Shubhashaya News

ಮಮದಾರಪೂರ  ಸಂಭ್ರಮದ ಕೋಲಾಟ

ಆಳಂದ: ಮಮದಾಪೂರ ಗ್ರಾಮದಲ್ಲಿ ನಾಗ ಪಂಚಮಿ ಪ್ರಯುಕ್ತ ಯುವಕರು, ಮಕ್ಕಳು ಕೈಗೊಂಡ ಕೋಲಾಟಕ್ಕೆ ಹಿರಿಯರು ಸಾಥ ನೀಡಿದರು.

ಆಳಂದ: ತಾಲೂಕಿನ  ಮಮದಾಪೂರ ಗ್ರಾಮದಲ್ಲಿ   ನಾಗರ ಪಂಚಮಿ ಪ್ರಯುಕ್ತ ಗ್ರಾಮದಲ್ಲಿ ಯುವಕರು ಮಕ್ಕಳು ಸೇರಿ ದೇವಾನು ದೇವತೆಗಳ ವೇಷ ಪೊಷಕ ತೋಟು ಕೈಗೊಂಡ ಕೋಲಾಟ ಹಬ್ಬದ ಮೆರಗು ನೀಡಿತು.

 

ಭಜನೆಯೊಂದಿಗೆ ಸಾಂಸ್ಕøತಿಕ ಉತ್ಸವ:

ಆಳಂದ ತಾಲೂಕಿನ ಮಮದಾಪುರ ಗ್ರಾಮದಲ್ಲಿ ನಾಗರ ಪಂಚಮಿ ಹಬ್ಬವನ್ನು ಸಂಸ್ಕೃತಿ, ಸಂಭ್ರಮ, ಮತ್ತು ಸಾಂಘಿಕತೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.

ಹಬ್ಬದ ಮುಖ್ಯ ಆಕರ್ಷಣೆಯಾಗಿ ಮಕ್ಕಳಿಂದ ಕೋಲಾಟದಲ್ಲಿ ಬಣ್ಣಬಣ್ಣದ ಉಡುಪು ಧರಿಸಿ, ಕೋಲು ಹಿಡಿದ ಮಕ್ಕಳು ಜನಪದ ಗೀತೆಗಳ ತಾಳಕ್ಕೆ ಸೊಗಸಾದ ಹೆಜ್ಜೆ ಹಾಕಿದರು. ಈ ಕಲಾತ್ಮಕ ಪ್ರದರ್ಶನ ಗ್ರಾಮಸ್ಥರ ಮನಸ್ಸನ್ನು ಗೆದ್ದಿತು. ಹಿರಿಯರು ಸಮೂಹವಾಗಿ ಭಜನೆ ಹಾಡುವ ಮೂಲಕ ಶ್ರಾವಣದ ನಾದಬ್ರಹ್ಮದಲ್ಲಿ ಭಕ್ತಿಪೂರಿತ ವಾತಾವರಣವನ್ನು ಸೃಷ್ಟಿಸಿದರು,

ಬಸವರಾಜ ಡಿಗ್ಗಿ, ಭೀಮಾಶಂಕರ ಬಬಾಲಾದೆ, ಶಂಕರ್ ಪಾಟೀಲ ಸಾಗರ್, ಭೀಮಳಿ, ಪ್ರವೀಣ ಕಾಪ್ಸೆ, ಮೌನೇಶ್ ಕೋರೆ, ಶ್ರೀಕಾಂತ್ ಕಾಪಸೆ, ಆಕಾಶ ಮಾನೆ ಸೇರಿದಂತೆ ಅನೇಕರು ಈ ಸಂಭ್ರಮದಲ್ಲಿ ಭಾಗಿಯಾದರು.

Comments are closed.

Don`t copy text!