Shubhashaya News

ಕುಡಿಯುವ ನೀರಿಗಾಗಿ ಧಂಗಾಪುರ ಗ್ರಾ.ಪಂ. ಎದುರು ಪ್ರತಿಭಟನೆ 

ಆಳಂದ: ಧಂಗಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕೋರಿ ಗ್ರಾಮ ಪಂಚಾಯತ್ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿ, ತಾಪಂ ಇಒ. ಮಾನಪ್ಪ ಕಟ್ಟಿಮನಿರವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

 

 

ಆಳಂದ: ತಾಲೂಕಿನ ಧಂಗಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಲ್ಬಣಗೊಂಡಿದ್ದು, ಗ್ರಾಮ ಸುಧಾರಣಾ ಸಮಿತಿಯ ನೇತೃತ್ವದಲ್ಲಿ   ಗ್ರಾಮ ಪಂಚಾಯತ್ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸಿದ್ದ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇ.ಒ.) ಮಾನಪ್ಪ ಕಟ್ಟಿಮನಿರವರಿಗೆ ಮನವಿ ಪತ್ರ ಸಲ್ಲಿಸಿದರು.

ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಜೆಜೆಎಂ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರು ಒದಗಿಸಬೇಕು, ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರ್ಮಿಕರಿಗೆ ಸಕಾಲಿಕವಾಗಿ ವೇತನ ಒದಗಿಸಬೇಕು, ಗ್ರಾಮ ಪಂಚಾಯತಿಯಲ್ಲಿ ಇರಿಸಿಕೊಂಡಿರುವ ಜಾಬ್ ಕಾರ್ಡ್‍ಗಳನ್ನು ಕಾರ್ಮಿಕರಿಗೆ ವಿತರಿಸಬೇಕು, ಭೂ ಸೇನಾ ನಿಗಮದಿಂದ 28 ಲಕ್ಷ ರೂ. ವೆಚ್ಚದಲ್ಲಿ ಮಹಿಳೆಯರಿಗಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ಶೌಚಾಲಯ ಕಾಮಗಾರಿ ಆರಂಭಿಸಬೇಕು ಎಂಬ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟರು. ಬೆಳಗ್ಗೆ 8:00 ರಿಂದ ಮಧ್ಯಾಹ್ನ 2:00 ರವರೆಗೆ ಪ್ರತಿಭಟನೆ ನಡೆಯಿತು.

ನಿಂಬರ್ಗಾ ಉಪ ತಹಸೀಲ್ದಾರ್ ಮಹೇಶ್, ಗ್ರಾಮಾಧಿಕಾರಿ ಪ್ರಭುಲಿಂಗಟ್ಟಿ, ಜೆಜೆಎಂ ಅಧಿಕಾರಿ ವಿ.ವಿ. ನಾಯಕ್, ಪಿಎಸ್‍ಐ ಇಂದುಮತಿ ಹಾಜರಿದ್ದರು.

ಇಒ ಮಾನಪ್ಪ ಕಟ್ಟಿಮನಿ ಅವರು ನೀರಿನ ಸಮಸ್ಯೆ ಮತ್ತು ಇನ್ನೂಳಿದ ಬೇಡಿಕೆಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಸೂಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಖಾಲಿ ಇರುವ ಕರ ಉಸೂಲಿಗಾರ (ಬಿಲ್ ಕಲೆಕ್ಟರ್) ಹುದ್ದೆಗೆ ನೇಮಕಾತಿ ನಡೆಸುವಂತೆ ಸೂಚಿಸಿದ ಅವರು, ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕವಾಗಿ ಖಾಸಗಿಯವರಿಂದ ನೀರು ಖರೀದಿಸಿ ಪೂರೈಸುವುದಾಗಿ, ಬೇಸಿಗೆಯ ನಂತರ ಶಾಶ್ವತ ಕ್ರಮಕ್ಕೆ ಜೆಜೆಎಂ ಕಾಮಗಾರಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಈ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಗ್ರಾಮ ಸುಧಾರಣಾ ಸಮಿತಿಯ ಅಧ್ಯಕ್ಷ ಈರಣ್ಣ ಝಾಳಕಿ, ಕಾರ್ಯದರ್ಶಿ ಚಂದ್ರಶೇಖರ್ ಶೇಗಜಿ, ವಿಜಯಲಕ್ಷ್ಮಿ ಝಾಳಕಿ, ಸುರಮಾದೇವಿ ಕಲ್ಯಾಣ, ರತ್ರಬಾಯಿ ಚಿಂಚೋಳಿ, ಮತಾಬಿ ಪಟೇಲ್, ಸುನಿಲ್ ಚಿಂಚೋಳಿ, ಶರಣಬಸಪ್ಪ ಪಡಸಲಗಿ, ವಿದ್ಯಾರ್ ಕುಂಬಾರ್, ಅಮೃತ ಮೇಲಕೆರಿ, ಶಿವಕುಮಾರ್ ಮೇಲಕೆರಿ, ಕಾಶಿನಾಥ್ ವಾಗ್ಮರೆ, ಕೃಷ್ಣ ಮೇಲಕೆರಿ, ಸಿದ್ದರಾಮ್ ದೊಡ್ಮನಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಪಿಡಿಒ ಮಂಜೂರು ಪಟೇಲ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ನಿಂಬರ್ಗಾ ಪೆÇಲೀಸ್ ಠಾಣೆಯ ಪಿಎಸ್‍ಐ ಇಂದುಮತಿ ಮತ್ತು ಸಿಬ್ಬಂದಿ ಬಿಗಿ ಭದ್ರತೆ ಕಲ್ಪಿಸಿದ್ದರು.

Comments are closed.

Don`t copy text!