Shubhashaya News

ವಿದ್ಯುತ್ ವ್ಯತ್ಯಯ, ವೋಲ್ಟೇಜ್ ಏರಿಳಿತ ತಂದ ಫಜೀತಿ

ಆಳಂದ ಬಾಡಾವಣೆ ನಿವಾಸಿಗಳಿಗೆ ಹಾನಿ: ಪರಿಹಾರಕ್ಕೆ ದೂರು

ಆಳಂದ: ಪಟ್ಟಣದ ಶ್ರೀನಿವಾಸ ಕಾಲೋನಿ, ಜೈನಬ್ ಬಡಾವಣೆ ಮನೆಗಳ Àವಿದ್ಯತ್ ಸಂಪರ್ಕದಲ್ಲಿನ ಅವಘಡದಿಂದಾಗಿ ಬಳಕೆ ಸಾಮಗ್ರಿಗಳ ಸುಟ್ಟು ಹಾನಿಯಾದ ಪ್ರಯುಕ್ತ ನಿವಾಸಿಗಳು ಬೀದಿಗೆ ಬಂದು ಜೆಸ್ಕಾಂ ವಿರುದ್ಧ ಆಕ್ರೋಶ ಹೊರಹಾಕಿದರು.

ಆಳಂದ: ಗ್ರಾಹಕರ ವಿದ್ಯುತ್ ಬಳಕೆ ಸಾಮಗ್ರಿಗಳ ಸುಟ್ಟು ಹಾನಿಯಾದ ದೃಶ್ಯ.

