ಅಂಗವಿಕಲರ ನೌಕರರ ಸಂಘದ ಅಧ್ಯಕ್ಷರಾಗಿ ನಂದೂರಕರ್ ನೇಮಕ
ಚಿತ್ತಾಪುರ: ಕರ್ನಾಟಕ ರಾಜ್ಯ ಸರ್ಕಾರಿ ಅಂವಿಕಲರ ನೌಕರರ ಸಂಘದ ಚಿತ್ತಾಪುರ ತಾಲೂಕು ಘಟಕಕ್ಕೆ ಅಧ್ಯಕ್ಷರನ್ನಾಗಿ ಶಿಕ್ಷಕ ದೇವಪ್ಪ ನಂದೂರಕರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ದಿಲೀಪಸಿಂಗ್, ಪ್ರಧಾನ ಕಾರ್ಯದರ್ಶಿ ಸಂತೋಷ ಧಾಯಗೋಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಂಘದ…
ಬೆಂಕಿಯಲ್ಲಿ ಮಿಂದ ಮಿಸುನಿಯರು ಕೃತಿ ಲೋಕಾರ್ಪಣೆ 27 ರಂದು
ಚಿತ್ತಾಪುರ: ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚಣೆ ಅಂಗವಾಗಿ ಡಾ. ಪುಟ್ಟಮಣಿ ದೇವಿದಾಸ ರಚಿಸಿದ ಬೆಂಕಿಯಲ್ಲಿ ಮಿಂದ ಮಿಸುನಿಯರು ಕೃತಿ ಲೋಕಾರ್ಪಣೆ ಹಾಗೂ ಕೊರೊನಾ ವಾರಿಯರ್ಸ್‍ಗಳಿಗೆ ಅಭಿನಂದನಾ ಸಮಾರಂಭವನ್ನು ಪಟ್ಟಣದ…
ವಿದ್ಯಾರ್ಥಿ ಜೀವನದಲ್ಲಿ ಕೌಶಲ್ಯ ಬೆಳೆಸಿಕೊಳ್ಳಿ: ಸಾಲಿಮನಿ
ಚಿತ್ತಾಪುರ: ಪಟ್ಟಣದ ಆರ್.ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಜೀವನ ಕೌಶಲ್ಯ ಹಾಗೂ ಯುವ ಸ್ಪಂದನ ಕಾರ್ಯಕ್ರಮವನ್ನು ಕಲಬುರಗಿ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕ ಮಮತಾ ರಾಜೋಳಕರ್ ಉದ್ಘಾಟಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕೌಶಲ್ಯ…
ಈಕೆಯ ಹೆಸರು ಸ್ಮೀಜಾ.. ಕೇರಳದ ಲಾಟರಿ ಮಾರಾಟ ಮಾಡುವ ಯುವತಿ..
ರವಿವಾರ ಸಂಜೆ ಡ್ರಾ ಆಗಬೇಕಾಗಿದ್ದ ಆರು ಕೋಟಿಯ 12 ಲಾಟರಿಗಳು ರವಿವಾರ ಮಧ್ಯಾಹ್ನನದವರೆಗೂ ಮಾರಾಟವಾಗದೆ ಸ್ಮೀಜಾ ಅವರ ಬಳಿ ಉಳಿದಿತ್ತು.. ಆಗ ಹಲವರಿಗೆ ಕರೆ ಮಾಡಿ ಲಾಟರಿ ಖರೀದಿಸುವಂತೆ ಆಕೆ ಒತ್ತಾಯಿಸಿದಳು.. ಪಿ ಕೆ ಚಂದ್ರನ್ ಎಂಬ ವ್ಯಕ್ತಿ ಕೊನೆಯ ನಂಬರ್ 6142 ಇರುವ ಲಾಟರಿ ಟಿಕೆಟನ್ನು…
ಮಾರ್ಚ್ 24ರಂದು ಬಾಲಕಾರ್ಮಿಕ ಜಾಗೃತಿ ರಥಕ್ಕೆ ಚಾಲನೆ
ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನೇಮಕಾತಿ ವಿರುದ್ಧದ ಜಾಗೃತಿ ರಥಕ್ಕೆ” ಬುಧವಾರ ಮಾರ್ಚ್ 24ರಂದು ಬೆಳಿಗ್ಗೆ 11 ಗಂಟೆಗೆ ಚಿಂಚೋಳಿ ತಾಲೂಕು ನ್ಯಾಯಾಲಯದ ಆವರಣದಲ್ಲಿ ಚಿಂಚೋಳಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ವಿಜಯಕುಮಾರ ಎಸ್.ಜಟ್ಲಾ ಅವರು…
