Shubhashaya News

16 ಜನರಿಗೆ ಉಚಿತ ಕನ್ನಡಕ ವಿತರಣೆ

ಆಳಂದ: ಕಡಗಂಚಿಯಲ್ಲಿ ನಡೆದ ಉಚಿತ ನೇತ್ರ  ಶಸ್ತ್ರ ಚಿಕಿತ್ಸೆ ಬಳಿಕ ಕನ್ನಡಕವನ್ನು ಫಾ. ವಿಲಿಯಂ ಮಿರಾಂದ ಕನ್ನಡಕ ವಿತರಿಸದರು.

ಆಳಂದ: ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ನ ಘಟಕ ಕಾರ್ಮೆಲ್ ಸನ್ನಿಧಿ ಸಮಾಜ ಸೇವಾ ಸಂಸ್ಥೆ ಕಡಗಂಚಿ, ದ್ರಷ್ಟಿ ಕಣ್ಣಿನ ಆಸ್ಪತ್ರೆ ಕಲಬುರ್ಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಕಲಬುರ್ಗಿ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳ ಕಛೇರಿ ಅಳಂದ್ ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ದೃಷ್ಟಿ ಸಮಸ್ಯೆ ಹೊಂದಿದ್ದ ಅಳಂದ್ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಹದಿನಾರು ಬಡ ಜನರಿಗೆ ಬೈಫೆÇೀಕಲ್ ಕನ್ನಡಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಹಾಗೂ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಫಾ. ವಿಲಿಯಂ ಮಿರಾಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಜೆ.ವಿ.ಕೆ ಮೇಡಂ ಶ್ರೀಮತಿ ರೇಣುಕಾ, ಸೇವಾ ಪ್ರತಿನಿಧಿ ಶ್ರೀಮತಿ ಸುವರ್ಣ, ಬ್ರ. ಮೆಲ್ರಿಕ್ ಹಾಗೂ ಇತರರು ಉಪಸ್ಥಿತರಿದ್ದರು.

Leave A Reply

Your email address will not be published.