆ ಎಂಬುವರ ಹೊಲದಲ್ಲಿ ದೇವರ ಗುಡಿಯಿದೆ ಎಂದು ಶಂಕ್ಯೆಯಿಂದ ಅಗೆದಾಗ ಪತ್ತೆಯಾದ ಛಾವಣಿ ಎನ್ನಲಾಗಿದೆ.
ಆಳಂದ: ತಾಲೂಕಿನ ಖಜೂರಿ ಬಳಿಯ ಬಬಲೇಶ್ವರ ಗ್ರಾಮದ ಗ್ರಾಮಕ್ಕೆ ಹೊಂದಿಕೊಂಡ ಹೊಲದಲ್ಲಿ ಮಣ್ಣಿನಲ್ಲಿ ಹೂತುಹೋಗಿರುವ ಪುರಾತನ ದೇವಾಲಯವೊಂದು ಇದೇ ಗ್ರಾಮಸ್ಥರು ಶಂಕಿಸಿದ್ದಾರೆ.
ಬುಧವಾರ ಛಾವಣಿಯ ಭಾಗ ಕಂಡುಬಂದಿದ್ದು, ಗುರುವಾರ (ಆಗಸ್ಟ್ 07, 2025) ಬೆಳಿಗ್ಗೆ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳನ್ನು ಬಳಸಿ ಐವರು ಸ್ವಾಮೀಜಿಗಳ ಸಮ್ಮುಖದಲ್ಲಿ ಉತ್ಖನನ ಕಾರ್ಯ ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಬಬಲೇಶ್ವರ ಗ್ರಾಮಕ್ಕೆ ಹೊಂದಿಕೊಂಡಿರುವ ವೀರಭದ್ರಪ್ಪ ಆಳಂಗೆ ಅವರ ಜಮೀನಿನಲ್ಲಿ ಭೂಮಿ ಅಗೆದುನೋಡಿದಾಗ ಛಾವಣಿ ಪತ್ತೆಯಾಗಿದೆ.
ತಿಂಗಳ ಹಿಂದೆ ನಡೆದ ಮೊಹರಂ ಉತ್ಸವದ ವೇಳೆ ದೇವರ ಹೇಳಿಕೆಯ ಆಧಾರದ ಮೇಲೆ ಗ್ರಾಮಸ್ಥರು ಅಗೆತ ಕಾರ್ಯ ಆರಂಭಿಸಿದ್ದರು. “ಈ ಜಾಗದಲ್ಲಿ ಗುಡಿಯಿದೆ, ಇದನ್ನು ತೆಗೆಯದಿದ್ದರೆ ಊರಿಗೆ ಕಾಟ ನಿಲ್ಲದು” ಎಂಬ ದೇವರ ಭವಿಷ್ಯದ ಹೇಳಿಕೆಯನ್ನು ಆಧರಿಸಿ, ಬುಧವಾರ 20-30 ಮಂದಿ ಗ್ರಾಮಸ್ಥರು ಸೇರಿ ಅಗೆತ ಕಾರ್ಯ ನಡೆಸಿದಾಗ ಛಾವಣಿಯ ರೂಪದಲ್ಲಿ ಭಾಗವೊಂದು ಪತ್ತೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಘಟನೆಯಿಂದ ಉತ್ಸಾಹಿತರಾದ ಗ್ರಾಮಸ್ಥರು, ನಂದಗಾಂವ ಮಠ ಮತ್ತು ಬಬಲಾದ ಮಠದ ಸ್ವಾಮೀಜಿಗಳನ್ನು ಆಮಂತ್ರಿಸಿ, ಐವರು ಮಠಾಧೀಶರ ಸಮ್ಮುಖದಲ್ಲಿ ಗುರುವಾರ ಬೆಳಿಗ್ಗೆ ಉತ್ಖನನ ಕಾರ್ಯವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಸಹಾಯದಿಂದ ನಡೆಯಲಿರುವ ಈ ಕಾರ್ಯಕ್ಕೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಸಹಕರಿಸಲಿದ್ದಾರೆ ಎಂದು ಗ್ರಾಮದ ಮೂಲಗಳು ತಿಳಿಸಿವೆ.
ಈ ಪುರಾತನ ದೇವಾಲಯದ ಉತ್ಖನನದಿಂದ ಗ್ರಾಮದ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಬೆಳಕಿಗೆ ಬರಬಹುದು ಎಂಬ ನಿರೀಕ್ಷೆಯಿದೆ. ಈ ಕಾರ್ಯಕ್ಕೆ ಸ್ಥಳೀಯ ಆಡಳಿತದಿಂದಲೂ ಬೆಂಬಲ ದೊರೆಯುವ ಸಾಧ್ಯತೆಯಿದೆ. ಉತ್ಖನನದ ನಂತರ ದೇವಾಲಯದ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಕಾದುನೋಡುವಂತೆ ಮಾಡಿದೆ.
Comments are closed.