Shubhashaya News

ಭಾಲಖೇಡದಲ್ಲಿ ಸಂಭ್ರಮದ ಕೋಲಾಟ

ಆಳಂದ: ಭಾಲಖೇಡ ಗ್ರಾಮದಲ್ಲಿ ಆಯೋಜಿಸಿದ್ದ ಕೋಲಾಟದಲ್ಲಿ ಕಲಾವಿದರಿಗೆ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಸನ್ಮಾನಿಸಲಾಯಿತು.

ಆಳಂದ: ತಾಲೂಕಿನ ಭಾಲಖೇಡ  ಗ್ರಾಮದಲ್ಲಿ ನಾಗರ ಪಂಚಮಿ ಪ್ರಯುಕ್ತ ಗ್ರಾಮದಲ್ಲಿ ಯುವಕರು ಮಕ್ಕಳು ಸೇರಿ ದೇವಾನು ದೇವತೆಗಳ ವೇಷ ಪೊಷಕ ತೋಟು ಕೈಗೊಂಡ ಕೋಲಾಟ ಹಬ್ಬದ ಮೆರಗು ನೀಡಿತು.
ಭಾಲಖೇಡ ಗ್ರಾಮದಲ್ಲಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕೋಲಾಟ ತಂಡದಿಂದ ಕೈಗೊಂಡ ಕೋಲಾಟ, ವಿವಿಧ ವೇಷಭೂಷಣ ಮತ್ತು ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜಾನಪದ ಕಲಾವಿದರಿಗೆ ಗೌರವ ಸತ್ಕಾರ, ಕಲಾ ಪ್ರದರ್ಶನ ಗಮನ ಸೆಳೆಯಿರು.
ಜಾನಪದ ಸಾಹಿತಿ ಡಾ.ವಾಸುದೇವ ಸೇಡಂ ಎಚ್. ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಮಾತನಾಡಿ, ಆಧುನಿಕ ಕಾಲದಲ್ಲಿ ಇಂತಹ ಜಾನಪದ ಸಂಸ್ಕøತಿ, ಪರಂಪರೆ ಮರೆಮಾಚುತ್ತಿರುವ ಈಗಿನ ಸಂದರ್ಭದಲ್ಲಿ ಅಪರೂಪದ ಕಲೆಯನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ, ಶಿವಯೋಗೆಪ್ಪಾ ಎಸ್. ಬಿರಾದಾರ ಸೇರಿ ಗ್ರಾಮಸ್ಥರು ಮಧ್ಯ ಜಾನಪದ ಕಲಾವಿದರಿಗೆ ಗೌರವಿಸಲಾಯಿತು.

Comments are closed.

Don`t copy text!