Shubhashaya News

ರಾಜ್ಯದ 224 ಶಾಸಕರಲ್ಲೇ ಬಿ.ಆರ್ ಪಾಟೀಲ್ ಅತ್ಯಂತ ಭ್ರಷ್ಟ : ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಗಂಭೀರ ಆರೋಪ

ಕಲಬುರ್ಗಿ : ರಾಜ್ಯದ 224 ಶಾಸಕರಲ್ಲೇ ಬಿ.ಆರ್ ಪಾಟೀಲ್ ಅತ್ಯಂತ ಭ್ರಷ್ಟ. ತಮ್ಮ ಭ್ರಷ್ಟಾಚಾರ ತಪ್ಪಿಸಿಕೊಳ್ಳಲು ಗ್ರಾಮ ಪಂಚಾಯತಿ ಅಧ್ಯಕ್ಷರ ಮೇಲೆ ಹಾಕುತ್ತಿದ್ದಾರೆ ಎಂದು ಕಲಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಗಂಭೀರವಾಗಿ ಆರೋಪಿಸಿದರು.

ಇಂದು ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ 224 ಶಾಸಕರಲ್ಲೇ ಬಿ.ಆರ್ ಪಾಟೀಲ್ ಅತ್ಯಂತ ಭ್ರಷ್ಟ. ತಮ್ಮ ಭ್ರಷ್ಟಾಚಾರ ತಪ್ಪಿಸಿಕೊಳ್ಳಲು ಗ್ರಾಮ ಪಂಚಾಯತಿ ಅಧ್ಯಕ್ಷರ ಮೇಲೆ ಹಾಕುತ್ತಿದ್ದಾರೆ. ಅವರು ಹೇಳಿದ ಎಲ್ಲಾ ಗ್ರಾಂಪಂ ಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರೇ ಇದ್ದಾರೆ ಅಲ್ಲದೇ ಶಾಸಕ ಬಿ.ಆರ್ ಲೆಟರ್ ಹೆಡ್ ನಲ್ಲೆ ಮನೆಗಳು ಮಂಜೂರಾಗಿವೆ.

ಇಲಾಖೆಯಿಂದ ಮನೆಗಳನ್ನು ಮಂಜೂರು ಮಾಡಿಕೊಂಡು ಬಂದಿದ್ದಾರೆ. ಆದರೆ ಈಗ ಶಾಸಕರು ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ತಾನು ಮಾತ್ರ ಸರಿ ಎಂದು ಬಿಂಬಿಸೋಕೆ ಈ ರೀತಿ ಮಾಡ್ತಿದ್ದಾರೆ. ಸಚಿವ ಸಂಪುಟ ಬದಲಾವಣೆ ಆಗ್ತಿದೆ ಅದಕ್ಕೆ ಈ ರೀತಿ ಮಾಡುತ್ತಿರಬಹುದು.ಬ್ಲ್ಯಾಕ್ ಮೇಲ್ ಮಾಡಿ ಹುದ್ದೆ ಪಡೆದುಕೊಳ್ಳುವುದಕ್ಕೆ ಮಾಡ್ತಿರಬಹುದು ಈ ಹಿಂದೆಯೂ ಬಿ.ಆರ್ ಪಾಟೀಲ್ ಅದೇ ರೀತಿ ಮಾಡಿದ್ದರಲ್ಲ ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಆರೋಪಿಸಿದರು.

Leave A Reply

Your email address will not be published.