ಭೂಸನೂರ ಹಿರಿಯ ಮುಖಂಡ ಬಾಬುಗೌಡ ಪಾಟೀಲ ಮಾಜಿ ಶಾಸಕ ಸುಭಾಷ ಗುತ್ತೇದಾರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಆಳಂದ ತಾಲೂಕಿನ ಭೂಸನೂರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಬಾಬುಗೌಡ ಪಾಟೀಲ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಇತ್ತೀಚಿಗೆ ಭೂಸನೂರ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ತಾಲೂಕಿನಲ್ಲಿ ಭೃಷ್ಟಾಚಾರ ಮನೆ ಮಾತಾಗಿದೆ ಇದರಿಂದ ಬೇಸತ್ತು ತಮ್ಮ ಕಾರ್ಯಕರ್ತರೊಂದಿಗೆ ಬೇಷರತ್ತಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ಬಾಬುಗೌಡ ಪಾಟೀಲ ಅವರ ಆಗಮನದಿಂದ ನಿಂಬರ್ಗಾ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಗೆ ಆನೆಬಲ ಬಂದಂತಾಗಿದೆ. ಬಾಬುಗೌಡ ಪಾಟೀಲರು ಈ ಭಾಗದ ಹಿರಿಯ ಮುಖಂಡರಾಗಿದ್ದು ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ವ್ಯವಸ್ಥಿತವಾಗಿ ಸಾಗಲಿ ಅಲ್ಲದೇ ಹಿರಿಯ, ಕಿರಿಯ, ಮೂಲ, ಹಳೆಯ ಕಾರ್ಯಕರ್ತರನ್ನು ಸೇರಿಸಿಕೊಂಡು ಪಕ್ಷ ಸಂಘಟಿಸಲಿ ಎಂದು ಸಲಹೆ ನೀಡಿದರು.
ಬಾಬುಗೌಡ ಪಾಟೀಲ ನೇತೃತ್ವದಲ್ಲಿ ಶಾಂತಯ್ಯ ಸ್ಥಾವರಮಠ, ದಸ್ತಗೀರಸಾಬ್ ಗೌಂಡಿ, ಮಹಿಬೂಬ್‍ಸಾಬ್ ನದಾಫ್, ರಾಮ ಕೊಬಾಳೆ, ದತ್ತಣ್ಣಾ ಚೌಲ, ರಾಚಯ್ಯ ಸ್ವಾಮಿ, ಅಶೋಕ ಗುಂಡೆ, ದತ್ತು ಸಾಳುಂಕೆ, ಕಲ್ಯಾಣಿ ನಿಂಬಾಳ, ಸಿದ್ದಾರಾಮ ನೆಲ್ಲೂರ, ಗುಂಡಪ್ಪ ಪ್ಯಾಟಿ, ನೇಮಣ್ಣಾ ಬಳಗಾರ, ಶಿವಶರಣ ಕುಂಬಾರ, ಪಿಂಟು ಕ್ಷತ್ರಿ, ಅಭಿ ಕ್ಷೇತ್ರಿ, ರಾಮ ಕಲಶೆಟ್ಟಿ, ಫತ್ತುಸಾಬ ಬೆಣ್ಣೆಶಿರೂರ, ಗುರುಶಾಂತ ಜಮಾದಾರ, ಬಸವರಾಜ ಸೇರಿದಂತೆ ನೂರಾರು ಜನ ಪಕ್ಷ ಸೇರ್ಪಡೆಯಾದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಮಾತನಾಡಿ, ಶಾಸಕ ಬಿ ಆರ್ ಪಾಟೀಲ, ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ ಮಾಡುತ್ತಿರುವ ಭೃಷ್ಟಾಚಾರದ ವಿರುದ್ಧ ತಾವು ದೂರು ನೀಡುತ್ತಿರುವುದರಿಂದ ಅವರಿಗೆ ಭಯ ಶುರುವಾಗಿ ಹೋದಲ್ಲಿ ಬಂದಲೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಳಂದ ತಾಲೂಕಿನಲ್ಲಿ ರಾಜಕೀಯ ಕ್ರಾಂತಿ ನಡೆಯಲಿದ್ದು 2028ಕ್ಕೆ ಆಳಂದನಲ್ಲಿ ಬಿಜೆಪಿ ಶಾಸಕರಾಗುವುದು ಶತಸಿದ್ಧ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮುಖಂಡರಾದ ಅಣ್ಣಾರಾವ ಪಾಟೀಲ ಕವಲಗಾ, ಚಂದ್ರಕಾಂತ ಭೂಸನೂರ, ಶಿವಪ್ಪ ವಾರಿಕ, ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ಸಂತೋಷ ಗುತ್ತೇದಾರ, ಆನಂದ ಪಾಟೀಲ ಕೋರಳ್ಳಿ, ಶರಣಗೌಡ ಪಾಟೀಲ ದೇವಂತಗಿ, ನಾಗರಾಜ ಶೇಗಜಿ, ಮಹೇಶ ಗೌಳಿ, ಸಂತೋಷ ಹಾದಿಮನಿ, ಶ್ರೀಮಂತ ನಾಮಣೆ, ಗುಂಡಪ್ಪ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಇದ್ದರು.
Comments are closed.