ಅಳಂದ: ಪಟ್ಟಣದÀ ಜೈನಬ್ ಕಾಲೊನಿ ಮತ್ತು ಶ್ರೀನಿವಾಸ ಕಾಲೊನಿ, ಸಂಗಾ ಲೇಔಟ್‍ನಲ್ಲಿನ ವಿದ್ಯುತ್ ಪೂರೈಕೆ ಅತ್ಯಂತ ಅನಿಯಮಿತವಾಗಿದ್ದು, ತೀವ್ರವಾದ ವೋಲ್ಟೇಜ್ ಏರಿಳಿತದಿಂದ ಅನೇಕ ಮನೆಗಳಲ್ಲಿನ ವಿದ್ಯುತ್ ಸಾಧನಗಳು ಹಾನಿಗೊಳಗಾಗಿವೆ ಲಕ್ಷಾಂತರ ರೂಪಾಯಿ ಸಾಮಗ್ರಿಗಳ ಸುಟ್ಟು ಹಾನಿಯವಾಗಿವೆ ಪರಿಹಾರ ನೀಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಬಡಾವಣೆಯ ನಿವಾಸಿಗಳು ದೂರು ನೀಡಿದ್ದಾರೆ.
ಎಪ್ರಿಲ್ 8ರಂದು ಬೆಳಿಗ್ಗೆ 2.30ರಿಂದ 3.00ರ ನಡುವೆ ಹಾಗೂ ಎಪ್ರಿಲ್ 9ರಂದು ಬೆಳಿಗ್ಗೆ 4.30ರಿಂದ 5.30ರ ನಡುವೆ ನಡೆದ ವಿದ್ಯುತ್ ವ್ಯತ್ಯಯದಿಂದ ಇನ್ವೆರ್ಟರ್, ಫ್ಯಾನ್, ಟ್ಯೂಬ್‍ಲೈಟ್, ಬೋರ್‍ವೆಲ್ ಕಂಟ್ರೋಲ್ ಪ್ಯಾನಲ್, ಅಡಾಪ್ಟರ್ ಹಾಗೂ ಒಳಗಿನ ವೈಯರಿಂಗ್ ಕೂಡ ನಾಶವಾಗಿದೆ. ರಕ್ಷಣಾ ಸಾಧನಗಳಿದ್ದರೂವೂ ಈ ವಿಪರ್ಯಾಸದಿಂದ ತಪ್ಪಿಸಿಕೊಳ್ಳಲಾಗಲಿಲ್ಲವೆಂದು ನಿವಾಸಿಗಳು ಅಳಲುತೋಡಿಕೊಂಡಿದ್ದಾರೆ.
ಇದರ ಬಗ್ಗೆ ಹಲವು ಬಾರಿ ಜೆÉಸ್ಕಾಂಗೆ ದೂರು ನೀಡಿದರೂ ಸ್ಪಂದನೆ ಇಲ್ಲದೆ ನಿರ್ಲಕ್ಷ್ಯ ನಡೆಸಲಾಗಿದೆ. ಇನ್ನೂ ಹಲವು ಮನೆಗಳಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಿದ್ದು, ನಿವಾಸಿಗಳಿಗೆ ಸಾವಿರಾರು ರೂಪಾಯಿಗಳ ನಷ್ಟವಾಗಿದೆ. ಯಾವುದೇ ರಕ್ಷಣೆ ಇಲ್ಲದೆ ವಿದ್ಯುತ್ ನೀಡುವ ಮೂಲಕ, ಜೆಸ್ಕಾಂ ವಿದ್ಯುತ್ ಕಾಯ್ದೆ, 2003ರ ಉಲ್ಲಂಘನೆ ಮಾಡುತ್ತಿದೆ ಎಂದು ನಿವಾಸಿ ವಿಜಯ ಎಂ. ಕಟಕೇ ಸೇರಿ ಬಡಾವಣೆಯ ನಿವಾಸಿಗಳು ಆರೋಪಿಸಿ ಆಕ್ರೋಶ ಹೊರಹಾಕಿದರು.
ಇದರ ಕುರಿತು ಜೆಸ್ಕಾಂ ಅಧಿಕಾರಿಗಳಿಂದ ಸ್ಪಷ್ಟನೆ ಹಾಗೂ ಪರಿಹಾರ ನೀಡಬೇಕು. ಹಾನಿಗೊಳಗಾದ ಜನರಿಗೆ ಪರಿಹಾರ ನೀಡಬೇಕು ಮತ್ತು ಇಂತಹ ಘಟನೆಗಳು ಪುನರಾವೃತವಾಗದಂತೆ ತ್ವರಿತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ಇಲ್ಲದಿದ್ದರೆ ಕಾನೂನು ಮೊರೆಹೋಗಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಾಕ್ಸ್: ಹಾನಿಗೊಳಗಾದ ನಿವಾಸಿಗಳ ಪಟ್ಟಿ:
ವಿಜಯ ಎಂ. ಕಟಕೇ ಜೈನಬ್ ಕಾಲೊನಿ 45203 ಇನ್ವೆರ್ಟರ್, ಫ್ಯಾನ್, ಬೋರ್‍ವೆಲ್ ಸ್ಟಾರ್ಟರ್, ಅಡಾಪ್ಟರ್ 2, ಬಲ್ಬ್, ಒಳಗಿನ ವೈಯರಿಂಗ್ ₹15,000, ಬಸವರಾಜ ಎಲ್. ಚೌದರಿ 35907 ಫ್ಯಾನ್, ಸ್ವಿಚ್ ಬೋರ್ಡ್ ₹3,000, ಸಂದೀಪ ಧಾಗೆ 59237 ಇನ್ವೆರ್ಟರ್, ಫ್ಯಾನ್₹8,000, ಚಂದ್ರಕಾಂತ ವಾಡೆ, 53876 54” ಐಇಆ ಟಿವಿ, ವಾಟರ್ ಫಿಲ್ಟರ್, ಫ್ಯಾನ್ ₹80,000, ನ್ಯಾಯವಾದಿ ಮುರಳಿಧರ ವಿ. ಎಕ್ಬೋಟ್ 50458 ಎಕ್ಸ್ಟೆನ್ಶನ್ ಬಾಕ್ಸ್ ₹1,000, ವಿವೇಕಾನಂದ ಎನ್. ಎಕ್ಬೋಟ್‍ಫ್ಯಾನ್, ವಾಶಿಂಗ್ ಮೆಷೀನ್, ಅಡಾಪ್ಟರ್ ₹7,000
ಚಕ್ರಪಾಣಿ ಜಿ. ಶೂರೆ, ಮಿಕ್ಸರ್, ಫ್ಯಾನ್, ವಾಟರ್ ಫಿಲ್ಟರ್ ಮೋಟರ್₹8,000 , ಚಂದ್ರಕಾಂತ ಎಂ. ಎಕ್ಬೋಟ್, 33283 ಫ್ಯಾನ್ 2 ₹5,000, ಶರಣಪ್ಪಫ್ಯಾನ್ ₹1,500, ಸೇರಿ ಹಲವು ನಿವಾಸಿಗಳಲ್ಲಿನ ವಿದ್ಯುತ್ ಬಳಕೆಯ ಸಾಮಗ್ರಿಗಳ ಸುಟ್ಟಿ ಹಾನಿಯಾಗಿದೆ. ಪರಿಹಾರ ನೀಡುವಂತೆ ವಿಜಯ ಕಟಕೆ ಅವರು ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ.

Leave A Reply

Your email address will not be published.