ಆಳಂದ: ಪಟ್ಟಣದ ವಾರ್ಡ್ 21ರಲ್ಲಿ ರಸ್ತೆ ಕಾಮಗಾರಿ ನಿರ್ಲಕ್ಷವನ್ನು ಬಿಜೆಪಿ ಉಪಾಧ್ಯಕ್ಷ ಸುನಿಲ ಹಿರೋಳಿಕರ್ ತೋರಿಸಿದರು.
ಆಳಂದ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಆರ್. ಪಾಟೀಲ ಅವರು ಪಟ್ಟಣದ ಜನತೆಗೆ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೊಟ್ಟ ಭರವಸೆಯನ್ನು ಈಡೇರಿಸದೇ ಮಾತಿಗೆ ತಪ್ಪಿದ್ದಾರೆ ಎಂದು ಬಿಜೆಪಿ ತಾಲೂಕು ಉಪಾಧ್ಯಕ್ಷ, ಪುರಸಭೆ ಮಾಜಿ ಸದಸ್ಯ ಸುನಿಲ ಹಿರೋಳಿಕರ್ ಅವರು ಹೇಳಿದರು.
ಶಾಸಕನಾಗಿ ಗೆಲ್ಲಿಸಿಕೊಟ್ಟರೆ ಪಟ್ಟಣದಲ್ಲಿ ಎರಡ್ಮೂರು ದಿನಕ್ಕಾದರು ನೀರು ಪೂರೈಕೆ ವ್ಯವಸ್ಥೆ ಮಾಡುವುದಾಗಿ ಪಾಟೀಲ ಎಂದಿದ್ದವರು, ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾದರು ನಿತ್ಯ ಬದಲು ಎರಡೂದಿನಕ್ಕೂ ನೀರು ಬಾರದೇ 8-10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಜನತೆಗೆ ಅವರು ಕೊಟ್ಟ ಮಾತಿಗೆ ತಪ್ಪಿದ್ದಾರೆ
ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಜನತೆಗೆ ಕೊಟ್ಟ ಭರವಸೆಗಳು ಈಡೇರಿಸಿದ್ದಾರೆ. ಆದರೆ ಪಾಟೀಲರೂ ತಾವು ಕೊಟ್ಟ ಮಾತನು ಉಳಿಸಿಕೊಳ್ಳಬೇಕಾಗಿತ್ತು ಎಂದು ಅವರು ಹೇಳಿದರು.
ಮಾತಿಗೆ ತಪ್ಪಿದ್ದಕ್ಕೆ ಪಟ್ಟಣದ ಜನತೆಗೆ 8ರಿಂದ 10ದಿನಕ್ಕೊಮ್ಮೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಮೂರ್ನಾಲ್ಕು ದಿನಗಳಾದ ಬಳಿಕ ಹುಳಗಳಾಗುತ್ತಿವೆ. ನೀರು ಗುಣಮಟ್ಟದ ಶುದ್ಧೀಕರಣವಾಗುತ್ತಿಲ್ಲ. ಹೀಗಾಗಿ ಗ್ರಾಹಕರಿಗೆ ಅಡುಗೆ ಬಳಕೆಗೆ ನೀರು ಯೋಗ್ಯವಾಗಿಲ್ಲ. ಶ್ರೀಮಂತರು ಶುದ್ದೀಕರಿಸಿದ ನೀರು ಖರೀದಿಸಿ ಬಳಸುತ್ತಾರೆ. ಆದರೆ ಬಡವರಿಗೆ ಇದು ಸಾಧ್ಯವಿಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ನೀರಿನ ಅನುಕೂಲ ಹೆಸರಿನಲ್ಲಿ ಬಡಾವಣೆಗಳಲ್ಲಿ ಕೈಗೆತ್ತಿಕೊಂಡ ಜಲ ಜೀವನ ಮಿಷನ್ ಪೈಪಲೈನ್ ಕಾಮಗಾರಿಗೆ ರಸ್ತೆ ಅಗೆದು ತಿಂಗಳಾನು ಗಟ್ಟಲೆ ಹಾಗೇ ಬಿಟ್ಟಿದ್ದಾರೆ. ಇದರಿಂದ ಬಡಾವಣೆಗಳಲ್ಲಿ ಜನರಿಗೆ ಓಡಾಟಕ್ಕೆ ತೊಂದರೆಯಾಗಿ ದ್ವಿಚಕ್ರವಾಹನ ಸವಾರರಿಗೆ ಅಪಘಾತ ಸಂಭವಿಸುತ್ತಿವೆ. ಮಕ್ಕಳು, ವೃದ್ಧರಿಗೆ ಸಮಸ್ಯೆಯಾಗಿದ್ದು, ಅಲ್ಲದೆ ಕಾಮಗಾರಿ ತೀರಾ ಆಮೆಗತ್ತಿಯಲ್ಲಿ ಸಾಗಿದೆ ಅನುಕೂಲದ ಹೆಸರಿನಲ್ಲಿ ಅನಾನುಕೂಲವೇ ಹೆಚ್ಚಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಉರಮಗಾ ಹೆದ್ದಾರಿಯಲ್ಲಿ ರಾಜಕಾಲುವೆ ಕಾಮಗಾರಿ ಒಂದು ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಇದರ ಅವಶ್ಯಕತೆ ಇರಲಿಲ್ಲ. ಇದೇ ಹಣವನ್ನು ಅಗತ್ಯವಿರುರುವ ವಾರ್ಡ್ ಕಾಮಗಾರಿ ಬದಲು ಗುತ್ತಿಗೆದಾರರ ಅನುಕೂಲಕ್ಕಾಗಿ ಮಾಡಿದ್ದು ಸರಿಯಲ್ಲ ಎಂದರು.
ಶ್ರೀರಾಮ ಮಾರುಕಟ್ಟೆಯಲ್ಲಿ ನಿರ್ಮಿಸಿದ ಸಾರ್ವಜನಿಕ ಗ್ರಂಥಾಲಯ ಕಟ್ಟಿ ಎರಡು ವರ್ಷವಾದರು ರಾಜಕೀಯ ದುರುದ್ದೇಶದಿಂದಾಗಿ ಇಂದಿಗೂ ಉದ್ಘಾಟನೆ ಮಾಡಿಲ್ಲ. ತರಕಾರಿ ವ್ಯಾಪಾರಿಗಳನ್ನು ತೆರವುಗೊಳಿಸಿ ಕಟ್ಟಿದ ಇಂಧಿರಾ ಕ್ಯಾಂಟಿ ಸ್ಥಾಪಿಸದರು ಉದ್ಘಾಟನೆ ಯಾಕೆ ವಿಳಂಬ? ನಿಜವಾಗಿ ಜನರ ಬಗ್ಗೆ ಕಾಳಜಿಯಾಗಿದ್ದರೆ ಎಲ್ಲವನ್ನು ಸಕಾಲಕ್ಕೆ ಮಾಡಬೇಕು ಎಂದರು.
ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಡಿಗ್ರಿ ಕಾಲೇಜು, ಪಿಯು ಮತ್ತು ಪ್ರೌಢ ಶಾಲೆಗಳಿದ್ದರು ಪ್ರವೇಶ ದ್ವಾರದಿಂದ ಮಳೆಯಾದ ಮೇಲೆ ರಸ್ತೆಯ ನೀರು ಒಳಹೊಕ್ಕು ಸಂಚಾರ ಕಡಿತವಾಗುತ್ತಿದೆ ಇಂಥ ಸಣ್ಣ ಸಮಸ್ಯೆಗಳು ಸಹ ಇಥ್ರ್ಯಕ್ಕೆ ಸಂಬಂಧಿತ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ದೂರಿದರು.
Comments are closed.