ಶಾಸಕರಿಂದ ಅಂಗನವಾಡಿ ಕೇಂದ್ರ ಉದ್ಘಾಟನೆ
ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಶ್ರೀನಿವಾಸ ಸರಡಗಿ ‘ಎ’ ವಲಯದ ಇಟಗಾ (ಅ) ಒಂದನೇ ಅಂಗನವಾಡಿ ಕೇಂದ್ರದ ಹೊಸ ಕಟ್ಟಡವನ್ನು ಕಲಬುರಗಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ರವಿವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಮನೆಯೇ ಮೊದಲ…
ಮುಖ್ಯಮಂತ್ರಿ ರೈತ ಸಮುದಾಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ: ಸಿದ್ದುಗೌಡ
ಚಿತ್ತಾಪುರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರೈತ ಸಮುದಾಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲ್‍ಪುರಕರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಮಠ ಮಂದಿರಗಳಿಗೆ ಬಜೆಟ್ ಮಂಡನೆ ಬಳಿಕವೂ ಅನುದಾನ…
ಕೋವಿಡ್ ಲಸಿಕೆ ಭಯವಿಲ್ಲದೇ ಪಡೆಯಿರಿ- ಹರ್ಷಾನಂದ ಗುತ್ತೇದಾರ
ಆಳಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣ ಮತ್ತು ಮಂಡಲ ಪದಾಧಿಕಾರಿಗಳ ವತಿಯಿಂದ ಹಮ್ಮಿಕೊಂಡಿದ್ದ ಕೋರೋನಾ ಲಸಿಕೆ ಜಾಗೃತಿ ಅಭಿಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಗೆ ಲಸಿಕೆ ನೀಡಲಾಯಿತು.
ಕೋರೋನಾ ರೋಗಕ್ಕೆ ಭಾರತದಲ್ಲೇ ತಯಾರಿಸಿದ ಮದ್ದು ಇಂದು…
ಕೋವಿಡ್ ಲಸಿಕೆ ಜಾಗೃತಿ ಮೂಡಿಸಲು ಮನವಿ
ಕಲಬುರಗಿ: ದೇಶದ ಕೆಲವು ರಾಜ್ಯದಲ್ಲಿ ಕೊರೊನಾ ಸೊಂಕು ಹರಡುವಿಕೆಯು ಇನ್ನಷ್ಟು ಹೆಚ್ಚುವುದನ್ನು ತಡೆಯುವುದಕ್ಕಾಗಿ ದೇಶದ ಕೆಲವು ರಾಜ್ಯದ ಸ್ಥಳಗಳಲ್ಲಿ ಲಾಕ್ ಡೌನ್ ಮತ್ತು ಕಪ್ಯೂ೯ ವಿಧಿಸಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಮತ್ತು ಕಪ್ಯೂ೯ ವಿಧಿಸದಿರುವುದು ಉತ್ತಮ ನಿರ್ಧಾರ…
ಲಾಕ್ ಡೌನ್ ಅನಿವಾರ್ಯವಿದೆ ತೆಗನೂರ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ರವರ ಕರೆಗೆ ಓಗೊಟ್ಟು ಇಡೀ ದೇಶ 22-3-2020 ರಂದು ಜನತಾ ಕರ್ಪೂ ಯಶಸ್ವಿಯಾಗಿ ಕೈಗೊಂಡಿತ್ತು. ತಮ್ಮ ನಾಯಕರಿಗೆ ಗೌರವ ಕೊಟ್ಟು ಅವರ ಕರೆಯನ್ನು ಒಂದು ಆಜ್ಞೆಯಂತೆ ನಮ್ಮ ಜನಸಮುದಾಯ ಪಾಲಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಮತ್ತೊಂದಿಲ್ಲ ಎಂದು ಕರ್ನಾಟಕ…