Shubhashaya News

ಭೀಮಜ್ಯೋತಿ ಶಾಲೆ 7ನೇ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ: ಕಾಣಿಕೆ

ಆಳಂದ: ನರೋಣಾ ಗ್ರಾಮದ ಭೀಮ ಜ್ಯೋತಿ ಪ್ರಾಥಮಿಕ ಶಾಲೆ ವಿದ್ಯಾರ್ಥೀಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲೆಗೆ ಅಗತ್ಯ ಸಾಮಗ್ರಿಗಳ ದಾನ ನೀಡಿದ ಸುಭಾಷ ಡಾಂಗೆ ಅವರಿಗೆ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

ಆಳಂದ: ತಾಲೂಕಿನ ನರೋಣಾ ಗ್ರಾಮದಲ್ಲಿನ ಅನುದಾನಿತ ಭೀಮ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಬಿಳ್ಕೊಡುಗೆ ಸಮಾರಂಭವು ನೆರವೇರಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಸುಭಾμï ಡಾಂಗೆ, ಚಂದ್ರಕಾಂತ್ ಕೋರೆ ಹಾಗೂ ನಾಗಪ್ಪ ಎಸ್. ದೇವಂತಗಿ ಅವರು ವಿದ್ಯಾರ್ಥಿಗಳಿಗೆ ಉದ್ದೇಶಿಸಿ ಮಾತನಾಡಿದರು. ಅವರು ಶಿಕ್ಷಣದ ಮಹತ್ವ, ಶಿಸ್ತು ಮತ್ತು ಸತತ ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸುವ ಬಗ್ಗೆ ಪ್ರೇರಣಾತ್ಮಕವಾಗಿ ಮಾತನಾಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸಂಸ್ಥೆಯ ಖಜಾಂಚಿ ಶಿಲ್ಪಾ ಶಿರೂರಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಬುರ್ಗಿಯ ತಾಲೂಕು ಸಂಚಾಲಕ ಸುಭಾμï ಡಾಂಗೆ ಭಾಗವಹಿಸಿದ್ದರು. ಅತಿಥಿಗಳಾಗಿ ಶಿವಪುತ್ರ ರಾಗಿ, ಪ್ರಭು ಶಿರೂರಕರ್, ಚಂದ್ರಕಾಂತ್ ಕೋರೆ, ವಿಜಯಕುಮಾರ್ ಮೇಲ್ಕೇರಿ, ಬಾಬುರಾವ್ ಹಾಗೂ ಶಾಲೆಯ ಮುಖ್ಯ ಗುರುಗಳಾದ ನಾಗಪ್ಪ ಎಸ್. ದೇವಂತಗಿ ಉಪಸ್ಥಿತರಿದ್ದರು.
ಶಾಲೆಯ ಸಿಬ್ಬಂದಿಗಳಾದ ಅರುಣ್ ಕುಮಾರ್ ಭೈರಗೊಂಡ, ರವಿ ರಾಗಿ, ಶಿವರಾಜ್ ಯವತೆ, ನಂದಿತಾ ಹಾಗೂ ಭಾಗ್ಯಶ್ರೀ ಇಟಿಕಾರ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ, ಮಕ್ಕಳ ಪಾಲಕರು ಮತ್ತು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸುಭಾμï ಡಾಂಗೆ ಅವರು ಸಂಸ್ಥೆಗೆ ಎರಡು ಮೈಕ್ ಮತ್ತು ಸ್ಪೀಕರ್‍ಗಳನ್ನು ಕಾಣಿಕೆಯಾಗಿ ನೀಡಿದ ಪ್ರಯುಕ್ತ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.
ನಂದಿತಾ ಬುಕ್ಕಾ ನಿರೂಪಿಸಿದರು, ಭಾಗ್ಯಶ್ರೀ ಇಟಿಕಾರ್ ಸ್ವಾಗತಿಸಿದರು, ಮತ್ತು ನಾಗಪ್ಪ ಎಸ್. ದೇವಂತಗಿ ವಂದಿಸಿದರು.

Leave A Reply

Your email address will not be published.