Shubhashaya News

ವಸತಿ ಯೋಜನೆಯಡಿಯಲ್ಲಿ ಮನೆ ಹಂಚಿಕೆಗೆ ಲಂಚ ಪಡೆದ ಆರೋಪ ಸುಳ್ಳು : ಡಿಸಿಎಂ ಡಿಕೆ ಶಿವಕುಮಾರ್

ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್​ ಆಡಿಯೋ ವೈರಲ್ ಆದ ಬಳಿಕ ಸರ್ಕಾರಕ್ಕೆ ಬಿಗ್ ಡ್ಯಾಮೇಜ್ ಆಗಿದೆ. ಕಾಂಗ್ರೆಸ್​ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ ಎನ್ನುವ ಆರೋಪವನ್ನ ಅವರದ್ದೇ ಪಕ್ಷದ ಶಾಸಕರು ಮಾಡ್ತಿದ್ದು, ಸರ್ಕಾರ ಮುಜುಗರ ಉಂಟು ಮಾಡ್ತಿದೆ. ಈಗ ಈ ವಿಚಾರವಾಗಿ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಮಾತನಾಡಿದ್ದು ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಗೆ ಲಂಚ ಪಡೆದ ಆರೋಪ ಸುಳ್ಳು ಎಂದು ತಿಳಿಸಿದರು.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಸತಿ ಯೋಜನೆ ಅಡಿ ಮನೆ ಹಂಚಿಕೆಗೆ ಲಂಚ ಪಡೆದ ಆರೋಪ ಸುಳ್ಳು. ಗ್ರಾಮ ಸಭೆಯಲ್ಲಿ ಯಾರೋ ಒಬ್ಬರು ಹೇಳಿದರೆ ಅದು ಆಗುತ್ತಾ? ಗ್ರಾಮ ಪಂಚಾಯಿತಿಯವರೇ ಈ ಬಗ್ಗೆ ತೀರ್ಮಾನ ಮಾಡುವುದು. ಮಂತ್ರಿ ಹಾಗೂ ಸರ್ಕಾರಕ್ಕೂ ಏನು ವ್ಯತ್ಯಾಸ ಇದೆ ಅದೆಲ್ಲ ಸುಳ್ಳು. ಬಿ ಆರ್ ಪಾಟೀಲ್ ಗೆ ಸಂಪೂರ್ಣ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಶಾಸಕ ಬಿ ಆರ್ ಪಾಟೀಲ್ ಜೊತೆಗೆ ನಾನು ಈ ಕುರಿತು ಮಾತನಾಡುತ್ತೇನೆ ಎಂದು ರಾಮನಗರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.

Leave A Reply

Your email address will not be published.