ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಅಪ್ಸರಕೊಂಡ ಕಡಲ ಜೀವಧಾಮ ಘೋಷಣೆ, ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಉಚಿತ ಆರೋಗ್ಯ ವಿಮಾ ಯೋಜನೆ ಜಾರಿ ಸೇರಿದಂತೆ ಮಹತ್ವದ ನಿರ್ಧಾರಗಳಿಗೆ ಅನುಮೋದನೆ ನೀಡಲಾಯಿತು. ಆ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಇಂದಿನ ರಾಜ್ಯ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಟ್ಟು ಸಂಪುಟ ಸಭೆಯಲ್ಲಿ 26 ವಿಷಯಗಳ ಚರ್ಚೆ ನಡೆದಿದೆ. ಗಣಿಗಾರಿಕೆಯಲ್ಲಿ ನಡೆದ ಅಕ್ರಮದ ತನಿಖೆಗೆ ಸೃಜಿಸಲಾಗಿರುವ ತನಿಖಾ ಸಮಿತಿಯ ಅವಧಿ ವಿಸ್ತರಣೆ ಮಾಡಲಾಗುತ್ತಿದೆ. ವಿವರವಾದ ತಾಂತ್ರಿಕ ಮಾಹಿತಿ ಕಲೆ ಹಾಕಲು ಅವಕಾಶ ಆಗುವ ಹಿನ್ನೆಲೆಯಲ್ಲಿ ಒಂದು ವರ್ಷದ ಅವಧಿಗೆ ವಿಸ್ತರಣೆ ಆಗಿದೆ. ಅಪ್ಸರಕೊಂಡ ಕಡಲ ಜೀವಧಾಮ ಘೋಷಣೆ ಮಾಡಲಾಗುತ್ತಿದೆ.
ಹೊನ್ನಾವರದ ಸಮುದ್ರ ಪ್ರದೇಶದ ಆರು ಕಿ ಮೀ ದೂರದ ಪ್ರದೇಶವನ್ನ ವನ್ಯಧಾನಮವಾಗಿ ಘೋಷಣೆ ಮಾಡಲಾಗಿದೆ ಎಂದರು.
ಆರೋಗ್ಯ ಇಲಾಖೆಯ ಮೂರು ಲಕ್ಷ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ 5 ಲಕ್ಷದ ವರೆಗೆ ನಗದು ರಹಿತ ಆರೋಗ್ಯ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮಾಸಿಕ ಕಂತುಗಳಲ್ಲಿ ಯೋಜನೆಗೆ ಸಿಬ್ಬಂದಿಗಳಿಂದ 100 ರೂ ಸಂಗ್ರಹಕ್ಕೆ ತೀರ್ಮಾನಿಸಲಾಗಿದೆ. ಈ ಸೌಲಭ್ಯವು ಖಾಯಂ ಹಾಗೂ ಗುತ್ತಿಗೆ ನೌಕರರಿಗೂ ಸಿಗಲಿದೆ ಎಂದರು.
ಹಾವೇರಿಯ ಬಸಾಪುರವನ್ನ ಗೇಲುಗುಡ್ಡ ಬಸಾಪುರ ಎಂದು ಮರು ನಾಮಕರಣ ಮಾಡಲು ಕಂದಾಯ ಇಲಾಖೆ ನಿರ್ಧಾರಿಸಿದೆ. ಅನುಭವ ಮಂಟಪ ಕಾಮಗಾರಿ ಹಣ ಪರಿಷ್ಕರಣೆ ಮಾಡಲಾಗಿದೆ. ಆರುನೂರು ಕೋಟಿಯಿಂದ ಏಳುನೂರ ನಲ್ವತ್ತೆರಡು ಕೋಟಿ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಗಿದೆ. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ದುರ್ಗಮ ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಸೇವೆ ಜಾರಿಗೊಳಿಸಲಾಗುತ್ತಿದೆ. ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಸರ್ಕಾರದ ವಸತಿಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಏರಿಕೆ ಮಾಡಲು ಸಂಪುಟ ಅನುಮೋದಿಸಿದೆ. ಹಿಂದಿದ್ದ 10% ಏರಿಕೆ ಗೆ ಹೆಚ್ಚುವರಿ 5% ಏರಿಕೆ ಮಾಡಲಾಗುತ್ತಿದೆ. ಮೀಸಲಾತಿಗೆ ಸಂಪುಟ ಅನುಮೋದಿಸಿದೆ ಎಂದರು.
ಅಲ್ಪಸಂಖ್ಯಾತ ವರ್ಗಕ್ಕೆ ಈ ಮೀಸಲಾತಿ ಏರಿಕೆ ಮಾಡಲಾಗುತ್ತಿದೆ. ಕೇವಲ ಮುಸ್ಲೀಂಮರಿಗೆ ಮಾತ್ರ ಅಲ್ಲ. ಹೊಸ ಮೀಸಲಾತಿ ಜಾರಿಗೆ ಸಂಪುಟ ಒಪ್ಪಿಗೆ ಸಾಕು. ನಿಯಮ ಬದಲಾವಣೆ,ಕಾನೂನು ತರೋ ಅವಶ್ಯಕತೆ ಇಲ್ಲ. ಸಾಮಾಜಿಕ ನ್ಯಾಯದ ಅನುಸಾರವಾಗಿ ಈ ಮೀಸಲಾತಿ ನೀಡಲಾಗ್ತಿದೆ. ದಲಿತರ ಯೋಜನೆಗಳನ್ನ ಹೊರತು ಪಡಿಸಿ ಸರ್ಕಾರದ ಎಲ್ಲ ವಸತಿ ಯೋಜನೆಗಳಿಗೂ ಈ ಮೀಸಲಾತಿ ಅನ್ವಯವಾಗಲಿದೆ ಎಂಬುದಾಗಿ ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಕರ್ನಾಟಕದ ಮಾವಿಗೆ ಚಿತ್ತೂರಿನಲ್ಲಿ ಮಾವಿಗೆ ಅವಕಾಶ ಕೊಟ್ಟಿರಲಿಲ್ಲ. ಈ ಬಗ್ಗೆ ಸಂಪುಟದಲ್ಲಿ ಮುನಿಯಪ್ಪ ವಿಚಾರ ಪ್ರಸ್ತಾಪ ಮಾಡಿದ್ರು. ಈ ಬಗ್ಗೆ ಕೃಷಿ ಸಚಿವರಿಗೆ ಕೇಂದ್ರದ ಜೊತೆ ಮಾತನಾಡಲು ಹೇಳಿದ್ದೇವೆ. ಅಗತ್ಯ ನೆರವು ತರಲು ಕೇಳಲು ತಿಳಿಸಿದ್ದೇವೆ ಎಂದರು.
ನಂದಿ ಬೆಟ್ಟದಲ್ಲಿ ಸಂಪುಟ ಸಭೆಗಾಗಿ ಇಲಾಖೆಗಳಿಂದ ಅಗತ್ಯ ಮೆಮೋಗಳು ಬಂದಿಲ್ಲ. ಹೀಗಾಗಿ ಅದನ್ನ ಮುಂದಿನ ದಿನಗಳಲ್ಲಿ ಮಾಡಲಾಗತ್ತೆ. ಜುಲೈ 17 ರ ಆಸುಪಾಸಿನಲ್ಲಿ ಈ ಸಭೆ ನಡೆಯಲಿದೆ ಎಂದು ಹೇಳಿದರು.
Comments are closed.