Shubhashaya News

ಅಂಬೇವಾಡದಲ್ಲಿ ಭಾವೈಕ್ಯದ ಜಕ್ರಿಯಾ  ಉರುಸ್ ಜಾತ್ರೆ 3ರಿಂದ

ಆಳಂದ: ಅಂಬೇವಾಡ ಗ್ರಾಮದಲ್ಲಿನ ಭಾವೈಕ್ಯದ ಹಜರತ್ ಶೇಖ ಫಿರೀದ್ ಬಾಹೋದ್ದೀನ್ ಜಕ್ರಿಯಾರವರ ದರ್ಗಾವು ಉರುಸ್‍ಗೆ ಸಜ್ಜಾಗಿದೆ.

 

 

ಆಳಂದ: ತಾಲೂಕಿನ ಅಂಬೆವಾಡ ಗ್ರಾಮದಲ್ಲಿ ಭಾವೈಕ್ಯದ ಹಜರತ್ ಶೇಖ್ ಫರೀದ್ ಬಾಹೋದ್ದೀನ ಜಕ್ರಿಯಾರವರ ಉರುಸ್ ಜಾತ್ರಾ ಮಹೋತ್ಸವ ಮೇ 3 ರಿಂದ 5, ರವರೆಗೆ ನಡೆಯಲಿದೆ.

ಅಂಬೆವಾಡ ಗ್ರಾಮವು ಈ ಮೂರು ದಿನಗಳ ಕಾಲ ಧಾರ್ಮಿಕ ಸಂಭ್ರಮ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಕಳೆಗಟ್ಟಲಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ.  ಈ ಜಾತ್ರೆಯು ಧರ್ಮ, ಜಾತಿ, ವರ್ಗದ ಭೇದವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಸಾಮರಸ್ಯದ ಕೇಂದ್ರಬಿಂದುವಾಗಿದೆ. ಎಂದು ಜಾತ್ರಾ ಸಮಿತಿಯ ಹಿರಿಯಮುಖಂಡ ಸಿದ್ಧರಾಮ ದೇಶಮುಖ,   ರಫಿಕ್‍ಸಾಹಬೇಬ ಪಿರಜಾದೆ, ಹುಸೇನಭಾಷಾ ಸಾಹೇಬ ಪಿರಜಾದೆ ಅವರು ಜಂಟಿಯಾಗಿ ತಿಳಿಸಿದ್ದಾರೆ.

ಅವರು ಮಾತನಾಡಿ, “ಈ ಭಾವೈಕ್ಯದ ಜಾತ್ರೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹಜರತ್ ಶೇಖ್ ಫರೀದ್ ಸಾಹೇಬರ ದರ್ಶನ ಮತ್ತು ಆಶೀರ್ವಾದ ಪಡೆಯಬೇಕು,” ಎಂದು ಕೋರಿದ್ದಾರೆ.

ಮರಹೂಮ ಅ ರಜಾಕಸಾಹೇಬ ಪಿರಜಾದೆ ಸಮ್ಮುಖದಲ್ಲಿ ಮೇ 3, 2025 (ಶನಿವಾರ) ಸಂಧಲ ಗಂಧ ಮೆರವಣಿಗೆ ರಾತ್ರಿ 10:00 ಗಂಟೆಗೆ ಸಾಹೇಬರ ಮನೆಯಿಂದ ಜಾತ್ರೆಯ ಹೊರಟು ಬೆಳಗೆ ಬೆಳಿಗ್ಗೆ 4:00 ಗಂಟೆಯವರೆಗೆ ದರ್ಗಾಕ್ಕೆ ತಲುಪಿ ಸಾಹೇಬರ ಹಸ್ತದಿಂದ ಗಂಧ ಏರಿಸಲಾಗುತ್ತದೆ.ಈ ಸಂದರ್ಭದಲ್ಲಿ ಬಟ್ಟರಗಾ ದರ್ಗಾದ ಸೈಯದ್ ಭಾಷಾ ಸಾಹೇಬ ಉರ್ಫ್ ಸೈಯದ್ ಖುತುಬಿ ಹುಸೇನಿ ಸಜ್ಜಾದಾ ನಶೀನ ಅವರು ಆಗಮಿಸುವರು ಎಂದು ಹೇಳಿದರು.

ಮೇ 4 (ಭಾನುವಾರ) ದೀಪೆÇೀತ್ಸವ (ಚಿರಾಗ), ರಾತ್ರಿ 9:00ಗಂಟೆಗೆ ಜರಗುವುದು. ವಿಜಯಪುರ ಜಿಲ್ಲೆ ಬೇಗವಾಡಿ ಕಲಾವಿದೆ, ವಿದ್ಯಾಶ್ರೀ ಮಾಯಬಿನಾಲಾ ಮತ್ತು ಸುನ್ನಾಳದ ಕಲಾವಿದ ಮುಕ್ತುಮ್‍ಮಕಾನದಾರ ಅವರಿಂದ ಗೀಗಿ ಪದಗಳು ನಡಯಲಿವೆ.

ಮೇ 5, (ಸೋಮವಾರ), ಬೆಳಗ್ಗೆ 10:00 ಗಂಟೆಗೆ ಜಿಯಾರತ್ ನಡೆಯುವುದು. ಮಧ್ಯಾಹ್ನ 3:00ಗಂಟೆಗೆ ಜಂಗಿ ಪೈಲ್ವಾನರ ಕುಸ್ತಿಗಳು, ಮೊದಲು ಕುಸ್ತಿ ವಿಜೇತರಿಗೆ ಮರಹೂಮ ಅ. ರಜಾಕಸಾಹೇಬ ಪಿರಜಾದೆ ಇವರ ನೆನಪಿನ ಅಹ್ಮದಹುಸೇನ ಪಿರಜಾದೇ ಇವರಿಂದ ಟ್ರೋಪಿ ಮತ್ತು 25ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು 2ನೇ ಕುಸ್ತಿಗೆ ಸಿರಾಜ ಇಕ್ಬಾಲ ಪಟೇಲ ಇವರಿಂದ 11 ಸಾವಿರ ಬಹುಮಾನ 3ನೇ ಕುಸ್ತಿಗೆ ಅತ್ತಾ ಉಲ್ಲಾಪೈಲ್ವಾನ ಹೊಟಗಿಇವರಿಂದ ಟ್ರಾಫಿ ಬಹುಮಾನ ವಿತರಣೆ ನಡೆಯಲಿದೆ. ಈ ಮೂರುದಿನಗಳ ಜಾತ್ರೆಯಲ್ಲಿ ಎಂದಿನಂತೆ ಭಕ್ತಾದಿಗಳು ಭಾಗವಹಿಸಿ ದರ್ಶನ ಪಡೆಯಬೇಕು ಎಂದು ಅವರು ಕೋರಿದ್ದಾರೆ.

Leave A Reply

Your email address will not be published.