Shubhashaya News

ರುದ್ರವಾಡಿ ಗ್ರಾಮಸ್ಥರಿಂದ ಆಡಳಿತಸೌಧ ಮುಂದೆ ಪ್ರತಿಭಟನೆ ಇಂದು

ಅಧಿಕಾರಿಗಳಿಂದಲೇ ಬಸವೇಶ್ವರ ಪ್ರತಿಮೆ ತೆರವು ವಿವಾದ

ಆಳಂದ: ರುದ್ರವಾಡಿ ಗ್ರಾಮದಲ್ಲಿ ಸ್ಥಾಪಿಸಿದ ಐದು ಅಡಿ ಎತ್ತರದ ಪ್ರತಿಮೆಯನ್ನು ತೆರವುಗೊಳಿಸಿದ ಸ್ಥಳ.

ಆಳಂದ: ರುದ್ರವಾಡಿ ಗ್ರಾಮದಲ್ಲಿ ತೆರವುಗೊಳಿಸಿದ ಬಸವೇಶ್ವರ ಪ್ರತಿಮೆಯನ್ನು ಮರುಸ್ಥಾಪಿಸಿ, ಜಮೀನಿನ ಸರ್ವೇ ಪ್ರಕ್ರಿಯೆ ಸಂಪೂರ್ಣ ಇತ್ಯರ್ಥವಾಗುವವರೆಗೆ ಪ್ರತಿಮೆಯ ಯಥಾಸ್ಥಿತಿ ಕಾಪಾಡಬೇಕೆಂದು ಆಗ್ರಹಿಸಿ ಆಳಂದ ತಾಲೂಕು ಆಡಳಿತ ಸೌಧಮುಂದೆ ಸೋಮವಾರ (ಅ.18ರಂದು), ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಿವಪ್ರಕಾಶ ಹೀರಾ ತಿಳಿಸಿದ್ದಾರೆ.
ಪ್ರಕಟಿಸಿದ ಪತ್ರಿಕಾ ಹೇಳಿಕೆಯಲ್ಲಿ ಅವರು, ಆಗಸ್ಟ್ 11, 2025ರಂದು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಸವೇಶ್ವರ ಪ್ರತಿಮೆಯನ್ನು ಪ್ರತಿμÁ್ಠಪಿಸಲಾಗಿತ್ತು. ಆದರೆ ಕೆಲವು ಮತೀಯ ಶಕ್ತಿಗಳು ಇದು ಅಲ್ಪಸಂಖ್ಯಾತ ಸಮುದಾಯದ ಜಮೀನು ಎಂಬ ಆಕ್ಷೇಪಣೆ ಸಲ್ಲಿಸಿ ಪ್ರತಿಮೆ ತೆರವುಗೊಳಿಸಲು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ತಹಸೀಲದಾರರು ಗ್ರಾಮಕ್ಕೆ ಬಂದು ಎಲ್ಲಾ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿ, ಸರ್ವೇ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು ಎಂದು ತಿಳಿಸಿದರು.
ಆದರೆ ಆಗಸ್ಟ್ 14ರಂದು ಬೆಳಿಗ್ಗೆ ತಾಲೂಕು ಸರ್ವೇಯರ್ ಅಕ್ಷಯ ಹಾಗೂ ಕಂದಾಯ ನಿರೀಕ್ಷಕ ಅಲ್ಲಾವುದ್ದೀನ್ ಅವರು ಗ್ರಾಮಕ್ಕೆ ಬಂದು ಸಭೆ ನಡೆಸಿ, ಜಾಗದಲ್ಲಿ ಕಟ್ಟಡ ಇರುವುದರಿಂದ ತಕ್ಷಣ ಸಾಕಳಿ (ಚೈನ್) ಮುಖಾಂತರ ಸರ್ವೇ ಸಾಧ್ಯವಿಲ್ಲ, ಮಶೀನ್ ಮೂಲಕ ಸರ್ವೇ ಮಾಡಲು ಒಂದು ವಾರ ಅವಧಿ ಬೇಕು ಎಂದು ಸ್ಪಷ್ಟಪಡಿಸಿದರು. ಈ ಪ್ರಸ್ತಾಪಕ್ಕೆ ಎಲ್ಲಾ ಸಮುದಾಯದವರು ಒಪ್ಪಿಕೊಂಡಿದ್ದರು ಎಂದು ಹೇಳಿದರು.
ಆದರೆ ಅದೇ ದಿನ ಸಂಜೆ 5 ಗಂಟೆಗೆ ತಹಸೀಲದಾರರು ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಅವರು ಯಾರಿಗೂ ಮಾಹಿತಿ ನೀಡದೇ ಏಕಾಏಕಿ ಗ್ರಾಮಕ್ಕೆ ಬಂದು ಪ್ರತಿಮೆಯನ್ನು ತೆರವುಗೊಳಿಸಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇರಿಸಿದ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಇದು ಎಲ್ಲಾ ಸಮುದಾಯದ ಜನರ ಭರವಸೆಗೆ ದ್ರೋಹವμÉ್ಟೀ ಅಲ್ಲ, ಗ್ರಾಮದಲ್ಲಿ ಸೌಹಾರ್ದ ವಾತಾವರಣ ಕೆಡಿಸುವಂತಿದೆ ಎಂದು ಶಿವಪ್ರಕಾಶ ಹೀರಾ ಅವರು ಆರೋಪಿಸಿದ್ದಾರೆ.
ಅಂತಿಮವಾಗಿ, ಜಮೀನು ಸರ್ವೇ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೆ ಬಸವೇಶ್ವರ ಪ್ರತಿಮೆಯನ್ನು ಮರು ಪ್ರತಿμÁ್ಠಪಿಸಿ, ಯಥಾಸ್ಥಿತಿ ಕಾಪಾಡುವಂತೆ ಆಗ್ರಹ ಆಗ್ರಹಿಸಿ ಪಟ್ಟಣದ ತಾಲೂಕು ಆಡಳಿತಸೌಧ ಮುಂದೆ ಗ್ರಾಮಸ್ಥರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

Comments are closed.

Don`t copy text!